ಮಳೆ ಹಾನಿಗೆ ತುತ್ತಾದ ಕೋಳಿ ಸಾಕಾಣಿಕೆ ಕೇಂದ್ರ

1200 ಕೋಳಿ  ಮರಿಗಳು ಸಾವು: ಒಂದೂವರೆ ಲಕ್ಷಕ್ಕೂ ಅಧಿಕ ನಷ್ಟ

ಪುತ್ತಿಲ: ಕಳೆದ ವಾರ ಏಕಾಏಕಿ ಸುರಿದ ಭಾರೀ ಮಳೆಯ ಪರಿಣಾಮ ಪುತ್ತಿಲ ಗ್ರಾಮದ ಪೊರ್ಕಳ ಎಂಬಲ್ಲಿ ನವೀನ್ ರೈ ಎಂಬವರು ನಡೆಸುತ್ತಿದ್ದ ಮಾಂಸದ ಕೋಳಿ ಸಾಕಾಣಿಕೆ ಘಟಕಕ್ಕೆ ಮಣ್ಣು ಮತ್ತುಗುಡ್ಡದ ನೀರು ನುಗ್ಗಿ 1200 ಕ್ಕೂ ಅಧಿಕ ಕೋಳಿ ಮರಿಗಳು ಸಾವನ್ನಪ್ಪಿದೆ.

 

 

ಸಣ್ಣ ಮರಿಗಳನ್ನು ಖರೀದಿಸಿ ಅದನ್ನು ಮಾಂಸದ ಕೋಳಿಗಳಾಗಿ ಪರಿವರ್ತಿಸಿ ಮಾರುಕಟ್ಟೆಗೆ ರವಾನಿಸುವ ಈ ಕೇಂದ್ರದ ಬಳಿಯ ಗುಡ್ಡ ನೀರಿನ ಒರತೆಯೊಂದಿಗೆ ಕುಸಿದು ನೀರು ಒಮ್ಮೆಲೇ ಕೇಂದ್ರಕ್ಕೆ ನುಗ್ಗಿತ್ತು. 10 ದಿನಗಳು ಆಗಿದ್ದ ಮರಿಗಳು 1200 ರಷ್ಟು ಸತ್ತಿದ್ದು ಅಂದಾಜು ಒಂದೂವರೆ ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ. ಘಟನೆ ನಡೆದ ಕೂಡಲೇ ಪರಿಸರವಾಸಿಗಳಿಗೆ ತೊಂದರೆಯಾಗದಂತೆ ತಕ್ಷಣ ಕ್ರಮ ಕೈಗೊಂಡಿರುವ ನವೀನ್ ರೈ ಅವರು ಸತ್ತ ಕೋಳಿಮರಿಗಳನ್ನು ಸ್ವಂತ ಹಣ ಖರ್ಚು ಮಾಡಿ ವಿಲೇವಾರಿ ಮಾಡಿದ್ದಾರೆ. ಇದೀಗ ಘಟನೆಯ ವಿವರವನ್ನು ಗ್ರಾ.ಪಂ ಪಿಡಿಒ ಅವರಿಗೆ ತಿಳಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.