ಪಾರಸ್ ಪೃಥ್ವಿ ಜ್ಯುವೆಲ್ಸ್‌ನಲ್ಲಿ ತುಳುನಾಡ ಪೊರ್ಲು ಕಾರ್ಯಕ್ರಮ

ಅಂತರ್ ಶಾಲಾ ಕಾಲೇಜು ಛದ್ಮವೇಶ ಸ್ಪರ್ಧೆ

ಬೆಳ್ತಂಗಡಿ: ಪಾರಸ್ ಪೃಥ್ವಿ ಜ್ಯುವೆಲ್ಸ್ ಬೆಳ್ತಂಗಡಿ ವತಿಯಿಂದ “ತುಳುನಾಡ ಪೊರ್ಲು” ಕಾರ್ಯಕ್ರಮ  ಇತ್ತೀಚಿಗೆ  ನಡೆಯಿತು.  ಜೇಸಿಐ ಬೆಳ್ತಂಗಡಿ ಮಂಜುಶ್ರೀ ಸಹಯೋಗದೊಂದಿಗೆ ಬೆಳ್ತಂಗಡಿಜೈನ್‌ಪೇಟೆ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಂಗಣದಲ್ಲಿ   ಕಾರ್ಯಕ್ರಮ ಆಯೋಜಿಸಲಾಗಿತ್ತು. 

 ಸಮಾರಂಭದಲ್ಲಿ ಇದೇ ಮೊದಲ ಬಾರಿಗೆ ಅಂತರ್‌ಶಾಲಾ ಕಾಲೇಜು ಮಕ್ಕಳ ಛದ್ಮವೇಶ ಸ್ಪರ್ದೆ ಆಯೋಜಿಸಲಾಗಿತ್ತು.
ಸಮಾರಂಭದಲ್ಲಿ ಜಯಶ್ರೀ ಕಾಂಪ್ಲೆಕ್ಸ್ ಮಾಲಕ ಯೋಗೀಶ್ ಕುಮಾರ್ ನಡಕ್ಕರ, ಪಾರಸ್ ಪೃಥ್ವಿ ಜ್ಯುವೆಲ್ಸ್ ಮಾಲಕ ಸಮರತ್‌ಲಾಲ್ ಡಕ್, ಬೆಳ್ತಂಗಡಿ ತಾ| ಮಹಿಳಾ ವೃಂದದ ಅಧ್ಯಕ್ಷೆ ಆಶಾ ಸತೀಶ್, ಗೌಡರ ಯಾನೆ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ ಸೋಮೇ ಗೌಡ, ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಎಸ್ ಜಯರಾಮ ಶೆಟ್ಟಿ, ಅಮೃತ್ ಟೆಕ್ಸ್‌ಟೈಲ್ಸ್ ಮಾಲಕ ಪ್ರಶಾಂತ್ ಜೈನ್, ಜೇಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಪ್ರಶಾಂತ್ ಲಾಯಿಲ,  ನಾರಾಯಣ ಎಂ ಬೇಗೂರು ಮೊದಲಾದ ಗಣ್ಯರು ಭಾಗಿಯಾಗಿದ್ದರು. ಎಸ್‌ಡಿಎಂ ಐಟಿ ಕಾಲೇಜು ಪ್ರಾಧ್ಯಾಪಕ ಡಾ. ರವೀಶ್ ಪರವ ಸಂಪನ್ಮೂಲ ಉಪನ್ಯಾಸ ನೀಡಿದರು. ಸಂಜೆ “ಬಯ್ಯದ ಪೊರ್‍ಲು” ವಿಶೇಷ ಮಾಲಿಕೆಯಲ್ಲಿ ದೇವದಾಸ್ ಕಾಪಿಕಾಡ್ ವಿರಚಿತ “ಕೊಡೆಬುಡ್ಪಾಲೆ” ತುಳು ಹಾಸ್ಯಮಯ ನಾಟಕ ಪ್ರದರ್ಶನವೂ ನಡೆಯಿತು. ವೇದಿಕೆಯಲ್ಲಿ ಪಾರಸ್ ಪೃಥ್ವಿ ಜ್ಯುವೆಲ್ಸ್ ಬೆಳ್ತಂಗಡಿ ಶಾಖೆ ಮೆನೇಜರ್ ಸಂದೀಪ್ ನಾಯಕ್, ಮುರಳಿಕೃಷ್ಣ, ಶಿನೋದ್, ರವಿ, ಅಶ್ರಫ್, ಪೊಣ್ಣಚ್ಚ, ಮಹೇಶ್, ವಿಜಯರ್ ಸಹಿತ ಎಲ್ಲ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪ್ರಜ್ಞಾ ಓಡೀಲು ಕಾರ್ಯಕ್ರಮ ನಿರೂಪಿಸಿದರು. ಪ್ರಮೀಳಾ ವಂದನಾರ್ಪಣೆಗೈದರು. ಮಾರ್ಕೆಟಿಂಗ್ ಸೇಲ್ಸ್ ಎಕ್ಸ್‌ಕ್ಯೂಟಿವ್ ನಿಸಾರ್ ಸ್ವಾಗತಿಸಿ ಸಂಯೋಜನೆಗೈದರು.
ವರದಿ: ನಿಸಾರ್ ಮುರ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.