ಸೆ.2: ಶ್ರೀ ನಾಗಕಲ್ಲುರ್ಟಿ ದೈವಸ್ಥಾನದಲ್ಲಿ ಗಣೇಶೋತ್ಸವ- ಮೂಡಪ್ಪ ಸೇವೆ

ಮುಂಡೂರು: ಶ್ರೀ ನಾಗಕಲ್ಲುರ್ಟಿ ದೈವಸ್ಥಾನ ಶ್ರೀ ಕ್ಷೇತ್ರ ಮಂಗಳಗಿರಿ ಮುಂಡೂರಿನ ಶ್ರೀ ಕ್ಷೇತ್ರದ ಉದ್ಭವ ಮಹಾಗಣಪತಿ ಸನ್ನಿಧಾನದಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ಪಂಚಮ ವರ್ಷದ ಗಣೇಶೋತ್ಸವ ಮತ್ತು 108 ತೆಂಗಿನಕಾಯಿಯ ನಾಳಿಕೇರ ಗಣಯಾಗ, ಮೂಡಪ್ಪ ಸೇವೆ ಮೊದಲಾದ ಕಾರ್ಯಕ್ರಮ ಸೆ.೨ರಂದು ಜರುಗಲಿದೆ ಎಂದು ಮೊಕ್ತೇಸರ ರಾಜೀವ ಅವರು ತಿಳಿಸಿದ್ದಾರೆ.
ಬೆಳಗ್ಗೆ 9ರಿಂದ 108 ನಾಳೀಕೇರ ಗಣಯಾಗ ಆರಂಭ, ಮಧ್ಯಾಹ್ನ12 ಕ್ಕೆ ಪೂರ್ಣಾಹುತಿ, ಮೂಡಪ್ಪ ಸೇವೆ, 12.30ಕ್ಕೆ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ4 ರಿಂದ ಶ್ರೀ ನಾಗಂಬಿಕಾ ಭಜನಾ ಮಂಡಳಿ ಸದಸ್ಯರಿಂದ ಭಜನಾ ಕಾರ್ಯಕ್ರಮ, ರಾತ್ರಿ 7ಕ್ಕೆ ರಂಗಪೂಜೆ, ರಾತ್ರಿ 8ಕ್ಕೆ ಶ್ರೀ ದೇವಿ ನಾಗಂಬಿಕಾ ಅಮ್ಮನವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ. ರಾತ್ರಿ 8.30ರಿಂದ ಮಹಾಗಣಪತಿ ದೇವರ ಬಿಂಬ ವಿಸರ್ಜನಾ ಪೂಜೆ ಬಳಿಕ ಶ್ರೀ ಕ್ಷೇತ್ರದ ಬಾವಿಯಲ್ಲಿ ವಿಗ್ರಹ ಜಲಸ್ತಂಭನ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.