ಮಳೆಹಾನಿ, ನೆರೆ ಪೀಡಿತರಿಗೆ 1 ಲಕ್ಷ ರೂ. ಸಹಾಹಸ್ತ ನೀಡಿದ ಅನಿವಾಸಿ ಭಾರತೀಯ ಉದ್ಯಮಿ

ಬೆಳ್ತಂಗಡಿ: ಕಾಜೂರು, ಕಿಲ್ಲೂರು, ದಿಡುಪೆ, ಕುಕ್ಕಾವು, ಜಿ. ನಗರ ಪ್ರದೇಶದಲ್ಲಿ ಮಳೆಹಾನಿ ಮತ್ತು ನೆರೆ ಹಾವಳಿಗೆ ತುತ್ತಾಗಿ ತೀವ್ರ ತೊಂದರೆಗೊಳಗಾಗಿರುವ ಸರ್ವಧರ್ಮೀಯ ಒಟ್ಟು ೫೦ ಕುಟುಂಬಗಳಿಗೆ ಪ್ರಸ್ತುತ ಸೌದಿ ಅರೇಬಿಯಾದ ದಮಾಮ್‌ನಲ್ಲಿ ಉದ್ಯಮಿಯಾಗಿರುವ ಅನಿವಾಸಿ ಭಾರತೀಯ, ಮೇಲಂತಬೆಟ್ಟು ನಿವಾಸಿ ಅನ್ವರ್ ಸಾದಾತ್ ಅವರು ಕೊಡಮಾಡಿದ ೧ ಲಕ್ಷ ರೂ. ದೇಣಿಗೆಯನ್ನು ಆ. ೨೭ ರಂದು ಸಂತ್ರಸ್ತರು ಇರುವ ಪ್ರದೇಶಕ್ಕೇ ತೆರಳಿ ಹಸ್ತಾಂತರಿಸಲಾಯಿತು.
ಅನ್ವರ್ ಸಾದಾತ್ ಅವರು ತನ್ನ ತಂದೆ ಗುರುವಾಯನಕೆರೆ ಮಸ್ಜಿದ್ ಅಧ್ಯಕ್ಷರು ಹಾಗೂ ಎಸ್‌ಎಮ್‌ಎ ಗುರುವಾಯನಕೆರೆ ರೇಂಜ್ ಅಧ್ಯಕ್ಷರಾಗಿರುವ ಹಿರಿಯ ಸಾಮಾಜಿಕ ಮುಂದಾಳು ಯಾಕೂಬ್ ಮುಸ್ಲಿಯಾರ್ ಅವರ ಮೂಲಕ ಈ ಮೊತ್ತವನ್ನು ಫಲಾನುಭವಿಗಳಿಗೆ ವಿತರಿಸುವ ಕಾರ್ಯ ಮಾಡಿದರು.
ಕಿಲ್ಲೂರು ಮಸ್ಜಿದ್ ಮಾಜಿ ಅಧ್ಯಕ್ಷ ಹಾಗೂ ನಿವೃತ ಪೊಲೀಸ್ ಕಾಸಿಂ ಮಲ್ಲಿಗೆ ಮನೆ ಇವರು ಫಲಾನುಭವಿಗಳ ಪಟ್ಟಿ ತಯಾರಿಸಿ ಅರ್ಹರಿಗೆ ಸೌಲಭ್ಯ ದೊರೆಯುವಂತೆ ವ್ಯವಸ್ಥೆ ಮಾಡಿದರು.
ಈ ಸಂದರ್ಭ ಬದ್ರಿಯಾ ಬಝಾರ್ ಗುರುವಾಯನಕೆರೆ ಮಾಲಕ ಜಿ. ಮುತ್ತಲಿಬ್, ಮುಹಮ್ಮದ್ ಹನೀಫ್ ಮೇಲಂತಬೆಟ್ಟು, ಝಫೀರ್ ಜಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.