ಧರ್ಮಸ್ಥಳ ಭಜನಾ ಕಮ್ಮಟದ ಪೂರ್ವಭಾವಿ ಸಭೆ

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಬೆಳ್ತಂಗಡಿ ತಾಲೂಕಿನ ಭಜನಾ ಮಂಡಳಿಗಳ ಸಭೆಯುಆ.೧೮ ರಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾ ಭವನದಲ್ಲಿ ನಡೆಯಿತು. ಭಜನಾ ಪರಿಷತ್ ತಾಲೂಕು ಅಧ್ಯಕ್ಷ ಕೆ. ಗಣೇಶ್ ಪ್ರಭು ಅಧ್ಯಕ್ಷತೆ ವಹಿಸಿದ್ದರು.
ಬೆಳ್ತಂಗಡಿ ವಲಯದ ಯೋಜನಾಧಿಕಾರಿ ಪ್ರದೀಪ್ ಜಿ. ಮಾತನಾಡಿ ಈ ಹಿಂದೆ ನೀಡಿದ ರೀತಿಯಲ್ಲಿಯೇ ಈ ವರುಷವೂ ಸರ್ವರೀತಿಯಲ್ಲಿ ಸಹಕಾರ ನೀಡುವಂತೆ ಮನವಿ ಮಾಡಿ, ಭಜನಾ ಕಮ್ಮಟದ ಆಯ್ಕೆಗೆ ಇರುವ ಮಾನದಂಡವಾದ ಪ್ರಾಯ, ಆರೋಗ್ಯ, ಸ್ವರ ಹಾಗೂ ಹೊಸಬರಿಗೆ ಅವಕಾಶ ಇದಕ್ಕೆ ಕಾರಣಗಳನ್ನು ನೀಡಿ ಆಯ್ಕೆ ಆದವರಿಗೆ ನೀಡುವ ಸಲಕರಣೆಗಳ ಬಗ್ಗೆಯೂ ಮಾಹಿತಿಯನ್ನು ನೀಡಿದರು.
ಗುರುವಾಯನಕೆರೆ ವಲಯದ ಯೋಜನಾಧಿಕಾರಿ ಯಶವಂತ್ ೮ ದಿನ ನಡೆಯುವ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ನೀಡಿ, ಕೊನೆಯ ದಿನ ನಡೆಯುವ ಭಜನಾ ಮಂಗಳೋತ್ಸವದಲ್ಲಿ ಎಲ್ಲರೂ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಡುವಂತೆ ವಿನಂತಿಸಿದರು. ವೇದಿಕೆಯಲ್ಲಿ ಗಣೇಶ್ ಭಟ್, ಭಜನಾ ಪರಿಷತ್ತು ತಾಲೂಕು ಕಾರ್ಯದರ್ಶಿ ಜನಾರ್ಧನ ಉಪಸ್ಥಿತರಿದ್ದರು.
ವಲಯ ಮಟ್ಟದ ಎಲ್ಲಾ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು ಭಾಗವಹಿದ್ದರು. ಸತೀಶ್ ಪೈ ಪ್ರಾರ್ಥಿಸಿ, ಯೋಜನಾಧಿಕಾರಿ ಯಶವಂತ್ ಸ್ವಾಗತಿಸಿ, ಚಾರ್ಮಾಡಿ ವಲಯದ ರವಿ ವಂದಿಸಿ, ಯೋಜನೆಯ ಬೆಳ್ತಂಗಡಿ ವಲಯದ ಮೇಲ್ವಿಚಾರಕ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.