ಶನಿವಾರ ಮತ್ತು ಭಾನುವಾರ ತರಗತಿ ನಡೆಸಲು ನಿರ್ಧಾರ

ಬೆಳ್ತಂಗಡಿ : ತಾಲೂಕಿನಲ್ಲಿ ಭಾರೀ ಮಳೆ,ಪ್ರವಾಹದಿಂದಾಗಿ ಶಾಲೆಗಳಿಗೆ ನೀಡಿದ್ದ ರಜೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಶನಿವಾರ ಅಥವಾ ರವಿವಾರ ತರಗತಿಗಳನ್ನು ನಡೆಸಲು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ವಿಪರೀತ ಮಳೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜಿಲ್ಲಾಡಳಿತ ಸರಣಿ ರಜೆ ನೀಡಿತ್ತು. ವಿದ್ಯಾರ್ಥಿಗಳಿಗೆ ಸತತ 5 ದಿನಗಳ ಕಾಲ ರಜೆ ನೀಡಲಾಗಿತ್ತು . ಆದರೆ ಇದರಿಂದ ಪಠ್ಯ ಅಪೂರ್ಣಗೊಳ್ಳುವ ಸಾಧ್ಯತೆಯಿದ್ದು ಇದಕ್ಕೆ ಪರಿಹಾರವಾಗಿ ಶನಿವಾರ ಮಧ್ಯಾಹ್ನದ ಅನಂತರ ಅಥವಾ ರವಿವಾರ ತರಗತಿ ನಡೆಸಲು ಸೂಚಿಸಲಾಗಿದೆ. ಕಳೆದ ಮಳೆಗಾಲದಲ್ಲೂ ಭಾರೀ ಮಳೆ ಉಂಟಾದ ವೇಳೆ ಘೋಷಿಸಿದ ರಜೆಗಳನ್ನು ಹೆಚ್ಚುವರಿ ತರಗತಿ ನಡೆಸಿ ಸರಿದೂಗಿಸಲಾಗಿತ್ತು.
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಬಂದ ಸೂಚನೆಯಂತೆ ಪರಿಸ್ಥಿತಿ ಸಹಜಕ್ಕೆ ಬಂದ ಬಳಿಕ ಹೆಚ್ಚುವರಿ ತರಗತಿ ಆರಂಭಿಸಬಹುದು. ರಸ್ತೆ,ಸೇತುವೆ ಹಾನಿಯಾಗಿರುವ ಕಡೆ ವಿದ್ಯಾರ್ಥಿಗಳನ್ನು ಹಾಜರಾಗಲು ಒತ್ತಾಯಿಸಬೇಕಾಗಿಲ್ಲ. ಅಲ್ಲದೆ ನೆರೆ ಪೀಡಿತ ಭಾಗಗಳ ವಿದ್ಯಾರ್ಥಿಗಳ ಆರೋಗ್ಯದ ಕಡೆಗೂ ಗಮನ ನೀಡಬೇಕು ಎಂದು ಸೂಚಿಸಿದೆ.
ಶಾಲೆ ಸ್ಥಿತಿ ಪರಿಶೀಲಿಸಿದ ಬಳಿಕ ತರಗತಿ
ನೆರೆ ಪೀಡಿತ ಪ್ರದೇಶಗಳಲ್ಲಿ ಶಾಲೆ ಆರಂಭಿಸುವ ಮುನ್ನ ಎಂಜಿನಿಯರ್ ಮೂಲಕ ಕಟ್ಟಡದ ಸ್ಥಿತಿಗತಿ ಪರಿಸೀಲಿಸಿ ಕಟ್ಟಡದ ಕ್ಷಮತಾ ದೃಢಪತ್ರ ಸಾರ್ವಜನಿಕ ಇಲಾಖೆಗೆ ನೀಡುವಂತೆ ಸೂಚಿಸಲಾಗಿದೆ.
ಮೂರು ದಿನಗಳೂಳಗೆ  ನಿರ್ಧಾರ
ಮುಂದಿನ ಹತ್ತು ದಿನಗಳ ಕಾಲ ಮಧ್ಯಾಹ್ನದ ಬಳಿಕ ತರಗತಿ ನಡೆಯುತ್ತದೆ. ಶನಿವಾರವೂ ಅಥವಾ ಭಾನುವಾರವೂ ಎಂಬುದರ ಬಗ್ಗೆ ಇನ್ನೂ ನೀರ್ಧಾರವಾಗಿಲ್ಲ 3  ದಿನದೊಳಗೆ ಆ ಬಗ್ಗೆ ತಿಳಿಸಲಾಗುವುದು ಎಂದು ಡಿಡಿಪಿಐ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.