ಪಂಜಳಗುಡ್ಡೆಗೆ ಕಿರುಸೇತುವೆ -ಮರದ ತೂಗುಸೇತುವೆಗೆ ಮುಕ್ತಿ

 

ಸುಲ್ಕೇರಿಮೊಗ್ರು: ಇಲ್ಲಿಯ ಪಂಜಳಗುಡ್ಡೆ-ಪಟ್ಲಬೈಲು ಸಂಪರ್ಕಿಸುವ ಫಲ್ಗುಣಿ ನದಿಗೆ ಅಡ್ಡವಾಗಿ ಕಿರು ಸೇತುವೆ ನಿರ್ಮಾಣಕ್ಕೆ ಪ್ರಾಥಮಿಕ ಅಂದಾಜು ಪಟ್ಟಿ ತಯಾರಿಸಲಾಗಿದ್ದು, ಅನೇಕ ವರ್ಷಗಳಿಂದ ಇಲ್ಲಿ ನಿರ್ಮಿಸಲಾಗುತ್ತಿದ್ದ ಮರದ ತಾತ್ಕಲಿಕ ತೂಗು ಸೇತುವೆಗೆ ಮುಕ್ತಿ ದೊರೆಯಲಿದೆ.

ಸುಲ್ಕೇರಿಮೊಗ್ರು ಗ್ರಾಮದ ಪಂಜಳಗುಡ್ಡೆ ಹಾಗೂ ಪಟ್ಲಬೈಲಿನ ಅರ್ಧ ಕಿ.ಮೀ ಸಂಪರ್ಕಕ್ಕೆ ಒಂದೂವರೆ ಕಿ.ಮೀ ಸುತ್ತು ಬಳಸಿ ಗಂಗನಕಲ್ಲು ಸೇತುವೆಯಾಗಿ ಬರಬೇಕಾಗಿರುವುದರಿಂದ ಸ್ಥಳೀಯರು ಮರದ ಪಾಲದ ತೂಗು ಸೇತುವೆಯನ್ನು 40  ವರ್ಷಗಳಿಂದ ನಿರ್ಮಿಸುತ್ತಿದ್ದರು. ಇದು ಈ ಭಾಗದ ಕೆಲ ಕುಟುಂಬಳಿಗೆ ಮತ್ತು ಶಾಲೆಗಳಿಗೆ ಹೋಗುವ ಮಕ್ಕಳಿಗೆ ಅನುಕೂಲಕರವಾಗಿದೆ.
ಇಲ್ಲಿ ನದಿ ದಾಟಲು ಶಾಶ್ವತ ಕಿರು ಸೇತುವೆ ನಿರ್ಮಾಣಕ್ಕೆ ಕಳೆದ ಬಾರಿ ಶಾಸಕ ಹರೀಶ್ ಪೂಂಜ ಅವರಿಗೆ ಸಲ್ಲಿಸಿದ ಮನವಿ ಹಿನ್ನಲೆಯಲ್ಲಿ ಸ್ಥಳಕ್ಕೆ ಲೋಕೋಪಯೋಗಿ ಇಲಾಖೆಯ ಸ.ಕಾ ಇಂಜಿನಿಯರ್ ಶಿವಪ್ರಸಾದ ಅಜಿಲ ಭೇಟಿ ನೀಡಿ ಪರಿಶೀಲನೆ ನಡೆಸಿ ಸುಮಾರು ರೂ.6 ರಿಂದ 7  ಲಕ್ಷದ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ.
ತೀರಾ ಅಪಾಯಕಾರಿಯಾದ ಈ ಮರದ ಪಾಲದಲ್ಲಿ ಮಳೆಗಾಲದ ಅವಧಿಯಲ್ಲಿ ನಾಗರಿಕರು ಹಾಗೂ ಶಾಲಾ ಕಾಲೇಜಿಗೆ ಹೋಗುವ ಮಕ್ಕಳು ನದಿ ದಾಟುತ್ತಿರುವುದು ಅಪಾಯಕಾರಿಯಾಗಿದ್ದು, ಇಲ್ಲಿ ಶೀಘ್ರವಾಗಿ ಸೇತುವೆ ನಿರ್ಮಾಣವಾದರೆ ಎಲ್ಲರಿಗೂ ಅನುಕೂಲವಾಗಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.