ಪಣೆಜಾಲು ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಉತ್ಸವ

ಕುವೆಟ್ಟು : ಇಲ್ಲಿಯ ಪಣೆಜಾಲು ಶ್ರೀ ಸ್ಟಾರ್ ಯುವಕ ಮಂಡಲ(ರಿ).ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವವು  ಆ.23 ರಂದು ಪಣೆಜಾಲು ಮೈದಾನದಲ್ಲಿ ನಡೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಗುರುವಾಯನಕೆರೆ ವಲಯ ಕೃಷಿ ಅಧಿಕಾರಿ ಬಾಸ್ಕರ್   ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಮುಂದಿನ ಪೀಳಿಗೆಗೆ ಧಾರ್ಮಿಕ ಸಂಸ್ಕೃತಿಗಳನ್ನು ತಿಳಿಸುವ ಮೂಲಕ ಶ್ರೀ ಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ಹಾಗೂ ವಿವಿಧ ಅಟೋಟ ಸ್ಪರ್ಧೆಗಳನ್ನು ಸ್ಥಳೀಯರು ಕಳೆದ 27 ವರ್ಷಗಳಿಂದ ಮುಂದುವರಿಸಿದ ಯವಕರ ಸಾಧನೆಗೆ ಅಭಿನಂದನೆ ಹೇಳಿದರು.  ಶ್ರೀ ಸ್ಟಾರ್ ಯುವಕ ಮಂಡಲ ಅಧ್ಯಕ್ಷ ಯತೀಶ್ ಸಿರಿಮಜಲು ಸಭಾ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಮತ್ತು ಗ್ರಾಮಾಭಿವೃಧ್ಧಿ ಬ್ಯಾಂಕಿನ ನಿವೃತ್ತ ಮೇಲ್ವಿಚಾರಕ ಶಶಿಧರ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ತಾಲೂಕಿನ ನೆರೆಯ ಪ್ರವಾಹದಿಂದ ಉಂಟಾದ ನಷ್ಟ ಪರಿಹಾರಕ್ಕೆ ನಿಧಿ ಕುಂಭದ ಮೂಲಕ ಧನಸಂಗ್ರಹಿಸಿ ಪರಿಹಾರ ನಿಧಿಗೆ ನೀಡುವುದಾಗಿ ಸ್ಥಳೀಯರು ಪ್ರತಿಜ್ಞೆಯನ್ನು ಮಾಡಿದರು.ಹಾಗೂ ಕೃಷಿಕರಿಗೆ ತರಕಾರಿ ಗಿಡ ಮತ್ತು ಬೀಜಗಳನ್ನು ಉಚಿತವಾಗಿ ವೇದಿಕೆಯಲ್ಲಿ ನೀಡಲಾಯಿತು.  ಸಂಜೆ ಸಮಾರೊಪ ಸಮಾರಂಭದ ಅಧ್ಯಕ್ಷತೆಯನ್ನು ಯತೀಶ್ ಸಿರಿಮಜಲು ವಹಿಸಿದ್ದರು. ಕುವೆಟ್ಟು ಪಂ ಅಧ್ಯಕ್ಷ ಅಶೋಕ್ ಕೋಟ್ಯಾನ್, ಜೆ.ಸಿ.ಐ ವ್ಯವಹಾರ ವಿಭಾಗದ ನಿರ್ದೆಶಕ ಜೆ.ಎಫ್.ಎಂ ಚಿದಾನಂದ ಇಡ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದು ಆಟೋಟ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು. ಸಾರ್ವಜನಿಕರಿಗೆ ವಿವಿಧ ಅಟೋಟ ಸ್ಪರ್ಧೆಗಳು ನಡೆಯಿತು.

ಸಂಘದ ಪದಾಧಿಕಾರಿಗಳಾದ ಚಂದ್ರಶೇಖರ ಕುಲಾಲ್,ನಾಗೇಶ್ ಪೂಜಾರಿ, ವಿಲ್ಸನ್‌ ನೆಲ್ಸನ್ ಮೋನಿಸ್,ಸತೀಶ ಗೌಡ, ರಾಹುಲ್ ಶೆಟ್ಟಿ, ಜಗನ್ನಾಥ ಕುಲಾಲ್,ರಾಹುಲ್‌ ಪೂಜಾರಿ,ಯತೀಶ್,ಧನಂಜಯ ಶೆಟ್ಟಿ, ಹರೀಶ್ ಸಪಲ್ಯ,ಜೀವನ್ ಕುಲಾಲ್ ಹಾಗೂ ಸದಸ್ಯರು ಸಹಕರಿಸಿದರು ಸ್ಥಳೀಯರು, ಕ್ರೀಡಾ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ಕುಮಾರ್ ಸಮನ್ವಿತ್ ಭಂಡಾರಿ ಪ್ರಾರ್ಥನೆ ಮಾಡಿದರು. ರಾಜೇಶ ಪೂಜಾರಿ ಅದೇಲು ಸ್ವಾಗತಿಸಿದರು.ಶಾಂತಿರಾಜ್ ಜೈನ್ ಮುಗುಳಿ ಕಾರ್ಯ ಕ್ರಮ ನಿರೂಪಣೆ ಮಾಡಿದರು. ಪೂವಪ್ಪ ಭಂಡಾರಿ ಧನ್ಯವಾದ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.