ಸುರತ್ಕಲ್ ಉದ್ಯಮಿ ಸಯ್ಯಿದ್‌ಹಾಜಿ ಅವರಿಂದ ಬಡ ಕುಟುಂಬಗಳಿಗೆ ವಸ್ತ್ರ ಕೊಡುಗೆ

ಬೆಳ್ತಂಗಡಿ: ಮಳೆಹಾನಿ, ನೆರೆ ಸಂತ್ರಸ್ತರಿಗೆ ಹಾಗೂ ತೀರಾ ಬಡತನದಲ್ಲಿರುವ ಕುಟುಂಬಗಳ ಮಕ್ಕಳಿಗೆ ಸಹಾಯವಾಗುವಂತೆ ಮಂಗಳೂರು ಸುರತ್ಕಲ್‌ನ ಹಿರಿಯ ಉದ್ಯಮಿ ಸಾಗರ್ ಫ್ಯಾಷನ್ ಮಾಲಕ ಸಯ್ಯಿದ್‌ಹಾಜಿ ಅವರು 100 ಜೊತೆ ವಸ್ತ್ರಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ರಾಜ್ಯಮದನೀಸ್ ಅಸೊಸಿಯೇಶನ್ ಸ್ಥಾಪಕಾಧ್ಯಕ್ಷ ಸಯ್ಯಿದ್ ಕಾಜೂರು ತಂಙಳ್ ನಿರ್ದೇಶನದಂತೆ ಅವರು ಈ ಕೊಡುಗೆಯನ್ನು ಬೆಳ್ತಂಗಡಿ ತಾಲೂಕಿಗೆ ಸಮರ್ಪಿಸಿದ್ದಾರೆ.
ನೆರೆ, ಮಳೆ ಇತ್ಯಾಧಿ ಸಮಸ್ಯೆಗಳಿಂದ ಈಗಾಗಲೇ ಸಂತ್ರಸ್ತರೆನಿಸಿಕೊಂಡು ಸರಕಾರ ಮತ್ತು ಸಂಘ ಸಂಸ್ಥೆಗಳಿಂದ ಇನ್ನೂ ಕೂಡ ಯಾವುದೇ ನೆರವು ಲಭಿಸದೆ ತೊಂದರೆಗೊಳಗಾಗಿರುವ ಆಯ್ದ ಪ್ರದೇಶಗಳ ಮಂದಿಗೆ ಹಾಗೂ ತೀರಾ ಬಡತನಲ್ಲಿರುವವರಿಗೆ ಪ್ರಯೋಜನವಾಗುವಂತೆ ವಿತರಿಸುವ ವಾಗ್ದಾನದೊಂದಿಗೆ ಬೆಳ್ತಂಗಡಿ ಪತ್ರಕರ್ತರ ಸಂಘದ ಪ್ರ. ಕಾರ್ಯದರ್ಶಿ ಅಶ್ರಫ್ ಆಲಿಕುಂಞಿ ಮುಂಡಾಜೆ ಅವರ ಮೂಲಕ ಆ. 24 ರಂದು ಈ ಕಿಟ್ಟನ್ನು ಹಸ್ತಾಂತರಿಸಿದರು.
ಬೆಳ್ತಂಗಡಿಯ ಹಿರಿಯ ಸಾಮಾಜಿಕ ಕಾರ್ಯಕರ್ತ ಅಕ್ಬರ್ ಬೆಳ್ತಂಗಡಿ, ಗುರುವಾಯನಕೆರೆ ಎ.ಎಮ್ ಇಂಟರ್‌ನ್ಯಾಷನಲ್ ಸಂಸ್ಥೆಯ ಮಾಲಕ ಅಶ್ರಫ್ ಪೆರಾಲ್ದರಕಟ್ಟೆ, ಸಂಜಯ್ ಗ್ಲೋಬಲ್ ಫೌಂಡೇಶನ್ ಕಾರ್ಯದರ್ಶಿ ಇರ್ಫಾನ್‌ಹಂಝ, ಯುವ ಕಾರ್ಯಕರ್ತರಾದ ಇರ್ಫಾನ್ ಸಂಜಯನಗರ, ಇಮ್ರಾನ್ ಸಂಜಯನಗರ ಮತ್ತು ಫಯಾಝ್ ಕಿಲ್ಲೂರು ಅವರು ಈ ಸೊತ್ತುಗಳನ್ನು ಅರ್ಹರಿಗೆ ತಲುಪಿಸುವ ವಾಗ್ದಾನದೊಂದಿಗೆ ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.