HomePage_Banner_
HomePage_Banner_

ದೂರದ ಒಳನಾಡು ಪ್ರದೇಶದಲ್ಲಾಗಿರುವ ಹಾನಿಗೆ ಕಂಬನಿ ಮಿಡಿಯುವವರ್‍ಯಾರು?!

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಈ ಬಾರಿಯ ಮಳೆಗೆ ಕುಕ್ಕಾವು, ಕಿಲ್ಲೂರು, ಕಾಜೂರು, ಮುರ, ನಾವೂರು, ಚಾರ್ಮಾಡಿ ಮೊದಲಾದ ಪ್ರದೇಶಗಳಲ್ಲದೆ ಮಲವಂತಿಗೆ ಗ್ರಾಮದ ತೀರಾ ಒಳನಾಡು ಪ್ರದೇಶಗಳಲ್ಲಿ ಕೂಡ ಅತೀ ಹೆಚ್ಚು ಹಾನಿಗಳು, ಪ್ರಾಕೃತಿಕ ವಿಕೋಪಗಳು ಸಂಭವಿಸಿದೆ.
ರಸ್ತೆಯಂಚಿನ ಪ್ರದೇಶಗಳಿಗೆ ಅಧಿಕಾರಿಗಳು, ಜನಪ್ರತಿನಿಧಿಗಳು, ಭಾರೀ ಸಂಖ್ಯೆಯಲ್ಲಿ ಸಮಾಜ ಸೇವಕರು ಬಂದು ತಮ್ಮ ಕರ್ತವ್ಯ ಸಲ್ಲಿಸಿ ಹೋಗಿದ್ದು, ಅವರಿಗೆ ನೆರವಿನ ಮಹಾಪೂರವೂ ಹರಿದುಬಂದಿದೆ. ಇನ್ನೂ ಕೆಲವರು ಕಾಳಜಿ ಕೇಂದ್ರಗಳಲ್ಲಿ ನೆಲೆಸಿ ಎಲ್ಲಾ ಸೌಲಭ್ಯಗಳನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಆದರೆ ನೈಜ ಚಿತ್ರಣದತ್ತ ದೃಷ್ಟಿ ಹಾಯಿಸುತ್ತಾ ಹೋದರೆ ಇಲ್ಲಿ ಮಾತ್ರವಲ್ಲ, ಇನ್ನೂ ಕೂಡ ದೂರದ ಒಳನಾಡು ಪ್ರದೇಶಗಳಲ್ಲಿ, ಬೆಟ್ಟ, ಧರೆಯ ಪಕ್ಕದಲ್ಲಿ, ಪ್ರಕೃತಿಯ ರಮಣೀಯತೆಯ ಮಧ್ಯೆ ನೆಲೆಸಿರುವ ಜನರಿಗೆ ಆಗಿರುವ ತೊಂದರೆ, ಕೃಷಿ-ಆಸ್ತಿ-ಪಾಸ್ತಿ ನಷ್ಟ ಇನ್ನೂ ಕೆಲವರ ಗಮನಕ್ಕೆ ಬಂದೇ ಇಲ್ಲ. ಪುನರ್‌ನಿರ್ಮಾಣ ಮತ್ತು ಪರಿಹಾರ ಕಾರ್ಯದ ಬಗ್ಗೆ ಆಹೋರಾತ್ರಿ ಶ್ರಮಿಸುತ್ತಿರುವ ಕೆಲವು ಪ್ರಾಮಾಣಿಕ ಅಧಿಕಾರಿಗಳು ನಿಧಾನವಾಗಿ ಅತ್ತ ಹೆಜ್ಜೆ ಇಡುತ್ತಿದ್ದು, ಅವರ ಬಾಳಲ್ಲೂ ಭರವಸೆಯ ಬೆಳಕು ಮೂಡುವಂತಾಗಿದೆ.
ಮುಖ್ಯವಾಗಿ ಮಲವಂತಿಗೆ ಗ್ರಾಮದ ತುಳಪುಳೆ ಶಿಶಿಲತೋಟ, ಪಾತಳಿಕೆ, ನಂದಿಕಾಡು ಸಿಂಗನೂರು, ಪೆರ್ನಡ್ಕ, ಮಕ್ಕಿ, ಅಗ್ಗಪಾಲು, ಹೋಜೆ, ಕಜಕ್ಕೆ ದರ್ಖಾಸು, ನೆಕ್ಕಿಲು, ತಂಗೆತ್ತಿಪಾಲು, ಗುಂಪಕಲ್ಲು, ಕಲ್ಬೆಟ್ಟು, ಪೆರ್ಲೆ, ಎಲ್ಯರಕಂಡ, ದೈಪಿತ್ತಿಲು, ಅಡ್ಯದೋಡಿ, ಅರಸಿನಮಕ್ಕಿ, ಅನ್ನಾರು, ಬಾಂಜಾರು, ಗಣೇಶ್ ನಗರ, ಮಂಜಳ ನಾವೂರು ಮೊದಲಾದ ಪ್ರದೇಶಗಳು ಅತೀ ಹಾನಿಯಾದ ಪ್ರದೇಶಗಳಲ್ಲ್ಲಿ ಇವುಗಳು ಪ್ರಮುಖವಾಗಿ ಗುರುತಿಸುವಂತಹದ್ದು. ಇಲ್ಲಿ ಕಲ್ಲು, ಮಣ್ಣು, ಮರಗಳ ಸಮೇತ ಕೃತಕ ನದಿ ತೊರೆ ಸೃಷ್ಟಿಯಾಗಿರುವುದು, ಭೂಮಿ ಬಾಯ್ಬಿಟ್ಟಿರುವುದು ಇತ್ಯಾದಿ ಗಂಭೀರ ಸಮಸ್ಯೆಗೆ ತುತ್ತಾಗಿದೆ.
ಸ್ಥಳೀಯ ಪಂಚಾಯತ್ ಮಟ್ಟದ ಜನಪ್ರತಿನಿಧಿಗಳು ಮಾತ್ರ ಈ ಭಾಗದ ಜನರ ಅಹವಾಲು ಆಲಿಸಿದ್ದಾರೆ. ಇಲ್ಲಿಗೆ ಬೇರೆ ಯಾರೂ ಬಂದಿಲ್ಲ ಎಂಬ ದೂರೂ ಕೂಡ ಸಾಮಾನ್ಯವಾಗಿ ಕೇಳಿಬಂದಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.