ಸುಳ್ಳುಸುದ್ಧಿ ಭಿತ್ತರಿಸಿದ ಮಾಧ್ಯಮಗಳ ವಿರುದ್ಧ ಎಸ್‌ಎಸ್‌ಎಫ್ ಬೆಳ್ತಂಗಡಿ ಡಿವಿಷನ್ ವತಿಯಿಂದ ರಾಜ್ಯಪಾಲರಿಗೆ ದೂರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಇತ್ತೀಚೆಗೆ ಕೆಲವು ಮಾಧ್ಯಮಗಳು ಗೋವಿಂದೂರಿನ ನಿವಾಸಿ, ಮಂಜನಾಡಿ ಅಲ್‌ಮದೀನಾ ಸಂಸ್ಥೆಯಲ್ಲಿ ಸೇವೆಗೈಯುತ್ತಿರುವ ರವೂಫ್ ಮುಸ್ಲಿಯಾರ್ ಎಂಬವರನ್ನು ಭಯೋತ್ಪಾದಕನಾಗಿ ಚಿತ್ರೀಕರಿಸಿ, ಸುಳ್ಳುಸುದ್ಧಿ ಬಿತ್ತರಿಸಿದ ಹಿನ್ನೆಲೆಯಲ್ಲಿ, ಅಂತಹ ಮಾಧ್ಯಮಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಎಸ್‌ಎಸ್‌ಎಫ್ ಬೆಳ್ತಂಗಡಿ ಡಿವಿಷನ್ ಸಮಿತಿ ವತಿಯಿಂದ ರಾಜ್ಯಪಾಲರಿಗೆ ದೂರು ಸಲ್ಲಿಸಿದೆ ಎಂದು   ಎಸ್‌ಎಸ್‌ಎಫ್ ಜಿಲ್ಲಾ ನಾಯಕ ಎಂ.ಶರೀಫ್ ಬೆರ್ಕಳ ತಿಳಿಸಿದರು.
ಅವರು ಆ.23 ರಂದು ಬೆಳ್ತಂಗಡಿ ಪತ್ರಿಕಾಭವನದಲ್ಲಿ ಕರೆಯಲಾದ ಪತ್ರಿಕಗೊಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಇತ್ತೀಚೆಗೆ ಕೆಲವು ಸಾಮಾಜಿಕ ಜಾಲತಾಣ, ಟಿವಿ, ಪತ್ರಿಕೆ, ಅಂತರ್ಜಾಲ ಮಾಧ್ಯಮಗಳಲ್ಲಿ ನ್ಯಾಯತರ್ಪು ಗ್ರಾಮದ ಗೋವಿಂದೂರಿನಿಂದ ಪಾಕಿಸ್ತಾನಕ್ಕೆ ಸ್ಯಾಟಲೈಟ್ ಕರೆ ಎಂಬ ವಿಚಾರದಲ್ಲಿ ಗೋವಿಂದೂರು ನಿವಾಸಿ, ಪ್ರಸ್ತುತ ಮಂಗಳೂರಿನ ಮಂಜನಾಡಿ ಅಲ್ ಮದೀನಾ ಸಂಸ್ಥೆಯಲ್ಲಿ ಕಳೆದ 16 ವರುಷಗಳಿಂದ ಸೇವೆಗೈಯ್ಯುತ್ತಿರುವ ರವೂಫ್ ಎಂಬವರನ್ನು ರಾಷ್ಟ್ರೀಯ ತನಿಖಾ ದಳ(NIA) ತೀವ್ರ ವಿಚಾರಣೆಗೊಳಪಡಿಸಿ ಬಂಧಿಸಿದೆ ಎಂಬುವುದಾಗಿ ನಿರಂತರವಾಗಿ ಸುಳ್ಳು ಸುದ್ಧಿಗಳನ್ನು ಬಿತ್ತರಿಸಲಾಗಿತ್ತು. ಇದರಿಂದಾಗಿ ರವೂಫ್ ರವರ ಕುಟುಂಬದಲ್ಲಿ ಹಾಗೂ ಸಮಾಜದಲ್ಲಿ ತಪ್ಪುಕಲ್ಪನೆಗಳು ರವಾನೆಯಾಗಿತ್ತು. ಭಯೋತ್ಪಾದಕ ಪಟ್ಟ ಕಟ್ಟಿಕೊಂಡು ತೀವ್ರ ಮುಖಭಂಗಕ್ಕೆ ಒಳಪಟ್ಟು ರವೂಫ್ ರವರು ಮಾನಸಿಕವಾಗಿ ನೊಂದುಕೊಂಡಿದ್ದು, ಈ ಬಗ್ಗೆ ಅವರು ಈಗಾಗಲೇ ದೂರುಕೂಡ ಸಲ್ಲಿಸಿರುತ್ತಾರೆ. ಪರಸ್ಪರ ಧರ್ಮಗಳವರು ಶಾಂತಿ ಸೌಹಾರ್ದತೆಯಿಂದ ಜೀವಿಸುತ್ತಿರುವ ಈ ಜಿಲ್ಲೆಯಲ್ಲಿ ಸಮಾಜದ ಸ್ವಾಸ್ಥ್ಯ ಕದಡಲು ಕೆಲವು ಸ್ಥಾಪಿತ ಹಿತಾಶಕ್ತಿಗಳು ಈ ಷಡ್ಯಂತ್ರ ರೂಪಿಸಿದ್ದು, ಮುಸ್ಲಿಂ ಸಮಾಜವನ್ನು ಗುರಿಯಾಗಿಸಿ, ಕೆಲವು ಮಾಧ್ಯಮಗಳು ಉದ್ದೇಶಪೂರ್ವಕವಾಗಿ ನಡೆಸುತ್ತಿರುವ ಈ ಕೃತ್ಯವನ್ನು ಎಸ್‌ಎಸ್‌ಎಫ್ ಬೆಳ್ತಂಗಡಿ ಡಿವಿಷನ್ ಸಮಿತಿ ತೀವ್ರವಾಗಿ ಖಂಡಿಸುತ್ತದೆ.
ಆದುದರಿಂದ ಸಂಬಂಧಪಟ್ಟ ಇಲಾಖೆಯ ಮೂಲಕ ಈ ಸುದ್ದಿಯ ಮೂಲವನ್ನು ಹುಡುಕಿ, ಕಪೋಲಕಲ್ಪಿತ ಸುದ್ದಿ ಹಬ್ಬಿದ ಮಾಧ್ಯಮಗಳ ವಿರುದ್ಧವ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ರಾಜ್ಯ ಪೊಲೀಸ್ ಉನ್ನತ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಘನವೆತ್ತ  ರಾಜ್ಯಪಾಲರಿಗೆ ನೀಡಿದ ದೂರು ಅರ್ಜಿಯಲ್ಲಿ ವಿನಂತಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಇಕ್ಬಾಲ್ ಮಾಚಾರ್, ಬೆಳ್ತಂಗಡಿ ಡಿವಿಷನ್ ಅಧ್ಯಕ್ಷ ಅಯ್ಯೂಬ್ ಮಹ್ಳರಿ ಕಾವಳಕಟ್ಟೆ, ಪ್ರಧಾನ ಕಾರ್ಯದರ್ಶಿ ಶರೀಫ್ ನಾವೂರು, ಕೋಶಾಧಿಕಾರಿ ನಝೀರ್ ಮದನಿ ಪುಂಜಾಲಕಟ್ಟೆ ಉಪಸ್ಥಿತರಿದ್ದರು. ಪತ್ರಿಕಾಗೋಷ್ಠಿಗೂ ಮುನ್ನ ಎಸ್ಸೆಸ್ಸೆಫ್ ನಿಯೋಗ ತಹಶಿಲ್ದಾರರ ಮೂಲಕ ದೂರು ಸಲ್ಲಿಸಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.