ಗೋವಿಂದೂರು ರವೂಫ್ ಬಂಧನ ಕಪೋಲಕಲ್ಪಿತ: ಕಾನೂನುಕ್ರಮ ಆಗ್ರಹಿಸಿ ದೂರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳು, ಟಿವಿ, ಪತ್ರಿಕಾ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಬಿತ್ತರಗೊಂಡ ಗೋವಿಂದೂರಿನಿಂದ ಪಾಕಿಸ್ತಾನಕ್ಕೆ ಸ್ಯಾಟಲೈಟ್ ಕರೆ, ರವೂಫ್ ಬಂಧನ ಎಂಬ ವಿಚಾರ ಸಂಪೂರ್ಣ ಸತ್ಯಕ್ಕೆ ದೂರವಾದ ವಿಚಾರ. ಶಾಂತಿಯುತವಾಗಿ ಜೀವಿಸುತ್ತಿರುವ ಸಮಾಜದ ಸ್ವಾಸ್ಥ್ಯ ಹಾಳುಗೆಡವಲು ಕೆಲವು ಸ್ಥಾಪಿತ ಹಿತಾಶಕ್ತಿಗಳು ನಡೆಸುತ್ತಿರುವ ಷಡ್ಯಂತ್ರವೇ ಹೊರತು ಇದರಲ್ಲಿ ಯಾವುದೇ ಹುರುಳಿಲ್ಲ. ಈ ರೀತಿ ಒಂದು ಪ್ರತ್ಯೇಕ ಸಮೂಹವನ್ನು ಗುರಿಯಾಗಿಸಿ ಕೆಲವು ಮಾಧ್ಯಮಗಳು ನಡೆಸುತ್ತಿರುವ ಈ ನೀಚ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತಿದ್ದೇವೆ ಎಂದು ಬದ್ರ್ ಜುಮ್ಮಾ ಮಸ್ಜಿದ್ ಜಾರಿಗೆಬೈಲು ನಾಳ ಜಮಾಅತ್ ಅಧ್ಯಕ್ಷ ಅಬ್ಬೋನು ಶಾಫಿ ಪಲ್ಲಾದೆ ಮತ್ತು ಧರ್ಮಗುರು ಮುಹಮ್ಮದ್ ಯಾಸಿರ್ ಫಾಝಿಲ್ ತಿಳಿಸಿದರು.

ಆ. 21 ರಂದು ಬೆಳ್ತಂಗಡಿ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ನಮ್ಮ ಜಮಾಅತ್‌ಗೊಳಪಟ್ಟ ಗೋವಿಂದೂರು ನಿವಾಸಿಯೂ ಸದ್ರಿ ಮಂಗಳೂರಿನ ಮಂಜನಾಡಿ ಅಲ್ ಮದೀನಾ ಸಂಸ್ಥೆಯಲ್ಲಿ ಕಳೆದ 16 ವರುಷಗಳಿಂದ ಸೇವೆಗೈಯ್ಯುತ್ತಿರುವ ರವೂಫ್ ಮುಸ್ಲಿಯಾರ್ ಸರಳ ಸಜ್ಜನಿಕೆಯ ಸಾಮಾನ್ಯ ವ್ಯಕ್ತಿ. ಆದರೆ ಅವರ ವಿರುದ್ಧವೇ ಸಮೂಹ ಮಾಧ್ಯಮಗಳು ರಾಷ್ಟ್ರೀಯ ತನಿಖಾ ದಳ ತೀವ್ರ ವಿಚಾರಣೆಗೊಳಪಡಿಸಿ ಬಂಧಿಸಿದೆ ಎಂಬುದಾಗಿ ಕೆಲವು ದಿನಗಳಿಂದ ನಿರಂತರವಾಗಿ ಸುಳ್ಳು ಸುದ್ಧಿಗಳು ಬಿತ್ತರಿಸಿದೆ. ದಿ ಮಂಗಳೂರು ಮಿರರ್ ಎಂಬ ಅಂತರ್ಜಾಲ ಮಾಧ್ಯಮದಲ್ಲಿ ನಮ್ಮ ಜಮಾಅತ್‌ನ ವ್ಯಾಪ್ತಿಯಲ್ಲಿರುವ ಜಾರಿಗೆಬೈಲು-ನಾಳ, ಗೋವಿಂದೂರಿನಲ್ಲಿ ಮಸೀದಿಗಳಿಗೆ ಕೇರಳದಿಂದ ಹಲವು ಅಪರಿಚಿತ ವ್ಯಕ್ತಿಗಳು ನಿರಂತರ ಭೇಟಿ ನೀಡುತ್ತಿದ್ದು, ಮೀಟಿಂಗ್‌ಗಳನ್ನು ನಡೆಸುತ್ತಿದ್ದಾರೆ ಎಂಬುದಾಗಿಯೂ ತಪ್ಪು ಸಂದೇಶ ನೀಡಿದ್ದಾರೆ. ನಮ್ಮಲ್ಲಿ ಜಮಾತ್ ಕಮಿಟಿ ಇದ್ದು ಎಲ್ಲವೂ ಪಾರದರ್ಶಕವಾಗಿದೆಯೇ ಹೊರತು ಇದು ಸುಳ್ಳು ಸುದ್ದಿ. ಈ ಬಗ್ಗೆ ಈಗಾಗಲೇ ತಹಶಿಲ್ದಾರ್, ಎಸ್.ಐ ಮತ್ತು ಸರ್ಕಲ್ ಇನ್ಸ್‌ಪೆಕ್ಟರ್‌ಗೆ ಲಿಖಿತ ದೂರು ನೀಡಿದ್ದೇವೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ಜಮಾಅತ್ ಕಾರ್ಯದರ್ಶಿ ಹಾರಿಸ್ ಕುಕ್ಕುಡಿ, ಸದಸ್ಯ ನಾಸಿರ್ ನಡುತೊಟ್ಟು, ಜಾಲತಾಣದಲ್ಲಿ ಹೆಸರು ದುರುಪಯೋಗವಾಗಿ ಸಂತ್ರಸ್ತರಾಗಿರುವ ರವೂಫ್ ಮುಸ್ಲಿಯಾರ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.