ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದ ವತಿಯಿಂದ ವಿದ್ಯಾರ್ಥಿಗಳಿಗೆ ರ್ಪೊತ್ಸಾಹಧನ ಹಾಗೂ ಸಮವಸ್ತ್ರ ವಿತರಣೆ

ಲಾಯಿಲಾ : ಶ್ರೀ ಸದಾಶಿವರುದ್ರ ದೇವಸ್ಥಾನದ ವತಿಯಿಂದ ಅನಂತರತ್ನ ಸಭಾಭವನದಲ್ಲಿ  ಆ .22 ರಂದು ವಿದ್ಯಾರ್ಥಿಗಳಿಗೆ ಪೋತ್ಸಾಹಧನ ಹಾಗೂ ಸಮವಸ್ತ್ರ ವಿತರಣೆ ಕಾರ್ಯಕ್ರಮವು    ಜರುಗಿತು .ಗ್ರಾಮೀಣ ಪ್ರದೇಶದ ರೈತಾಪಿ ಕುಟುಂಬದ ಮಕ್ಕಳಿಗೆ ಸೂಕ್ತ ಪೋತ್ಸಾಹ ನೀಡಿದಲ್ಲಿ ಅವರು ಉತ್ತಮ ಸಾಧನೆ ಮಾಡಬಲ್ಲರು, ಈ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮುಂದಿನ ವರ್ಷಗಳಲ್ಲಿ ಜಿಲ್ಲಾ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ ಶೈಕ್ಷಣಿಕ/ ಕ್ರೀಡಾ/ ಸಾಂಸ್ಕ್ರತಿಕ ಚಟುವಟಿಕೆಗಳಲ್ಲಿ ಉತ್ತಮ ಹೆಸರು ಗಳಿಸಿದ ಸಾಧಕರಿಗೆ ಕೂಡಾ ಪೋತ್ಸಾಹಧನವನ್ನು ನೀಡುವುದರ ಮೂಲಕ ಈ ಕಾರ್ಯಕ್ರಮವನ್ನು ಇನ್ನೂ ವಿಸ್ತೃತ ರೀತಿಯಲ್ಲಿ ಮುಂದುವರಿಸಲಾಗುವುದು ಎಂದು ಸುರ್ಯ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ   ಸುಭಾಶ್ಚಂದ್ರ ಸುರ್ಯಗುತ್ತು ತಿಳಿಸಿದರು. ಅವರು ಸುರ್ಯ ಶ್ರೀಸದಾಶಿವರುದ್ರ ದೇವಸ್ಥಾನದ ವತಿಯಿಂದ ಅನಂತರತ್ನ ಸಭಾಭವನದಲ್ಲಿ ಜರಗಿದ ವಿದ್ಯಾರ್ಥಿಗಳಿಗೆ ಪೋತ್ಸಾಹಧನ ಹಾಗೂ ಸಮವಸ್ತ್ರ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ, ಒಟ್ಟು ಸುಮಾರು ರೂ 3ಲಕ್ಷ ವೆಚ್ಚದಲ್ಲಿ, ಹೈಸ್ಕೂಲು, ಪದವಿಪೂರ್ವ, ಪದವಿ, ಹಾಗೂ ಡಿಪ್ಲೋಮಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ 103 ವಿದ್ಯಾರ್ಥಿಗಳಿಗೆ ಪೋತ್ಸಾಹಧನ ಹಾಗೂ ನಡ, ಕನ್ಯಾಡಿ, ಗ್ರಾಮಗಳ 8 ಅಂಗನವಾಡಿ ಕೇಂದ್ರಗಳ 242 ಮಕ್ಕಳಿಗೆ ಸಮವಸ್ತ್ರ ವಿತರಣೆ ಮಾಡಲಾಯಿತು.
ಸತೀಶ್ಚಂದ್ರ ಸುರ್ಯಗುತ್ತು ಸ್ವಾಗತಿಸಿ,ಸ. ಕಿ. ಪ್ರಾ. ಶಾಲೆಯ ಶಿಕ್ಷಕಿ   ಜಯ ವಂದಿಸಿದರು. ಶ್ರೀ ಮುನಿರಾಜ ಅಜ್ರಿ ಕಾರ್ಯಕ್ರಮ ನಿರ್ವಹಿಸಿದರು. ದೇವಸ್ಥಾನದ ಅಭಿವೃಧ್ದಿ ಸಮಿತಿ ಅಧ್ಯಕ್ಷ  ರಾಜಶೇಖರ ಅಜ್ರಿ, ಗ್ರಾಮ ಪಂಚಾಯತ್ ಸದಸ್ಯರಾದ, ಶ್ರೀಮತಿ ವೇದಾವತಿ,ವಿಜಯ ಗೌಡ, ಶ್ರೀಮತಿ ಶಶಿಕಲಾ ಜೈನ್, ಶಿಕ್ಷಣ ಇಲಾಖೆಯ ಬಂಗಾಡಿ ವಲಯದ ಸಿ. ಅರ್. ಪಿ ಶ್ರೀ ರಮೇಶ್ ಪೈಲಾರ್, ಅಂಗನವಾಡಿ ಕೇಂದ್ರದ ಸಿ.ಡಿ.ಪಿ.ಒ  ಪ್ರೀಯ ಆಗ್ನೇಸ್ ಚಾಕೊ,   ರತ್ನಾವತಿ,  ಸುಲೋಚನ, ಶಾಲಾ ಶಿಕ್ಷಕಿಯರು, ವಿದ್ಯಾರ್ಥಿಗಳ ಪೋಷಕರು, ಗ್ರಾಮಸ್ಥರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.