ತೆಂಕಕಾರಂದೂರು : ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

ತೆಂಕಕಾರಂದೂರು: ಇಲ್ಲಿಯ  ಶ್ರೀ ಸಂತಾನ ಗೋಪಾಲ ಕೃಷ್ಣ ದೇವಸ್ಥಾನ ಖಂಡಿಗ ಇದರ   7ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆ .23 ರಂದು ಆಯೋಜಿಸಲಾಗಿತ್ತು . ಇದರ   ಪ್ರಯುಕ್ತ ಏರ್ಪಡಿಸಲಾದ 5ವರ್ಷದೊಳಗಿನ ಬಾಲಕೃಷ್ಣ ಸ್ಪರ್ಧೆ ಯಲ್ಲಿ ಸುಮಾರು 25 ಮುದ್ದು ಪುಟಾಣಿಗಳು ಭಾಗವಹಿಸಿದ್ದು  .ಈ ಸ್ಪರ್ಧೆಯಲ್ಲಿ ಅಭಿಜ್ನಾ ಶೆಟ್ಟಿ ನೇಸರ ಪ್ರಥಮ ಸ್ಥಾನ ಪಡೆದು, ಯಶ್ವಿನ್ ಬರಾಯ ದ್ವಿತೀಯ ಸ್ಥಾನ ಪಡೆದುಕೊಂಡರು  ಶ್ರೀ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ಮತ್ತು ವಿವಿಧ ಸ್ಪರ್ಧೆಗಳನ್ನು ವೆನ್ಲಾಕ್ ಆಸ್ಪತ್ರೆ ಯ ಖ್ಯಾತ ಮೂತ್ರ ರೋಗ ತಜ್ಞ  ತೆಂಕಕಾರಂದೂರಿನ ಡಾ. ಸದಾನಂದ ಪೂಜಾರಿ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ವೇದಿಕೆಯಲ್ಲಿ ಗೌರವಾಧ್ಯಕ್ಷರಾಗಿ  ಯೋಗೀಶ್ ಕುಮಾರ್ ನಡಕ್ಕರ  ಶ್ರೀ. ಸ. ಗೋ. ದೇವಸ್ಥಾನ  ಆಡಳಿತ ಮೊಕ್ತೇ ಸರ  ಸುಬ್ರಮಣ್ಯ ನೂರಿತ್ತಾಯ , ಅಧ್ಯಕ್ಷ ಶರತ್ ಕುಮಾರ್ ಕಡಂಬು,  ಶ್ರೀ. ಸ. ಗೋ. ದೇ. ಸೇವಾ ಸಮಿತಿ ಸದಸ್ಯ  ಪದ್ಮ ನಾಯ್ಕ್ ಖಂಡಿಗ. ಉಪಸ್ಥಿತರಿದ್ದರು, ಈ ಉತ್ಸವ ದಲ್ಲಿ ಮೊಸರು ಕುಡಿಕೆ, ಮಡಿಕೆ ಒಡಿಯುವು ದು, ಗುಂಡೆಸೆತ, ಹಗ್ಗಜಗ್ಗಾಟ, ನಿಧಾನ ಬೈಕ್ ಓಟದ ಸ್ಪರ್ಧೆ, ಸಂಗೀತ ಕುರ್ಚಿ, ಲಕ್ಕಿಗೆಮ್, ಭಕ್ತಿ ಗೀತೆ, 5ವರ್ಷೋದೊಳಗಿನ ಮಕ್ಕಳಿಗೆ ಬಾಲಕೃಷ್ಣ ಸ್ಪರ್ಧೆ ಜರಗಿದವು,

 

 

 

 

 

 

 

ಮದ್ಯಾಹ್ನ ಶ್ರೀ ದೇವರಿಗೆ ವಿಶೇಷ ಮಹಾಪೂಜೆ ಪೂಜೆ,, ಸಾರ್ವಜನಿಕರಿಗೆ ಅನ್ನಸಂತರ್ಪಣೆ ಜರಗಿ,, ಸಾಯಂಕಾಲ ಭಜನೆ, ಪೂಜೆ, ಜರಗಿ, ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭ ವೇದಿಕೆಯಲ್ಲಿ ಯೋಗೀಶ್ ಕುಮಾರ್,  skdrdp  ದ. ಕ. ಜಿಲ್ಲಾ ನಿರ್ದೇಶಕ  ಸತೀಶ್ ಶೆಟ್ಟಿ ಅಲಿಮಾರು.  ಶ್ರೀಶ ಮುಚ್ಚಿನ್ನಾ ಯ ಉಪಸ್ಥಿತರಿದ್ದರು.  ಸುಧಾ ರಮಾನಂದ ಸಾಲ್ಯಾನ್  ನಿರೂಪಿಸಿ ಭೋಜಪೂಜಾರಿ ಧನ್ಯವಾದವಿತ್ತರು, ಪ್ರದಾನ ಅರ್ಚಕರು, ತಂತ್ರಿ ಗಳು, ಸಮಿತಿಯ ಸರ್ವ ಸದಸ್ಯರುಗಳು ಹಾಗೂ ಊರಿನ ಪರಊರಿನ ಭಗವದ್ಭತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.