ಬೆಳ್ತಂಗಡಿ ಸೋಶಿಯಲ್ ಮೀಡಿಯಾದಲ್ಲಿ ಈ ವಾರ

Advt_NewsUnder_1
Advt_NewsUnder_1
Advt_NewsUnder_1

ಭಿಕ್ಷುಕಿ ಈಗ ಸ್ಟಾರ್ ಗಾಯಕಿ

ಲಕ್ ಅಂದ್ರೆ ಇದೆ ಇರಬೇಕು. ಪಶ್ಚಿಮ ಬಂಗಾಳದ ರಾಣಾಘಾಟ್ ರೈಲು ನಿಲ್ದಾಣದಲ್ಲಿ ತಮ್ಮ ಸುಶ್ರಾವ್ಯ ಕಂಠದಿಂದ ಹಾಡಿ ಅದರಿಂದ ಬರುವ ಹಣದಿಂದ ಜೀವನ ಸಾಗಿಸುತ್ತಿದ್ದ ರಾನು ಮೊಂಡಲ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸೆನ್ಸೇಶನ್ ಆಗಿದ್ದಾರೆ. ಅತೀಂದ್ರ ಚಕ್ರವರ್ತಿ ಎಂಬವರು ರಾನು ಮೊಂಡಲ್ ಹಾಡುತ್ತಿದ್ದ ವಿಡಿಯೋವನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ನಂತರ ಈಕೆಗೆ ಸೋನಿ ಸೂಪರ್ ಸ್ಟಾರ್ ಸಿಂಗರ್‌ನಲ್ಲಿ ಹಾಡುವ ಅವಕಾಶ ಲಭಿಸಿತು.ಇದರ ತೀರ್ಪುಗಾರರ ಪೈಕಿ ಒಬ್ಬರಾಗಿದ್ದ ಬಾಲಿವುಡ್ ಸಂಗೀತ ನಿರ್ದೇಶಕ ಹಿಮೇಶ್ ರೇಶಮೀಯಾ, ತಮ್ಮ ಮುಂಬರುವ ಚಿತ್ರದಲ್ಲಿ ಹಾಡುವ ಅವಕಾಶ ನೀಡಿದ್ದು, ಅವರು ಹಾಡಿದ ತೆರೇ ಮೇರೇ ಕಹಾನಿ ಎಂಬ ಹಾಡು ರಾತ್ರೋರಾತ್ರಿ ಸೂಪರ್ ಹಿಟ್ ಆಗಿದೆ. ಇದೀಗ ಖ್ಯಾತ ನಟ ಸಲ್ಮಾನ್ ಖಾನ್ ಈಕೆಗೆ 55 ಲಕ್ಷ ಮೌಲ್ಯದ ಮನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ನಡುವೆ ಇಷ್ಟು ವರ್ಷ ಬಿಟ್ಟು ಹೋದ ಮಗಳು ತಾಯಿಗೆ ಹಣ ಬಂದ ತಕ್ಷಣ ಓಡಿ ಬಂದಿದ್ದಾಳೆ.

ಪ್ರಿಯಾ ವಾರಿಯರ್ ಬಳಿಕ ಈಗ ವೈಷ್ಣವಾ…

ಕಳೆದ ಬಾರಿ ಕಣ್ಣು ಹೊಡೆದು ಪ್ರಿಯಾ ವಾರೀಯರ್ ಖ್ಯಾತಿ ಪಡೆದಿದ್ದರು. ಆ ಸಾಲಿಗೆ ಈ ಬಾರಿ ಕೇರಳದ ವೈಷ್ಣವಾ.ವಿ ಸೇರಿದ್ದಾರೆ. ಈ ಬಾರಿಯ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಕೃಷ್ಣನ ವೇಷ ತೊಟ್ಟು ನೃತ್ಯ ಮಾಡುವ ಆ ನೃತ್ಯದಲ್ಲಿ ಅವರ ಮುಖದ ಭಾವನೆ ಹೊರ ಹೊಮ್ಮಿದ ವಿಡಿಯೋ ವೈರಲ್ ಆಗಿದ್ದು ಕೇರಳದ ಗೋಕುಲ್ ದಾಸ್ ಎಂಬವರು ಈಕೆಯ ಫೋಟೋವನ್ನು ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ.

 

 

ಮರಳಿ ಬಾರದೂರಿಗೆ ನಿಮ್ಮ ಪಯಣ……

ಅನಂತ್‌ಕುಮಾರ್, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಇವರು ಮೂವರು ಲಗೇಜ್ ಬ್ಯಾಗ್‌ನೊಂದಿಗೆ ಎಲ್ಲಿಗೂ ಹೊರಟವರಾಗಿ ಒಟ್ಟಿಗೆ ಕುಳಿತ ಫೋಟೋ ವೈರಲ್ ಆಗಿದ್ದು. ದುರಾದೃಷ್ಟವೆಂದರೆ ಈ ಮೂವರು ಈಗ ನಮ್ಮೊಂದಿಗಿಲ. 1 ವರ್ಷದ ಅವಧಿಯಲ್ಲಿ ಮೂವರು ನಮ್ಮನಗಲಿ ಬಾರದ ಲೋಕಕ್ಕೆ ತೆರಳಿದ್ದಾರೆ. ಇದೀಗ ಅವರ ಅಭಿಮಾನಿಗಳು ಈ ಫೋಟೋವನ್ನು ಹರಿಯಬಿಟ್ಟು ತಮ್ಮ ದುಃಖವನ್ನು ಹಂಚಿಕೊಂಡಿದ್ದಾರೆ.

 

 

 

 

 

ಆರ್ಥಿಕ ಕುಸಿತ

ಭಾರತದಲ್ಲಿ ಎಲ್ಲ ಔದ್ಯೋಗಿಕ ರಂಗಗಳಲ್ಲಿ ತೀವ್ರ ಆರ್ಥಿಕ ಕುಸಿತ ಉಂಟಾಗಿದ್ದು ಸಣ್ಣಪುಟ್ಟ ಇಂಡಸ್ಟ್ರೀಗಳು ಮುಚ್ಚಲಾರಂಭಿಸಿದೆ. ಆರ್ಥಿಕ ಹಿನ್ನಡೆಯ ಹೊಡೆತ ಹಳ್ಳಿ ಹಳ್ಳಿಗೂ ತಟ್ಟಿದ್ದು ಡಾಲರ್ ಮುಂದೆ ರೂಪಾಯಿ ಕುಸಿತವಾಗಿರುವ ಬಗ್ಗೆ ಮೇಲಿನ ಚಿತ್ರವನ್ನು ಯಾರೋ ಟ್ರೋಲ್ ಮಾಡಿದ್ದಾರೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.