ನೆರೆಬಾದಿತ ಪ್ರದೇಶಗಳಿಗೆ ಮಲೆನಾಡು ಜನಹಿತ ರಕ್ಷಣಾ ವೇದಿಕೆ ತಂಡ ಭೇಟಿ ಪರಿಶೀಲನೆ

 ಬೆಳ್ತಂಗಡಿ : ಬೆಳ್ತಂಗಡಿಯ ನೆರೆಪೀಡಿತ ಪ್ರದೇಶಗಳಿಗೆ ಆ.17  ಮಲೆನಾಡು ಜನಹಿತ ರಕ್ಷಣಾ ವೇದಿಕೆ ತಂಡ ಭೇಟಿ ನೀಡಿ ಪರಿಶೀಲಿಸಿತು.  ಸಂತ್ರಸ್ತರಿಗೆ ಸರಕಾರಿ ಇಲಾಖೆಗಳ ಸ್ಪಂದನೆಯ ವಾಸ್ತವಿಕ ವರದಿ ಅಧ್ಯಯನ ಮತ್ತು ವೀಕ್ಷಣೆ ಹಾಗೂ ಮುಂದೆ ಸಂತ್ರಸ್ತರ ಬದುಕು ಪುನರ್‌ರೂಪಿಸಿಕೊಳ್ಳಲು ಅಗತ್ಯವಿರುವಲ್ಲಿ ಸ್ಪಂದಿಸುವ ಉದ್ದೇಶದಿಂದ ನೆರೆಬಾದಿತ ಪ್ರದೇಶಗಳಾದ ಮಲವಂತಿಗೆ, ಚಾರ್ಮಾಡಿ ಹಾಗೂ ದಿಡುಪೆ ಗ್ರಾಮಗಳನ್ನ ಭೇಟಿಯಾಗಿ ಸಂತ್ರಸ್ತರು ಮತ್ತು ಮಲವಂತಿಗೆ ಪಂಚಾಯತ್ ಆಡಳಿತ ಹಾಗೂ ತಾ.ಪಂ. ಸದಸ್ಯ ಕೊರಗಪ್ಪ ಗೌಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿತು.

ಸರಕಾರದ ವಿವಿಧ ಇಲಾಖೆಗಳು ಅರ್ಹ ಸಂತ್ರಸ್ತರಿಗೆ ತುರ್ತಾಗಿ ಜವಾಬ್ದಾರಿಯಾಗಿ ಸ್ಪಂದಿಸಬೇಕು ಎಂದು ಒತ್ತಾಯಿಸಿರುವ ತಂಡ, ನೆರೆಸಂತ್ರಸ್ತ ಕುಟುಂಬಗಳಿಗೆ ಕೃಷಿ ಸಾಲದ ನೊಟೀಸ್ ನೀಡದಂತೆ ಕ್ರಮಕೈಗೊಳ್ಳಬೇಕು. ಅದಕ್ಕಾಗಿ ಕುಟುಂಬಗಳಿಗೆ ಪ್ರವಾಹದ ಅನುದಾನವನ್ನ ಅವರ ಖಾತೆಗೆ ನೇರ ಜಮೆಮಾಡುವ ಮೂಲಕ ಅವರನ್ನ ಸಾಲಮುಕ್ತರನ್ನಾಗಿಸಬೇಕು. ಸಂತ್ರಸ್ತರ ಜಮೀನಿನಲ್ಲಿನ ಪ್ರವಾಹದ ಹೂಳೆತ್ತುವ ಕಾರ್ಯಕ್ಕೆ ಅನುದಾನ ಮೀಸಲಿರಿಸಿ ತುರ್ತಾಗಿ ಟೆಂಡರ್ ಕರೆದು ಕಾರ್ಯಪ್ರವತ್ತವಾಗಬೇಕು ಎಂದು ಸರಕಾರವನ್ನು ಆಗ್ರಹಿಸಿದೆ. ಈ ಬಗ್ಗೆ ಆ.22  ರಂದು ಸುಬ್ರಹ್ಮಣ್ಯದಲ್ಲಿ ವೇದಿಕೆ ಪೂರ್ವಭಾವಿ ಸಭೆ ಆಯೋಜಿಸಿದೆ.
ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ, ಪ್ರಮುಖರಾದ ದಾಮೋದರ ಗುಂಡ್ಯ, ಸೂರ್ಯನಾರಾಯಣ ರಾವ್,  ಎಪಿಎಂಸಿ ಸದಸ್ಯ ಯಶೋಧರ ಕೋಣಾಜೆ, ಸುರೇಶ್ ಪುದುವೆಟ್ಟು ಮೊದಲಾದವರು ಉಪಸ್ಥಿತರಿದ್ದರು..

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.