ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

ಬೆಳ್ತಂಗಡಿ: ಇತ್ತೀಚೆಗೆ ಭೀಕರ ಪ್ರವಾಹಕ್ಕೆ ತುತ್ತಾಗಿದ್ದ ರಾಜ್ಯದ ನೆರೆ ಪೀಡಿತ ಪ್ರದೇಶಗಳ ಅಧ್ಯಯನಕ್ಕಾಗಿ ಬಂದಿದ್ದ ಕೇಂದ್ರದ ನೆರೆ ಅಧ್ಯಯನ ತಂಡವು ಭೀಕರ ನೆರೆಯಿಂದಾಗಿ ತೀವ್ರ ಆಸ್ತಿ ಪಾಸ್ತಿ ನಷ್ಟಕ್ಕೊಳಗಾದ ಬೆಳ್ತಂಗಡಿ ತಾಲೂಕಿಗೆ ಭೇಟಿ ನೀಡದೆ ನಿರ್ಲಕ್ಷಿಸಿರುವುದನ್ನು ಖಂಡಿಸಿ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಂದು(ಆ.29) ಬೆಳ್ತಂಗಡಿ ಮಿನಿವಿಧಾನ ಸೌಧದ ಎದುರುಗಡೆ ಪ್ರತಿಭಟನೆ ನಡೆಯಿತು.


ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ವಸಂತ ಬಂಗೇರ, ಜಿ.ಪಂ ಸದಸ್ಯ ಶಾಹುಲ್ ಹಮೀದ್, ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಸಮಿತಿ ಅಧ್ಯಕ್ಷರುಗಳಾದ ರಾಜಶೇಖರ ಅಜ್ರಿ ಮತ್ತು ಶ್ರೀನಿವಾಸ್ ಕಿಣಿ, ತಾ.ಪಂ ಅಧ್ಯಕ್ಷೆ ದಿವ್ಯಜ್ಯೋತಿ, ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಟಿ ಸೆಬಾಸ್ಟಿಯನ್, ಮಾಜಿ ಬ್ಲಾಕ್ ಕಾಂಗ್ರೆಸ್  ಅಧ್ಯಕ್ಷ ರಾಮಚಂದ್ರ ಗೌಡ, ತಾ.ಪಂ ಸದಸ್ಯರಾದ ಕೇಶವತಿ, ಪ್ರವಿಣ್ ಗೌಡ, ನ.ಪಂ ಸದಸ್ಯರಾದ ಜಗದೀಶ್ ಡಿ, ಮುಸ್ತರ್ ಜಾನ್ ಮೆಹಬೂಬ್, ಎಪಿಎಂಸಿ ಅಧ್ಯಕ್ಷ ಕೇಶವ ಪಿ ಬೆಳಾಲು, ಪ್ರಮುಖರಾದ ಇಚ್ಚಿಲ ಸುಂದರ ಗೌಡ, ವೆಂಕಪ್ಪ ಗೌಡ, ಪ್ರಭಾಕರ ಧರ್ಮಸ್ಥಳ,  ಹಾಜಿರಾ. ಉಷಾ ಶರತ್, ವಿನೂಷ ಪ್ರಕಾಶ್, ಜಯಶೀಲ ಸಲೀಂ ಜಿ.ಕೆರೆ ,  ಲೇನ್ಸಿ ಎ‌ ಪಿರೇರಾ, ನವಾಝ್ ಶರೀಫ್ ಕಟ್ಟೆ,  ಅಬ್ದುಲ್ ರಹಿಮಾನ್ ಪಡ್ಪು,ಅಶ್ರಫ್ ನೆರಿಯ, ಮೆಲ್ಬಿ,  ರಶೀದ್ ಮಡಂತ್ಯಾರು,  ಮೊದಲಾದವರು,  ಪಕ್ಷದ ವಿವಿಧ ಘಟಕಗಳ ಮುಖಂಡರು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.