ಅನುಗ್ರಹ ಸಂಸ್ಥೆಯ ನೂತನ ಏಮ್ಸ್ ಕಾಲೇಜಿನಲ್ಲಿ ಹೊಸ 3 ಕೋರ್ಸ್‌ಗಳ ಬಿಡುಗಡೆ

ಬೆಳ್ತಂಗಡಿ: ಇಲ್ಲಿಯ ಅನುಗ್ರಹ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಏಮ್ಸ್  (ಅನುಗ್ರಹ ಇನ್ಸ್ ಟ್ಯೂಟ್ ಆಫ್ ಮೇನೇಜ್ ಮೆಂಟ್ ಏಂಡ್ ಸ್ಟಡೀಸ್) ಕಾಲೇಜಿನಲ್ಲಿ ಹೊಸ 3 ಕೋರ್ಸುಗಬಿಡುಗಡೆ ಕಾರ್ಯಕ್ರಮವು ಇಂದು (ಆ.29) ಜರುಗಿತು.


ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ. ವಸಂತ ಬಂಗೇರ, ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ  ಕೆ.ಕೆ ಶಾಹುಲ್ ಹಮೀದ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಎನ್. ಪೂವಣಿ, ವಾಣಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಿ.ಯದುಪತಿ ಗೌಡ, ಅನುಗ್ರಹ ಸ್ಕೂಲ್ ಬುಕ್ ಕಂಪನಿಯ ನಿರ್ದೇಶಕ ಅಶ್ರಫ್ ಫೈಝಿ, ಆಡಳಿತ ಮಂಡಳಿ ಸದಸ್ಯ ಇಸುಬು ಸವಣಾಲು ಮತ್ತು ರಶೀದ್ ನಈಮಿ, ಅನುಗ್ರಹ ಸಂಸ್ಥೆಯ ಪ್ರಾಂಶುಪಾಲ ತಲ್‌ಹತ್ ಎಂ.ಜಿ, ತಾ.ವಕೀಲರ ಸಂಘದ ಅಧ್ಯಕ್ಷ ಸೇವಿಯರ್ ಪಾಲೇಲಿ, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಟಿ ಸೆಬಾಸ್ಟಿಯನ್, ಸೋಜಾ ಎಲೆಕ್ಟ್ರಾನಿಕ್ಸ್ ಮಾಲಕ ಅಲ್ಫೋನ್ಸ್ ಫ್ರಾಂಕೋ, ಡಿಕೆಆರ್‌ಡಿಎಸ್ ನಿರ್ದೇಶಕ ಫಾ. ಬಿನೋಯ್, ಎಸ್ ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಅಕ್ಬರ್ ಬೆಳ್ತಂಗಡಿ, ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಸಂಚಾಲಕ ನಾಮದೇವ ರಾವ್, ಹಿಮಾಲಯ ಗ್ರೂಪ್ಸ್ ನ ಮಾಲಕ ಲೇನ್ಸಿ ಎ ಪಿರೇರಾ, ಎಸ್ ಡಿಪಿಐ ತಾ| ಅಧ್ಯಕ್ಷ ನವಾಝ್ ಶರೀಫ್ ಕಟ್ಟೆ, ತಾ.ಪತ್ರಕರ್ತರ ಸಂಘದ ಕಾರ್ಯದರ್ಶಿ ಅಶ್ರಫ್ ಆಲಿಕುಂಞಿ, ಸ್ಪಂದನ ಪೊಲಿ ಕ್ಲಿನಿಕ್ ಮಾಲಕ ಪಿ.ಸಿ ಮೆಲ್ಬಿ, ಎಸ್ ವೈಎಸ್ ಸೆಂಟರ್ ಅಧ್ಯಕ್ಷ ಎಸ್.ಎಂ ಕೋಯ ತಂಙಳ್, ಎಸ್ಸೆಸ್ಸೆಫ್ ಈಸ್ಟ್ ಝೋನ್ ಪ್ರತಿನಿಧಿ ಸಿದ್ದೀಕ್ ಪರಪ್ಪು, ಅಲ್ ಖಾದಿಸ ಕಾವಳಕಟ್ಟೆ ಸಂಸ್ಥೆಯ ಆಡಳಿತಾಧಿಕಾರಿ ರಶೀದ್ ಮಡಂತ್ಯಾರು, ಪಿಎಫ್ ಐ ತಾ| ಅಧ್ಯಕ್ಷ ಇಕ್ಬಾಲ್ ಬಂಗೇರಕಟ್ಟೆ, ಎಸ್.ಕೆ ಎಸ್‍.ಜೆ.ಎಮ್ ಪ್ರಧಾನ ಕಾರ್ಯದರ್ಶಿ ಶಂಸುದ್ದೀನ್ ದಾರಿಮಿ, ಸವಣಾಲು ಮಸೀದಿ ಖತೀಬ್ ಕೆ.ಟಿ ಅಬ್ದುಲ್ ಹಮೀದ್ ಸಅದಿ, ಸಹಾಯಕ ಧರ್ಮ‍ಗುರು ಉಮರುಲ್ ಫಾರೂಕ್ ಮುಸ್ಲಿಯಾರ್,  ಪ್ರೀಂಟ್ ಪೇಲೇಸ್ ಮಾಲಿಕ್ ಜೋಬಿನ್ ಕೆ.ಜೆ, ಸವಣಾಲು ಶಾಲಾ ಶಿಕ್ಷಕ ಮಂಜ ನಾಯ್ಕ್, ಕಲಾವಿದ ಜಿತೇಶ್, ಪತ್ರಕರ್ತರಾದ ಮನೋಹರ್ ಬಳೆಂಜ, ಚೈತ್ರೇಶ್ ಇಳಂತಿಲ, ಕಿರಣ್ ಸರಪಾಡಿ  ಮೊದಲಾದವರು ಉಪಸ್ಥಿತರಿದ್ದರು.


ಈ ಎಲ್ಲಾ ಅತಿಥಿಗಳು ಸಂಸ್ಥೆ ನೂತನವಾಗಿ ಪ್ರಾರಂಭಿಸಿದ ಕೋರ್ಸುಗಳಾದ ಡಿಪ್ಲೋಮಾ ಏಂಡ್ ಪಿ.ಜಿ ದಿಪ್ಲೋಮಾ ಟೀಚರ್ಸ್ ಟ್ರೈನಿಂಗ್, ಡಿಪ್ಲೋಮಾ ಇನ್ ಫಯರ್ ಏಂಡ್ ಸೇಫ್ಟಿ ಇಂಜಿನಿಯರಿಂಗ್ ಟೆಕ್ನಿಕ್ಸ್, ಮತ್ತು ಡಿಪ್ಲೋಮಾ ಇನ್ ಹೆಲ್ತ್ ಏಂಡ್ ಪ್ಯಾರಾ ಮೆಡಿಕಲ್ ಕೋರ್ಸುಗಳ ಬಿಡುಗಡೆ ಮಾಡಿದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.