HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಧರ್ಮಸ್ಥಳದಲ್ಲಿ ಜೀವವಿಮಾ ನಿಗಮ ಉಡುಪಿ ವಿಭಾಗ ಸಾಧಕರ ಸಮಾವೇಶ

 

ಧರ್ಮಸ್ಥಳ: ಭಾರತೀಯ ಜೀವ ವಿಮಾ ನಿಗಮ ಉಡುಪಿ ವಿಭಾಗದ ಪ್ರತಿನಿಧಿಗಳ ಸಮಾವೇಶ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ದರುಶನ ಸ್ಪರ್ಧೆಯಲ್ಲಿ ಸಾಧನೆಗೈದ ಪ್ರತಿನಿಧಿಗಳಿಗೆ ಪುರಸ್ಕಾರ ಧರ್ಮಸ್ಥಳದ ಮಹೋತ್ಸವ ಸಭಾಭವನಲ್ಲಿ ಜರುಗಿತು.


ಉಡುಪಿ ವಿಭಾಗದ ಸೀನಿಯರ್ ಡಿವಿಜನಲ್ ಮೆನೇಜರ್ ಕೆ ಅನಂತ ಪದ್ಮನಾಭ ಪ್ರಸ್ತಾವಿಕವಾಗಿ ಮಾತನಾಡಿ, ಹೊಸ ವ್ಯವಹಾರ ಮಾಡಲು ಪ್ರತಿನಿಧಿಗಳಿಗೆ ಸಾಕಷ್ಟು ಅವಕಾಶಗಳಿದ್ದು ಎಲ್ಲಾ ಪ್ರತಿನಿಧಿಗಳು ಉತ್ತಮ ವ್ಯವಹಾರದೊಂದಿಗೆ ತಮ್ಮ ಭವಿಷ್ಯ ರೂಪಿಸಬೇಕು ಎಂದರು. ವಿಭಾಗದ ಮಾರ್ಕೆಟಿಂಗ್ ಮೆನೆಜರ್ ವೆಂಕಟ್ರಮಣ ಶಿರೂರು, ಸೇಲ್ಸ್ ಮೆನೇಜರ್ ಸದಾನಂದ ಕಾಮತ್ ಮಾತನಾಡಿದರು.


ಇದೇ ಸಂದರ್ಭದಲ್ಲಿ ಉತ್ತಮ ವ್ಯವಹಾರ ಮಾಡಿದ ಪ್ರತಿನಿಧಿಗಳನ್ನು ಗೌರವಿಸಲಾಯಿತು. ಉಡುಪಿ ವಿಭಾಗದ ಪ್ರತಿನಿಧಿಗಳು, ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು. ಉಡುಪಿ ವಿಭಾಗದ ಮಾರ್ಕೆಟಿಂಗ್ ಆಡಳಿತಾಧಿಕಾರಿ ಆರ್.ಡಿ ಯೋಗೇಂದ್ರ ಸಾಧನೆಗೈದ ಪ್ರತಿನಿಧಿಗಳ ಪಟ್ಟಿ ವಾಚಿಸಿದರು. ಬೆಳ್ತಂಗಡಿ ಉಪಗ್ರಹ ಶಾಖಾಧಿಕಾರಿ ದೇವಪ್ಪ ನಾಕ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.