ಗೇರುಕಟ್ಟೆ ತೇಜಸ್ವಿ ಮಹಿಳಾ ಮಂಡಲ ಭಜನಾ ಕಾರ್ಯ ಕ್ರಮ,ಆಟೋಟ ಸ್ಪರ್ಧೆ

ಗೇರುಕಟ್ಟೆ:ಲ್ಲಿಯ ತೇಜಸ್ವಿ ಮಹಿಳಾ ಮಂಡಲ(ರಿ),ಶ್ರೀ ಕೃಷ್ಣ ಮಹಿಳಾ ಭಜನಾ ಮಂಡಳಿ ಇದರ ಸಂಯುಕ್ತ ಆಶ್ರಯದಲ್ಲಿ ಬೆಳಿಗ್ಗೆ ಭಜನಾ ‌ಕಾರ್ಯಕ್ರಮ,ಮಧ್ಯಾಹ್ನ ಮಹಾ ಪೂಜೆ,ಪ್ರಸಾದ ವಿತರಣೆ ಮತ್ತು ಆಟೋಟ ಸ್ಪರ್ಧೆ ಇತ್ತೀಚೆಗೆ  ಭಜನಾ ಮಂದಿರ ವಠಾರದಲ್ಲಿ ನಡೆಯಿತು. 6 ವರ್ಷದೊಳಗಿನ ಮಕ್ಕಳಿಗೆ ಕೃಷ್ಣ ವೇಷ,15 ವರ್ಷದೊಳಗಿನ ಮಕ್ಕಳಿಗೆ ಭಕ್ತಿ ಗೀತೆ ಹಾಗೂ ಸಾರ್ವಜನಿಕರಿಗೆ ಮಡಕೆ ಒಡೆಯುವ ಸ್ಪರ್ಧೆಗಳು ನಡೆಯಿತು. ಶ್ರೀ ಕೃಷ್ಣ ಮಹಿಳಾ ಭಜನಾ ಮಂಡಳಿ ಅಧ್ಯಕ್ಷೆ ದೇವಕಿ, ಕಾರ್ಯದರ್ಶಿ  ವಿಮಲಾಕ್ಷಿ ಕೆ.ಬಿ.ಶ್ರೀ ಕೃಷ್ಣಷ್ಟಾಮಿ ಆಚರಣೆ ಸಮಿತಿ ಅಧ್ಯಕ್ಷೆ ಯಶವಂತಿ, ಕಾರ್ಯದರ್ಶಿ  ಜ್ಯೋತಿ ಮಧ್ವ ರಾಜ್ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಸಹಕರಿಸಿದರು. ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.