ನೆರೆಪೀಡಿತ ಅಂತರ ಪ್ರದೇಶದಲ್ಲಿ ಬೆಳಾಲು ಗೌಡರ ಯಾನೆ ಒಕ್ಕಲಿಗರ ಸಂಘದಿಂದ ಶ್ರಮದಾನ

ಬೆಳಾಲು: ಬೆಳಾಲು ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ, ಯುವ ವೇದಿಕೆ, ಮಹಿಳಾ ವೇದಿಕೆ ವತಿಯಿಂದ ಅತಿವೃಷ್ಠಿಗೊಳಗಾಗಿರುವ ಚಾರ್ಮಾಡಿಯ ಅರಣೆಪಾದೆ ಆನಂದ ಗೌಡ ಮತ್ತು ಹರೀಶ್ ಎಂಬವರ ಹಾನಿಗೊಳಗಾದ ಅಡಿಕೆ ತೋಟದಲ್ಲಿ ಗ್ರಾಮದ ಸುಮಾರು 50ಕ್ಕೂ ಮಿಕ್ಕಿ ಯುವಕರು, ಹಿರಿಯರು ಮತ್ತು ಮಹಿಳೆಯರ ತಂಡ ಕರಸೇವೆ ಮೂಲಕ ಕೃಷಿಕ ಸಂತ್ರಸ್ತರಿಗೆ ನೆರವಾಗುವ ಕಾರ್ಯ ಮಾಡಲಾಯಿತು.
ಈ ಶ್ರಮದಾನದ ಮೂಲಕ ಸಾಮಾಜಿಕ ಕಳಕಳಿಯ ಆಶಯದಂತೆ ನೊಂದವರ ಬಾಳಿಗೆ ಬೆಳಕಾಗುವ ವಿನೂತನ ಕಾರ್ಯದಲ್ಲಿ ತೊಡಗಿಸಿಕೊಂಡಿತು. ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಮ ಸಮಿತಿ ಅಧ್ಯಕ್ಷ ಸುರೇಂದ್ರ ಗೌಡ, ಕಾರ್ಯದರ್ಶಿ ಕರಿಯಣ್ಣ ಗೌಡ, ಯುವ ವೇದಿಕೆ ಅಧ್ಯಕ್ಷ ಮಹೇಶ್ ಪುಳಿತ್ತಡಿ, ಮಹಿಳಾ ವೇದಿಕೆ ಅಧ್ಯಕ್ಷೆ ಭವಾನಿ, ಕಾರ್ಯದರ್ಶಿ ಲೀಲಾ, ಪದಾಧಿಕಾರಿಗಳಾದ ಧರ್ಮೇಂದ್ರ ಕುಮಾರ್, ಮಾಧವ ಗೌಡ, ಮುರಳೀಧರ ಕುರ್ಡಾಡಿ, ಗೋಪಾಲ ಉರೆಜ್ಜ, ಪೆರಣ ಗೌಡ, ರಾಜೇಶ್ ಗೌಡ, ನೇಮಣ್ಣ ಗೌಡ, ಯಶೋಧರ ಗೌಡ, ಸದಾಶಿವ ಗೌಡ, ಶ್ರೀನಿವಾಸ ಗೌಡ ಗಣಪನಗುತ್ತು, ಶ್ರೀನಿವಾಸ ಗೌಡ ಕೊಲ್ಲಿಮಾರು, ರಮಿತ್, ಹರಿಪ್ರಸಾದ್ ಅರಣೆಮಾರು, ಸಮಿತಿ ಸದಸ್ಯರು ಹಾಗೂ ಸ್ವಜಾತಿ ಬಾಂಧವರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.