HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ನಿವೃತ್ತ ಗ್ರಾಮೀಣ ಅಂಚೆ ಪಾಲಕ ಬಿ.ಪ್ರಮೋದ್ ಕುಮಾರ್‌ರಿಗೆ ಅಭಿನಂದನೆ

ಸಮಾಜಕ್ಕೆ ನೀಡುವ ಕೊಡುಗೆಯಿಂದ ಜೀವನ ಶ್ರೇಷ್ಠ : ಸಾಲಿಯಾನ್

ಬಳಂಜ: ಸಮಾಜದಲ್ಲಿ ವಿಶ್ವಾಸಾರ್ಹ ವ್ಯಕ್ತಿಗಳಿಂದ ಸಂಘ ಸಂಸ್ಥೆಗಳು ಅಭಿವೃದ್ಧಿಗೊಳ್ಳುತ್ತದೆ ಎಂಬುದಕ್ಕೆ ಬಿ.ಪ್ರಮೋದ್ ಕುಮಾರ್‌ರವರೇ ಸಾಕ್ಷಿ. ಗ್ರಾಮೀಣ ಅಂಚೆ ಪಾಲಕರಾಗಿ ತನ್ನ ಕರ್ತವ್ಯದೊಟ್ಟಿಗೆ ಸಮಾಜಮುಖಿ ಚಿಂತನೆಯೊಂದಿಗೆ, ಹಲವಾರು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ಗ್ರಾಮದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡಿದ್ದಾರೆ ಎಂದು ಉಭಯ ಜಿಲ್ಲಾ ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಕೆ.ವಸಂತ ಸಾಲಿಯಾನ್ ಹೇಳಿದರು.
ಅವರು ಆ.25 ರಂದು ಬಳಂಜ ಶಾಲೆಯಲ್ಲಿ ಅಭಿನಂದನಾ ಸಮಿತಿ, ಊರ ಗ್ರಾಮಸ್ಥರು ಬಳಂಜ-ನಾಲ್ಕೂರು, ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘ ಪುತ್ತೂರು ವಿಭಾಗ ಇವರ ಜಂಟಿ ಆಶ್ರಯದಲ್ಲಿ ನಡೆದ ಬಿ.ಪ್ರಮೋದ್ ಕುಮಾರ್ ಅವರ ಅಭಿನಂದನಾ ಸಮಾರಂಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಚಿಂತಕ ಕುರೆಲ್ಯ ನಾಲ್ಕೂರು ಬಾಲಕೃಷ್ಣ ಶೆಟ್ಟಿ ಅಭಿನಂದನಾ ಭಾಷಣ ಮಾಡಿ ಬಳಂಜ-ನಾಲ್ಕೂರಿನಲ್ಲಿ ಸುಧೀರ್ಘ 35 ವರ್ಷಗಳಿಂದ ಗ್ರಾಮೀಣ ಅಂಚೆ ಪಾಲಕರಾಗಿ ಬಿ.ಪ್ರಮೋದ್ ಕುಮಾರ್ ರವರು ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆ. ಅವರ ಪ್ರಾಮಾಣಿಕ ಸೇವೆಗೆ ಇವತ್ತು ಇಂತಹ ಸನ್ಮಾನವನ್ನು ಊರವರು ಮಾಡಿದ್ದಾರೆ.
ಪ್ರಮೋದ್ ಕುಮಾರ್ ರವರು ವೃತ್ತಿಯಿಂದ ನಿವೃತ್ತಿಯಾಗಿದ್ದಾರೆ. ಆದರೆ ಸಮಾಜ ಸೇವೆಯಿಂದ ನಿವೃತ್ತಿಯಾಗಿಲ್ಲ. ಮುಂದೆಯೂ ನಿಮ್ಮಿಂದ ಸಮಾಜದ ಅಭಿವೃದ್ದಿಯಲ್ಲಿ ಉತ್ತಮ ಕೆಲಸ ಕಾರ್ಯ ನಡೆಯಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಭಿನಂದನಾ ಸಮಿತಿ ಅಧ್ಯಕ್ಷ ನ್ಯಾಯವಾದಿ ಸತೀಶ್ ರೈ ಬಾರ್ದಡ್ಕ ವಹಿಸಿ ಮಾತನಾಡಿ, ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಊರ ಸಮಸ್ತರಿಗೂ, ಅಂಚೆ ಇಲಾಖೆಯ ಪ್ರತಿಯೋರ್ವರಿಗೂ ಕೃತಜ್ಞತೆ ಸಲ್ಲಿಸಿದರು.
ವೇದಿಕೆಯಲ್ಲಿ ಎನ್ವಿಗ್ರೀನ್ ಬಯೋಟೆಕ್ ಇಂಡಿಯಾ ಪ್ರೈ.ಲಿ ಇದರ ಸ್ಥಾಪಕ ಅಶ್ವಥ್ ಹೆಗ್ಡೆ ಬಳಂಜ, ಬಳಂಜ ಗ್ರಾ.ಪಂ ಅಧ್ಯಕ್ಷೆ ದೇವಕಿ ಕೊರಗಪ್ಪ ನಾಯ್ಕ, ಅಂಚೆ ನೌಕರ ಸಂಘ ಬೆಂಗಳೂರು ಇದರ ಕಾನೂನು ಸಲಹೆಗಾರ ಎಸ್.ಎಸ್ ಮಂಜುನಾಥ್, ಅಂಚೆ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ರುದ್ರೇಶ್, ಅಂಚೆ ನೌಕರರ ಸಂಘದ ಪುತ್ತೂರು ವಿಭಾಗದ ಅಧ್ಯಕ್ಷ ವಿಠಲ ಎಸ್ ಪೂಜಾರಿ, ಅಂಚೆ ನೌಕರರ ಸಂಘದ ಗೌರವಾಧ್ಯಕ್ಷ ಜಗತ್ಪಾಲ ಹೆಗ್ಡೆ, ಬಳಂಜ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸತೀಶ್ ಬರಮೇಲು, ಅಭಿನಂದನಾ ಸಮಿತಿಯ ಕೋಶಾಧಿಕಾರಿ ಸುರೇಶ್ ಶೆಟ್ಟಿ ಕುರೆಲ್ಯಗುತ್ತು, ಅಂಚೆ ನೌಕರರ ಸಂಘದ ಬೆಂಗಳೂರು ಕೋಶಾಧಿಕಾರಿ ಸುನಿಲ್ ದೇವಾಡಿಗ, ಪುತ್ತೂರು ವಿಭಾಗೀಯ ಕಾರ್ಯದರ್ಶಿ ಗಣೇಶ್ ಶೆಟ್ಟಿ, ಉಪಾಧ್ಯಕ್ಷ ಗುರುಪ್ರಸಾದ್ ದರಿಮಾರು, ಅಂಚೆ ಇಲಾಖೆಯ ಮಾಧವ, ಬಿ.ಪ್ರಮೋದ್ ಕುಮಾರ್ ರವರ ಪುತ್ರ ಅಭಿಜಿತ್, ಪುತ್ರಿ ವಿಭಾ ಬಿ ಜೈನ್ ಉಪಸ್ಥಿತರಿದ್ದರು.
ಅಭಿನಂದನಾ ಸಮಿತಿ ಪ್ರ.ಕಾರ್ಯದಶಿ ಸಂತೊಷ್ ಪಿ ಕೋಟ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಜಗದೀಶ್ ಪರಾರಿ ನಿರೂಪಿಸಿ, ಬಳಂಜ ಶಾಲಾ ಮುಖ್ಯೋಪಾಧ್ಯಾಯಿನಿ ಮೋಹಿನಿ ಸನ್ಮಾನ ಪತ್ರ ವಾಚಿಸಿ, ಅಂಚೆ ಇಲಾಖೆಯ ಗಣೇಶ್ ಶೆಟ್ಟಿ ವಂದಿಸಿದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.