ಕುಲಾಲ – ಕುಂಬಾರರ ಸಂಘದಿಂದ ನೆರೆ ಪೀಡಿತರಿಗೆ ಸಹಾಯಧನ

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ (ರಿ), ಗುರುವಾಯನಕೆರೆ ಇದರ ವತಿಯಿಂದ ಬೆಳ್ತಂಗಡಿ ತಾಲೂಕಿನಾದ್ಯಾಂತ ಸುರಿದ ಭೀಕರ ನೆರೆ ಪ್ರವಾಹದಿಂದ ಸಂತ್ರಸ್ತರಾದವರ ಪುನರ್ವಸತಿಗೆ  ಶಾಸಕರಾದ  ಹರೀಶ್ ಪೂಂಜ ರವರ ನೇತೃತ್ವದ ಕಾಳಜಿ ಬೆಳ್ತಂಗಡಿ ಫ್ಲಡ್ ರಿಲೀಫ್ ಫಂಡ್‌ಗೆ ರೂಪಾಯಿ 20,000/- ಗಳ ಸಹಾಯ ಧನವನ್ನು ದಿನಾಂಕ ಜು.19 ರಂದು  ಶಾಸಕರ ಕಛೇರಿ ಶ್ರಮಿಕ ದಲ್ಲಿ ಮಾನ್ಯ  ಹರೀಶ್ ಪೂಂಜ ರವರ ಕಛೇರಿಯ ಆಪ್ತ ಸಹಾಯಕ  ಮಂಜುನಾಥ  ರವರಿಗೆ ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಅಧ್ಯಕ್ಷ   ಹರೀಶ್ ಕಾರಿಂಜ ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸೋಮಯ್ಯ ಹನೈನಡೆ, ಕಾರ್ಯದರ್ಶಿ ಸಂತೋಷ್ ಭಾರ್ಗವಿ, ಜೊತೆ ಕಾರ್ಯದರ್ಶಿ ಉಮೇಶ್ ಕುಲಾಲ್, ಕೋಶಾಧಿಕಾರಿ ವಸಂತ್ ಕುಲಾಲ್, ಹಿರಿಯ ಸದಸ್ಯ ಹೆಚ್. ಪದ್ಮ ಕುಮಾರ್, ನೀ ರ್ದೇಶಕರುಗಳಾದ ಲಿಂಗಪ್ಪ ಮೂಲ್ಯ ಜಿ. ಕೆರೆ, ಪುಷ್ಪರಾಜ್ ಕುಲಾಲ್ ಲಾಯಿಲ, ಮಿಥುನ್ ಕುಲಾಲ್ ಆಳಕ್ಕೆ, ಹರೀಶ್ ಮೂಲ್ಯ ನಾರಾವಿ, ನಿರಂಜನ್ ಶಿರ್ಲಾಲ್, ಶ್ರೀಮತಿ ಶೋಭಾ ನಾಲ್ಕೂರು,  ಮಚ್ಚಿನ  ದಯಾ ಮಾಧವ ಜಿ. ಕೆರೆ, ಯುವ ವೇದಿಕೆಯ ಅಧ್ಯಕ್ಷ ಲೋಕೇಶ್ ಕುಲಾಲ್, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಮೋಹನ್ ಜಿ ಕುಲಾಲ್, ಸಂಘದ ಮಾಜಿ ಕಾರ್ಯದರ್ಶಿ ಮೋಹನ್ ಕಂಚಿಂಜ,  ಶಾಂಭವಿ ಸೋಮಯ್ಯ, ಬಿಂಬ ಧ್ವನಿ ಪತ್ರಿಕೆಯ ಪ್ರತಿನಿಧಿ ಬಿ. ಹೆಚ್. ರಾಜು ಮತ್ತು ಕುಲಾಲ ಮಂದಿರದ ಮೆನೇಜರ್ ಮುಖೇಶ್ ಕುಲಾಲ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.