ಅರಣ್ಯ ಗೋದಾಮಿನಿಂದ ಶ್ರೀಗಂಧ ಕಳವು ಪ್ರಕರಣ ಕರ್ತವ್ಯ ಲೋಪಗೈದ ಮೂವರ ಅಮಾನತು

ಬೆಳ್ತಂಗಡಿ: ಕೆಲದಿನಗಳ ಹಿಂದೆ ಬೆಳ್ತಂಗಡಿ ಅರಣ್ಯ ಇಲಾಖೆ ಗೋದಾಮಿ ನಿಂದ ಶ್ರೀಗಂಧ ಕಳವಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ನಿರ್ಲಕ್ಷ್ಯತೆ ತೋರಿದ ಅರಣ್ಯ ಇಲಾಖೆಯ ಮೂವರು ಸಿಬ್ಬಂದಿಗಳನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ. ಇಲಾಖೆಯ ಉಪವಲಯ ಅರಣ್ಯ ಅಧಿಕಾರಿ ರವೀಂದ್ರ ಅಂಕಲಗಿ, ಅರಣ್ಯ ರಕ್ಷಕರಾದ ಪಿ. ಶಂಕರ ಮತ್ತು ಭವಾನಿ ಶಂಕರ ಅವರು ಅಮಾನತುಗೊಂಡವರು. ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಇವರನ್ನು ಅಮಾನತು ಮಾಡಲಾಗಿದ್ದು, ಪೊಲೀಸ್ ಇಲಾಖೆಯ ಮೂಲಕ ಕಳವು ಪ್ರಕರಣದ ಮುಂದಿನ ತನಿಖೆ ಮುಂದುವರಿದಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.