ಕಾಪಿನಡ್ಕ ಗೆಳೆಯರ ಬಳಗ, ಶ್ರೀ ಹರಿ ಭಜನಾ ಮಂಡಳಿಯಿಂದ ಮೊಸರು ಕುಡಿಕೆ ಉತ್ಸವ

ಕಾಪಿನಡ್ಕ: ಸಮಾಜದಲ್ಲಿ ನಡೆಯುವ ಧಾರ್ಮಿಕ ಆಚರಣೆಗಳಿಂದ ನಮ್ಮ ಸಂಸ್ಕೃತಿ, ಆಚಾರ-ವಿಚಾರ, ಸಂಸ್ಕಾರಗಳು ಬೆಳೆಯಲು ಸಾಧ್ಯ. ಇದರಿಂದ ಸಮಾಜದಲ್ಲಿ ಒಗ್ಗಟ್ಟು ಮೂಡಿ, ಊರಿನ ಪ್ರಗತಿಯಾಗುತ್ತದೆ ಎಂದು ಪ್ರಖರ ವಾಗ್ಮಿ, ಹೈಕೋರ್ಟ್ ನ್ಯಾಯವಾದಿ ಪ್ರಜ್ವಲ್ ಬಂಗೇರ ಹೇಳಿದರು.
ಅವರು  ಕೆಳಗಿನ ಮನೆ ಕೆಮಣಬೈಲು ಮೈದಾನ ಕಾಪಿನಡ್ಕ ಗಾಂಧಿನಗರದಲ್ಲಿ ಗೆಳೆಯರ ಬಳಗ ಮತ್ತು ಶ್ರೀ ಹರಿ ಭಜನಾ ಮಂಡಳಿ ವತಿಯಿಂದ ನಡೆದ 22ನೇ ವರ್ಷದ ಮೊಸರು ಕುಡಿಕೆ ಉತ್ಸವದ ಕೆಸರುಗದ್ದೆ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪಿನಡ್ಕ ಗೆಳೆಯರ ಬಳಗದ ಗೌರವಾಧ್ಯಕ್ಷ ಕೆ. ವಸಂತ ಸಾಲಿಯಾನ್ ವಹಿಸಿ ಮಾತನಾಡಿ, ಶ್ರೀ ಕೃಷ್ಣ ಪರಮಾತ್ಮನ ಆದರ್ಶ ವ್ಯಕ್ತಿತ್ವಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡು ಸಮಾಜದಲ್ಲಿ ಉತ್ತಮ ನಾಗರೀಕರಾಗಿ ಬೆಳೆಯಬೇಕು ಎಂದರು.
ವೇದಿಕೆಯಲ್ಲಿ ಮಂಗಳೂರು ಉದ್ಯಮಿ ರವಿ ಪೂಜಾರಿ ಮಜಲು, ಸುರೇಶ್ ಪೂಜಾರಿ ಜೈಮಾತಾ ನಾಲ್ಕೂರು, ಅಳದಂಗಡಿ ಸಹಕಾರಿ ಸಂಘದ ನಿರ್ದೇಶಕ ಜಿನ್ನಪ್ಪ ಪೂಜಾರಿ ಗಾಂಧಿನಗರ, ಮೂಡಬಿದ್ರೆ ಮೈಟ್‌ನ ಅಸಿಸ್ಟೆಂಟ್ ಪ್ರೊಫೆಸರ್ ರಂಜಿತ್ ಹೆಚ್.ಡಿ, ಪ್ರಗತಿಪರ ಕೃಷಿಕರಾದ ವಿಶ್ವನಾಥ ಹೊಳ್ಳ ನಾಲ್ಕೂರು, ತಿಮ್ಮಪ್ಪ ಪೂಜಾರಿ ದೇವಸ, ಮುತ್ತಪ್ಪ ಪೂಜಾರಿ ಕಾಪಿನಡ್ಕ, ಸುದ್ದಿ ಬಿಡುಗಡೆ ವಾರಪತ್ರಿಕೆಯ ವರದಿಗಾರ ಸಂತೋಷ್ ಪಿ ಕೋಟ್ಯಾನ್ ಉಪಸ್ಥಿತರಿದ್ದರು.
ಬಳಂಜ ಗ್ರಾ.ಪಂ ಸದಸ್ಯ ಹೇಮಂತ್ ಪೂಜಾರಿ, ಜಯಂತ್ ಹೆಗ್ಡೆ ಕಾಪಿನಡ್ಕ, ಕಾಪಿನಡ್ಕ-ಬಳಂಜ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಲಕ್ಷ್ಮಣ ಮೂರ್ತಿ, ಯೋಗೀಶ್ ಪುಣೆ ಕಾಪಿನಡ್ಕ, ಬೆಳ್ತಂಗಡಿ ಭಾರತ್ ಅಟೊ ಕಾರ್‍ಸ್ ಲಿಮಿಟೆಡ್‌ನ ಗೋಪಾಲ ಆಚಾರ್ಯ, ವಿಠಲ ಪೂಜಾರಿ ಕೋಂಕಡ್ಡ, ಸುರೇಶ್ ಪೂಜಾರಿ ಕೋಂಕಡ್ಡ, ನವೀನ್ ಅಲ್ಲಿಂತ್ಯಾರು ಗೌರವ ಉಪಸ್ಥಿತರಿದ್ದರು.
ಸಂತೋಷ್ ಕುಮಾರ್ ಸ್ವಾಗತಿಸಿ, ಕಾಮಿಡಿ ಕಿಲಾಡಿ ಖ್ಯಾತಿಯ ಹಿತೇಶ್ ಕಾಪಿನಡ್ಕ ನಿರೂಪಿಸಿ, ಇಂದು ಶೇಖರ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.