ಕಳಿಯ ಸಹಕಾರ ಸಂಘದಿಂದ ನಾಳ ಶಾಲೆಗೆ ಬ್ಯಾಂಡ್ ಸೆಟ್ ಕೊಡುಗೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಗೇರುಕಟ್ಟೆ : ಕಳಿಯ ಕೃಷಿ ಪತ್ತಿನ ಸಹಕಾರ ಸಂಘದ ಮೂಲಕ ಬ್ಯಾಂಡ್ ಸುಮಾರು 15 ಸಾವಿರ ಮೊತ್ತದ ಚೆಕ್ ನೀಡುವ ಮೂಲಕ ಸಂಘದ ಅಧ್ಯಕ್ಷ ವಸಂತ ಮಜಲು ನಾಳ ಶಾಲಾ ಮುಖ್ಯೋಪಾಧ್ಯಾಯರಿಗೆ ಆ.15 ರಂದು ಕೊಡುಗೆಯಾಗಿ ನೀಡಿದರು. ನಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬ್ಯಾಂಡ್ ಸೆಟ್ ನ ಕೊರತೆ ಇರುವ ಬಗ್ಗೆ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಶಾಲಾ ಅಭಿವೃದ್ಧಿ ಸಮಿತಿ, ಶಿಕ್ಷಕರು ಮತ್ತು ಮಕ್ಕಳ ಪೋಷಕರು ಬೇಡಿಕೆ ಸಲ್ಲಿಸಿದರು. ಸರಕಾರಿ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಮಕ್ಕಳಿಗೆ ನೀಡುವ ಸಲುವಾಗಿ ಕಳಿಯ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಮತ್ತು ನಿರ್ದೇಶಕ ಮಂಡಳಿಯ ತೀರ್ಮಾನ ಕೈಗೊಳ್ಳುವ ಮೂಲಕ ಬೇಡಿಕೆಯನ್ನು ಪೂರೈಸಲು ಸಾಧ್ಯವಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷ ವಸಂತ ಮಜಲು ಉಪಾಧ್ಯಕ್ಷ ನಾಣ್ಯಪ್ಪ ಪೂಜಾರಿ, ಕಾರ್ಯ ನಿರ್ವಹಣಾ ಅಧಿಕಾರಿ ಸತ್ಯಶಂಕರ ಭಟ್ಟ,ಸಂಘದ ನಿರ್ದೇಶಕ  ಹರಿದಾಸ ಪಡಂತಾಯ, ಶೇಖರ ನಾಯ್ಕ,ರಾಜ್ ಪ್ರಕಾಶ್, ಮಮತ ಶೆಟ್ಟಿ ಚಂದ್ರವತಿ, ರಾಜೀವ ಗೌಡ,ದೇವಣ್ಣ ಮೂಲ್ಯ, ರತ್ನಾಕರ ಪೂಜಾರಿ, ಶಶಿಧರ ಶೆಟ್ಟಿ ನೋಣಯ್ಯ ಹಾಗೂ ಶಾಲಾ ಶಿಕ್ಷಕರು, ಎಸ್.ಡಿ.ಎಮ್.ಸಿ. ಅಧ್ಯಕ್ಷ ಮೋಹನ ಗೌಡ,ಸಮಿತಿಯ ಸದಸ್ಯರು, ಮಕ್ಕಳ ಪೋಷಕರು, ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.

                                                                                                                                                                                                                                                                                                                              (ವರದಿ.ಕೆ.ಎನ್.ಗೌಡ.)

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.