ಪ್ರತಿಭಾಕಾರಂಜಿಯಲ್ಲಿ ನಿಷ್ಪಕ್ಷಪಾತ ತೀರ್ಪು ಹೊರಬರಲಿ

ಕರ್ನಾಟಕ ಸರಕಾರದಿಂದ ಈಗಾಗಲೇ ಜಾರಿಗೆ ಬಂದಿರುವ ಮಕ್ಕಳ ಕೌಶಲ್ಯ ಓರೆಗೆ ಹಚ್ಚುವ ಕಾರ್ಯಕ್ರಮಗಳಲ್ಲಿ ಪ್ರತಿಭಾಕಾರಂಜಿಯೂ ಒಂದು. ಈ ಕಾರ್ಯಕ್ರಮವನ್ನು ಮಕ್ಕಳ ಸುಪ್ತ ಪ್ರತಿಭೆಯ ಅನಾವರಣಗೊಳಿಸುವ ನಿಟ್ಟಿನಲ್ಲಿ ಜಾರಿಗೊಳಿಸಲಾಗಿದೆ ಎಂಬುದು ಶ್ಲ್ಯಾಘನೀಯ  . ಈ ಪ್ರತಿಭಾ ಕಾರಂಜಿಯ ಕಾರ್ಯಕ್ರಮದಲ್ಲೂ ಬಹುಮಾನಕ್ಕಾಗಿ ಲಾಬಿ ನಡೆಯುತ್ತಿರುವುದು ಬೇಸರದ ಸಂಗತಿ. ಪ್ರತಿಭಾ ಕಾರಂಜಿ ಹೆಸರೇ ಸೂಚಿಸುವಂತೆ ಮಕ್ಕಳ ಸುಪ್ತ ಪ್ರತಿಭೆಗೆ ಸರಿಯಾದ ಸ್ಥಾನದೊರೆಯುತ್ತಿದೆಯೇ? ಖಂಡಿತಾ ಇಲ್ಲ.  ಇತ್ತೀಚೆಗೆ ನಡೆದ ಪ್ರತಿಭಾಕಾರಂಜಿಯ ಯಕ್ಷಗಾನ ಸ್ಪರ್ಧೆಯಲ್ಲಿ ತೀರ್ಪುಗಾರರು ತಮ್ಮವರಿಗೆ ಬಹುಮಾನಕ್ಕಾಗಿ ಮಾಡಿದ ಲಾಬಿ ನೋಡಿ ಬೇಸರ ಅನಿಸಿತ್ತು.
ದೇವರಿಗೆ ಸಮಾನವಾಗಿರುವ ಮಕ್ಕಳ ಪ್ರತಿಭೆಗೆ ತಕ್ಕಂತೆ ಬಹುಮಾನವನ್ನು ಸರಿಯಾಗಿ ನೀಡದಿದ್ದರೆ ಮಕ್ಕಳಲ್ಲಿ ಅಡಕವಾಗಿರುವ ಪ್ರತಿಭೆಗೆ ಸರಿಯಾದ ನ್ಯಾಯ ದೊರಕದು ಎಂಬುದು ಸತ್ಯ.
ಪ್ರತಿಷ್ಠಿತ ಶಾಲೆಯ…! ಹೆಸರಿಗೆ, ಪ್ರತಿಷ್ಠಿತ ಮೇಳದ…! ಕಲಾವಿದರೂ ಆಗಿರುವ ತೀರ್ಪುಗಾರರು ಮಾಡಿದ ಅವಾಂತರದಿಂದ ಬಡ ಸರಕಾರಿ ಶಾಲೆಯ ಮಕ್ಕಳಿಗೆ ಅನ್ಯಾಯವಾಗಿದೆ. ಆದುದರಿಂದ ಇನ್ನಾದರೂ ಎಚ್ಚೆತ್ತುಕೊಂಡು ನಿಷ್ಪಕ್ಷಪಾತವಾದ ನಿಲುವಿನ ತೀರ್ಪುಗಾರರನ್ನು ನೇಮಿಸಿ ಪ್ರತಿಭೆಗೆ ತಕ್ಕಂತೆ ಬಹುಮಾನ ನೀಡುವುದರೊಂದಿಗೆ, ಪ್ರತಿಭಾ ಕಾರಂಜಿಯ ಘನತೆಯನ್ನು ಹೆಚ್ಚಿಸಬೇಕಾಗಿದೆ.
 ವಸಂತಿ ಟಿ ನಿಡ್ಲೆ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.