ಕೊಯ್ಯೂರು : ಶ್ರೀಕೃಷ್ಣ ಭಜನಾ ಮಂಡಳಿ (ರಿ) ಅದೂರುಪೆರಾಲ್ ಕೊಯ್ಯೂರು ಮತ್ತು ಸಾರ್ವಜನಿಕ ಶ್ರೀ ಗಣೇಶೊತ್ಸವ ಸಮಿತಿ ಹಾಗೂ ಊರವರ ಸಂಯುಕ್ತ ಆಶ್ರಯದಲ್ಲಿ 32ನೇ ವರ್ಷದ ಸಾರ್ವಜನಿಕ ಶ್ರೀಕೃಷ್ಣಜನ್ಮಾಷ್ಠಮಿಯು ಶ್ರೀಕೃಷ್ಣ ಭಜನಾ ಮಂದಿರದಲ್ಲಿ ನೆರವೇರಿತು . ವಿಶೇಷ ಪೂಜೆ ನೆರವೇರಿಸಿ ಶ್ರೀಕೃಷ್ಣ ಜನ್ಮಾಷ್ಟಮಿಯ ಆಟೋಟ ಸ್ಪರ್ಧೆ ಯ ಉದ್ಘಾಟನೆಯನ್ನು ಊರಿನ ಹಿರಿಯ, ನಾಟಿವೈದ್ಯ ಜನಾರ್ದನ ಆಚಾರ್ಯ ಆದೂರ್ ಪೆರಾಲ್ ಇವರು ನೆರವೇರಿಸಿಕೊಟ್ಟರು ಉದ್ಘಾಟನಾ ಸಮಾರಂಭ ನೆರವೆರಿಸಿ ಮಾತನಾಡುತ್ತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು ಈ ಕಾರ್ಯಕ್ರಮದಲ್ಲಿ ಸಾರ್ವಜನಿಕ ಶ್ರೀ ಗಣೇಶೊತ್ಸವ ಸಮಿತಿಯ ಅಧ್ಯಕ್ಷ ಪುರುಷೊತ್ತಮ ಗೌಡ ಉಗ್ರೋಡಿ ಶ್ರೀಕೃಷ್ಣ ಭಜನಾ ಮಂಡಳಿಯ ಗೌರವ ಅಧ್ಯಕ್ಷ ಬಾಲಕೃಷ್ಣ ಸಾಲ್ಯಾನ್ ಆದರ್ಶನಗರ, ಅಧ್ಯಕ್ಷ ನಾರಾಯಣ ಗೌಡ ಮೈಂದಕೊಡಿ ಕಾರ್ಯದರ್ಶಿ ಹೇಮಂತದೇಂತ್ಯಾರು ಬೊಟ್ಟು, ಭಜನಾ ಮಂಡಳಿಯ ಗೌರವ ಸಲಹೆಗಾರ ಚಂದ್ರಶೇಖರ್ ಸಾಲ್ಯಾನ್, ಸಲಹೆಗಾರ ಲಿಂಗಪ್ಪ ಗೌಡ ಬೆರ್ಕೆ, ಭಜನಾ ಮಂಡಳಿಯ ಕೊಶಾಧಿಕಾರಿ ಓಬಯ್ಯ ನಾಯ್ಕ ಪುಂಡ್ಯೇದಡಿ. ಹೇಮಂತ ಗೌಡ ನಾಗನೊಡಿ, ದಯಾನಂದ ಅಚಾರ್ಯ ಆದೂರ್ ಪೆರಾಲ್, ಮೋಹನ ದೇಂತ್ಯಾರು ಬೊಟ್ಟು, ಹರಿಶ್ಚಂದ್ರ ದೇಂತ್ಯಾರು ಬೊಟ್ಟು, ಮೋಹನ್ ಕುಮಾರ್ ಬಜ, ಶ್ರೀಧರ ದೇಂತ್ಯಾರು ಬೊಟ್ಟು ಸಾರ್ವಜನಿಕ ಶ್ರೀ ಗಣೇಶೊತ್ಸವ ಸಮಿತಿಯ ಗೌರವಅಧ್ಯಕ್ಷ ಅಣ್ಣಿ ಗೌಡ ಬೊಳೊಲಿ, ಕಾರ್ಯದರ್ಶಿ ಭರತ್ ಡೆಂಬುಗ, ದಿಲೀಪ್ ಮೈಂದಕೊಡಿ, ಹೇಮಂತ್ ಪಾಂಬೇಲು ಇವರುಗಳು ಉಪಸ್ತಿತರಿದ್ದರು ಪೂಜಾ ಕಾರ್ಯಕ್ರಮವನ್ನು ಶ್ರೀಲಕ್ಷ್ಮಿಶ ಭಟ್ ನೆರವೇರಿಸಿಕೊಟ್ಟರು ಶ್ರೀಗಣೇಶೊತ್ಸವ ಸಮಿತಿಯ ಕೊಶಾಧಿಕಾರಿಯಾದ ದಿನೇಶ ಗೌಡ ದೇಂತ್ಯಾರು ಬೊಟ್ಟು ಇವರು ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು ನಂತರ ನಡೆದ ಆಟೋಟ ಸ್ಪರ್ಧೆಗಳನ್ನು ಶ್ರೀಗಣೇಶೊತ್ಸವ ಸಮಿತಿಯ ಪದಾಧಿಕಾರಿಗಳು ಸರ್ವಸದಸ್ಯರು ಶ್ರೀಕೃಷ್ಣ ಭಜನಾ ಮಂಡಳಿಯ ಪದಾಧಿಕಾರಿಗಳು ಸರ್ವಸದಸ್ಯರು ಮಹಮ್ಮಾಯಿ ಪೂಜಾ ಸಮಿತಿಯ ಸದಸ್ಯರು ಹಾಗೂ ಊರವರು ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕರಿಸಿದರು ಮಧ್ಯಾಹ್ನದ ಅನ್ನದಾನದ ಉಸ್ತುವಾರಿಯನ್ನು ನಾರಾಯಣ ಗೌಡ ನಾಗನೊಡಿ ಮತ್ತು ತಂಡ ಹರ್ಮಾಡಿ ಇವರು ಬಹಳ ಅಚ್ಚುಕಟ್ಟಾಗಿ ನೆರವೇರಿಸಿದರು ಹಾಗು ಅದೇ ದಿನ ರಾತ್ರಿ ಶ್ರೀಕೃಷ್ಣ ಭಜನಾ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ವಿಶೇಷ ಭಜನಾ ಕಾರ್ಯಕ್ರಮವನ್ನು ನಡೆಸಲಾಯಿತು ಈ ಭಜನಾ ಕಾರ್ಯಕ್ರಮದಲ್ಲಿ ನಮ್ಮ ಭಜನಾ ಮಂಡಳಿಯ ಪದಾಧಿಕಾರಿಗಳು ಸರ್ವಸದಸ್ಯರು ಸಾರ್ವಜನಿಕ ಶ್ರೀ ಗಣೇಶೊತ್ಸವ ಸಮಿತಿಯ ಪದಾಧಿಕಾರಿಗಳು ಸರ್ವಸದಸ್ಯರು ಹಾಗೂ ಊರ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಭಜನಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು