ನಾಳೆಯಿಂದ ಪ್ರತೀ ಶನಿವಾರ ಫುಲ್ ಡೇ ಕ್ಲಾಸ್

ಬೆಳ್ತಂಗಡಿ: ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿದ ಅತಿವೃಷ್ಟಿಯಿಂದಾಗಿ ದ.ಕ ಜಿಲ್ಲಾಧಿಕಾರಿ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿದ್ದರು. ಇದರಿಂದಾಗಿ ಶಾಲೆಗಳಲ್ಲಿ ಉಂಟಾದ ತರಗತಿಯ ಕೊರತೆಯನ್ನು ನಿಭಾಯಿಸುವ ಉದ್ದೇಶದಿಂದ ಇನ್ನು ಮುಂದೆ ಪ್ರತಿ ಶನಿವಾರ ಮದ್ಯಾಹ್ನದ ಬಳಿಕವೂ ತರಗತಿಗಳನ್ನು ನಡೆಸುವಂತೆ ಶಿಕ್ಷಣ ಇಲಾಖೆಯು ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಿದೆ.
ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕಿನಲ್ಲಿ ಈ ವಿಶೇಷ ತರಗತಿಗಳು ಆ.24 ರಿಂದಲೇ ಆರಂಭಗೊಳ್ಳಲಿದ್ದು ಭಾನುವಾರ ಯಾವುದೇ ತರಗತಿಗಳು ನಡೆಯುವುದಿಲ್ಲ ಎಂದು ದ.ಕ     ಡಿ.ಡಿ.ಪಿ.ಐ   ವೈ. ಶಿವರಾಮಯ್ಯ ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.