ಆ.24 ಮಡಂತ್ಯಾರು 30ನೇ ವರ್ಷದ ಮೊಸರುಕುಡಿಕೆ

ಮಡಂತ್ಯಾರು: ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಮಡಂತ್ಯಾರು ಇದರ ಪ್ರಯುಕ್ತ ಮಡಂತ್ಯಾರು ಗಣಪತಿ ಮಂಟಪದಲ್ಲಿ 30ನೇ ವರ್ಷದ ಮೊಸರು ಕುಡಿಕೆ ಉತ್ಸವವು ಆ.24 ರಂದು ನಡೆಯಲಿದೆ.
ಮೊಸರು ಕುಡಿಕೆ ಉತ್ಸವ ಉದ್ಘಾಟನೆಯನ್ನು ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್‌ನ ಮಾಲಕ ಮೋಹನ್ ಚೌಧರಿ ನೆರವೇರಿಸಲಿದ್ದಾರೆ. ಉದ್ಯಮಿ ಯೋಗೀಶ್ ಪೂಜಾರಿ ಕಡ್ತಿಲ ಅಧ್ಯಕ್ಷತೆ ವಹಿಸಲಿದ್ದಾರೆ. ರೆಚೆಲ್ ಮೆಮೋರಿಯಲ್ ಪದವಿ ಪೂರ್ವ ಕಾಲೇಜು ಮಂಗಳೂರಿನ ಪ್ರಾಚಾರ್ಯ ವಿಠಲ ಎ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಎಲ್‌ಸಿಆರ್ ಸಮೂಹ ವಿದ್ಯಾಸಂಸ್ಥೆ ಕಕ್ಯೆಪದವು ಇದರ ಸಂಚಾಲಕ ರೋ| ರೋಹಿನಾಥ ಪಾದೆ ವಹಿಸುವರು. ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್ ಭಾರತೀ ದಿನೇಶ್ ಬಹುಮಾನ ವಿತರಿಸುವರು. ಮುಖ್ಯ ಅತಿಥಿಗಳಾಗಿ ಕು| ಚೈತ್ರಾ ಕುಂದಾಪುರ, ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಠಾಣಾಧಿಕಾರಿ ಸೌಮ್ಯ ಜೆ, ಕಾಮಿಡಿ ಕಿಲಾಡಿ ಖ್ಯಾತಿಯ ಕಲಾವಿದ ಹಿತೇಶ್ ಕುಮಾರ್ ಕಾಪಿನಡ್ಕ ಭಾಗವಹಿಸಲಿದ್ದಾರೆ. ಮಾಜಿ ಸೈನಿಕರಾದ ನೆಲ್ಸನ್ ಲಸ್ರಾದೊ ಮದರ್‌ಲ್ಯಾಂಡ್ ಮತ್ತು ಪ್ರದೀಪ್ ಕುಮಾರ್ ಪ್ರತಿಮ ನಿಲಯ ಇವರನ್ನು ಗೌರವಿಸಲಾಗುವುದು.

ಮೊಸರುಕುಡಿಕೆ ಪ್ರಯುಕ್ತ ವಿವಿಧ ಸ್ಪರ್ಧೆಗಳಾದ ಬೈಕ್‌ರೇಸ್ ಪ್ರಥಮ ರೂ.10001/-, ದ್ವ್ವಿತೀಯ ರೂ.7001/-, ತೃತೀಯ ರೂ.5001/- ಗೋವಿಂದ ಸ್ಪರ್ಧೆ ರೂ.3333/, ಅಡಿಕೆಮರ ಏರುವುದು ರೂ.1555/-, ಕ್ರಾಸ್ ಕಂಟ್ರಿ ಪ್ರಥಮ ರೂ.1001/-, ದ್ವಿತೀಯ ರೂ.701/-, ತೃತೀಯ ತೂ.501/-, ಸ್ಲೋ ಸೈಕಲ್ ರೇಸ್, ಮೊಸರು ಕುಡಿಕೆ ಹೊಡೆಯುವುದು, ಗೋಣಿ ಚೀಲ ಓಟ, ರಂಗೋಲಿ ಬಿಡಿಸುವ ಸ್ಪರ್ಧೆ, ಶ್ರೀಕೃಷ್ಣ ವೇಷ ಸ್ಪರ್ಧೆ ಮೊದಲಾದ ಸ್ಪರ್ಧೆಗಳು ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಸಂಜೆ 3.00ರಿಂದ ಮಡಂತ್ಯಾರು ಸೇವಾ ಸಹಕಾರಿ ಬ್ಯಾಂಕ್‌ನ ಬಳಿಯಿಂದ ವಿವಿಧ ವೇಷಭೂಷಣಗಳು, ಕೀಲುಕುದುರೆ ನರ್ತನ, ಬ್ಯಾಂಡ್‌ಸೆಟ್ ಟ್ಯಾಬ್ಲೋಗಳೊಂದಿಗೆ ವೈಭವದ ಮೆರವಣಿಗೆ , ರಾತ್ರಿ ಭದ್ರಾವತಿ ಬೀಟ್ಸ್ ಆರ್ಕೇಸ್ಟ್ರಾ ಇವರಿಂದ ವೈವಿಧ್ಯಮಯ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.