ಬಜಾಜ್ ಮೆಕ್ಸಿಮಾ ಎಲ್‌ಪಿಜಿ ಮಾರುಕಟ್ಟೆಗೆ ಬಿಡುಗಡೆ

Advt_NewsUnder_1
Advt_NewsUnder_1

ಬೆಳ್ತಂಗಡಿ: ಸುಪ್ರಿಂ ಆಟೋ ಡೀಲರ್‍ಸ್ ಮಂಗಳೂರು ಹಾಗೂ ಸುಪ್ರೀಂ ಆಟೋ ಡೀಲರ್‍ಸ್ ಬೆಳ್ತಂಗಡಿ ಇವರ ಪ್ರಾಯೋಜಕತ್ವದಲ್ಲಿ ಬೆಳ್ತಂಗಡಿ ಅಂಬೇಡ್ಕರ್ ಭವನದ ವಠಾರದಲ್ಲಿ ‘ನೂತನ ಬಜಾಜ್ ಮೆಕ್ಸಿಮಾ ಎಲ್‌ಪಿಜಿ’ ಮಾರುಕಟ್ಟೆಗೆ ಬಿಡುಗಡೆ ಸಮಾರಂಭ ನಡೆಯಿತು.
ನೂತನ ಆಟೋ ರಿಕ್ಷಾದ ಮೊದಲ ಗ್ರಾಹಕರಾದ ಮೈಮುನಾ ಮೊಹಮ್ಮದ್ ಗೌಸ್ ರವರಿಗೆ ಕೀ ಹಸ್ತಾಂತರಿಸಲಾಯಿತು. ಹಿರಿಯ ಆಟೋ ಚಾಲಕ ಮೊದಿನಬ್ಬ ಆಸೆ ಆಟೋ ಪಾರ್ಕ್‌ನ ಕಾರ್ಯದರ್ಶಿ ನವೀನ್, ದಿನೇಶ್ ಬೆಳ್ತಂಗಡಿ ಇವರುಗಳನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಬೆಳ್ತಂಗಡಿ ಸುಪ್ರೀಂ ಆಟೋ ಡೀಲರ್‍ಸ್ ಶಾಖೆಯ ತನಿಯಪ್ಪ ಪೂಜಾರಿ ಸ್ವಾಗತಿಸಿ, ಸುಪ್ರೀಂ ಆಟೋ ಡೀಲರ್‍ಸ್ ಮಂಗಳೂರು ಸೇಲ್ಸ್ ಮ್ಯಾನೇಜರ್ ಯೋಗೀಶ್ ಕಾರ್ಯಕ್ರಮ ನಿರೂಪಿಸಿದರು. ಬೆಳ್ತಂಗಡಿ ಶಾಖೆಯ ಸರ್ವಿಸ್‌ನ ಶಿವರಾಮ ವಂದಿಸಿದರು. ಬಜಾಜ್ ಆಟೋ ಕಂಪೆನಿಯ ಕು| ಪ್ರಣಾಳಿ ದಂಡೇಕರ್ ಸಹಕರಿಸಿದರು. ಆಟೋ ಚಾಲಕರು, ಗ್ರಾಹಕರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.