ಕೊಯ್ಯೂರು ಶಾಲೆಯಲ್ಲಿ ಡಾ.ಸಲೀಂ ಅಲಿ ಇಕೋ ಕ್ಲಬ್ ಕಾರ್ಯಕ್ರಮ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕೊಯ್ಯೂರು: ಇಲ್ಲಿಯ ಕೊಯ್ಯೂರು ಸರಕಾರಿ ಪ್ರೌಢಶಾಲೆಯಲ್ಲಿ ಡಾ.ಸಲೀಂ ಅಲಿ ಇಕೋ ಕ್ಲಬ್‌ನಿಂದ 2019-20ನೇ ಸಾಲಿನಲ್ಲಿ ನಡೆಯುವ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಮಾಹಿತಿ ಕಾರ್ಯಕ್ರಮ  ಜರುಗಿತು.
ಖ್ಯಾತ ಸಸ್ಯ ಶಾಸ್ತ್ರಜ್ಞ ದಿನೇಶ್ ನಾಯಕ್ ಸಸ್ಯಶ್ಯಾಮಲ ವಿಟ್ಲ ಇವರು ಶಾಲೆಯಲ್ಲಿ ಬಿಲ್ವಗಿಡ ನೀಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಸ್ಯಗಳು ಸೂಕ್ಷ್ಮಸಂವೇದಿಯಾಗಿದ್ದು ಪರಿಸರದ ಅಜೈವಿಕ ಘಟಕಗಳ ಏರುಪೇರುಗಳನ್ನು ತಡೆಯುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆದುದರಿಂದ ಸ್ಥಳೀಯ ಸಸ್ಯಗಳನ್ನು ಬೆಳೆಸಲು ಹೆಚ್ಚು ಉತ್ತೇಜನ ನೀಡಬೇಕು ಎಂದು ಸ್ಲೈಡ್‌ಶೋ ಮೂಲಕ ವಿವಿಧ ಗಿಡಗಳ ಬಗ್ಗೆ ಮಾಹಿತಿ ನೀಡಿದರು.
ಶಾಲಾ ಮುಖ್ಯೋಪಾಧ್ಯಾಯ ರಾಧಾಕೃಷ್ಣ ತಚ್ಚಮೆ ಅಧ್ಯಕ್ಷತೆ ವಹಿಸಿ, ಶಾಲೆಯಲ್ಲಿ ಸಾಮಾಜಿಕ ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ರಾಶಿವನ, ನಕ್ಷತ್ರವನ ಹಾಗೂ ನವಗ್ರಹ ವನಗಳನ್ನು ರಚಿಸಿ ಈ ಮೂಲಕ ವಿದ್ಯಾರ್ಥಿಗಳಲ್ಲಿ ಗಿಡಗಳ ಬಗ್ಗೆ ಒಲವು ಮೂಡಿಸಲಾಗುವುದೆಂದರು.
ಇಕೋಕ್ಲಬ್ ನಾಯಕ ಯತೀಶ್, ಕಾರ್ಯದರ್ಶಿ ಅಶ್ವಿನ್ ಈ ವರ್ಷ ನಡೆಸುವ ಇಕೋ ಕ್ಲಬ್ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ಶಿಕ್ಷಕ ಅನಂತರಾಮ ನೂರಿತ್ತಾಯ ಪ್ರಸ್ತಾಪಿಸಿ, ಬೇಬಿ ಸ್ವಾಗತಿಸಿ, ಸುಧಾಕರ ಶೆಟ್ಟಿ ವಂದಿಸಿದರು. ಮಾಲಿನಿ ಹೆಗಡೆ, ದೀಪಿಕ, ರಾಮಚಂದ್ರ ದೊಡಮನಿ, ಸಂತೋಷ್ ಕುಮಾರ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.