ಉಜಿರೆ : ರಬ್ಬರ್ ಸೊಸೈಟಿ ಪತ್ರಿಕಾಗೋಷ್ಠಿ

ಉಜಿರೆ :ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣೆ ಸಹಕಾರಿ ಸಂಘ ಉಜಿರೆ ಪ್ರಗತಿ ವರ್ಷದಲ್ಲಿ 203.13 ಕೋಟಿ ವ್ಯವಹಾರ ಮಾಡಿ 23.80 ಲಕ್ಷ ರೂ.ಲಾಭ ಗಳಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಶ್ರೀಧರ್.ಜಿ ಭಿಡೆ ಹೇಳಿದರು ಉಜಿರೆ ಕೇಂದ್ರ ಕಚೇರಿಯಲ್ಲಿ (ಆ .31) ರಂದು ಇಂದು  ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಬ್ಬರ್ ಖರೀದಿಯಲ್ಲಿ 1,61,46 ಟನ್ ಸಾಧನೆ ತೋರಿದ್ದು ಇದು ಏಷ್ಯಾದಲ್ಲೇ ನಂಬರ್ 1  ಆಗಿದ್ದೇವೆ ಎಂದು ತಿಳಿಸಿದರು. ಶೀಘ್ರದಲ್ಲೆ ಪಾಣಾಜೆಯಲ್ಲಿ ರಬ್ಬರ್  ಖರೀದಿ ಕೇಂದ್ರ ತೆರೆಯಲಾಗುವುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷ ಎನ್ ಪದ್ಮನಾಭ ಮಾಣಿಂಜ, ನಿರ್ದೇಶಕರಾದ ಜಯಶ್ರೀ ಡಿ.ಎಂ, ಚಿನ್ನಮ್ಮ, ಕೆ ರಾಮ ನಾಯ್ಕ, ಅಬ್ರಹಾಂ ಬಿ.ಎಸ್, ಸೋಮನಾಥ ಬಂಗೇರ, ಇಚ್ಚಿಲ ಸುಂದರ ಗೌಡ, ಗ್ರೇಸಿಯನ್ ವೇಗಸ್, ಅನಂತ ಭಟ್ ಮಚ್ಚಿಮಲೆ, ವಿ.ವಿ ಅಬ್ರಾಹಂ, ಹೆಚ್ ಪದ್ಮ ಗೌಡ, ಡಾ. ಶಶಿಧರ ಡೋಂಗ್ರೆ, ರಬ್ಬರ್ ಪ್ರೊಡೆಕ್ಷನ್ ಕಮಿಷನರ್ ಕುರುವಿಲ್ಲ ಜೋಸೆಫ್, ವಿಶೇಷ ಆಹ್ವಾನಿತರಾದ ಕೆ.ಜೆ ಆಗಸ್ಟಿನ್ ಮತ್ತು ಬಾಲಕೃಷ್ಣ ಗೌಡ ಕೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜು ಶೆಟ್ಟಿ ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.