ಮಾಜಿ ಸಿಎಂ ಹೆಚ್‌ಡಿಕೆ ಯಿಂದ ನೆರೆ, ಮಳೆಹಾನಿ ಸಂತ್ರಸ್ತರಿಗೆ ಅಭಯ

ಬೆಳ್ತಂಗಡಿ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿಯ ಹಿನ್ನೆಲೆಯಲ್ಲಿ ಆ. 18 ರಂದು ಬೆಳ್ತಂಗಡಿಗೆ ಆಗಮಿಸಿದರು.
ರಸ್ತೆ ಮಾರ್ಗದ ಮೂಲಕ ಆಗಮಿಸಿದ ಮಾಜಿ ಸಿಎಂ ಧರ್ಮಸ್ಥಳ ದೇವಸ್ಥಾನಕ್ಕೆ ಭೇಟಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಬಳಿಕ ಸನ್ನಿಧಿ ವಸತಿ ಗೃಹದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.
ಅಲ್ಲಿಂದ ಚಾರ್ಮಾಡಿ ಗ್ರಾ.ಪಂ.ಗೆ ಆಗಮಿಸಿ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದರು. ಬಳಿಕ ಜೆಡಿಎಸ್ ಶಾಸಕ ಮಂಜುನಾಥ್ ಅವರು ಪ್ರವಾಹ ಸಂತ್ರಸ್ತರಿಗೆ ನೀಡಿದ ಅಗತ್ಯ ವಸ್ತುಗಳನ್ನು ವಿತರಿಸಿ ಸರಕಾರದಿಂದ ತಮಗೆ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಇದೇ ವೇಳೆ ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್ ಎಚ್.ಕೆ ಕೃಷ್ಣಮೂರ್ತಿ ಅವರಿಂದ ಪ್ರವಾಹ ಸಂತ್ರಸ್ತರ ಮಾಹಿತಿ ಹಾಗೂ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ವಿವರ ಪಡೆದರು.
ಹೆಚ್‌ಡಿಕೆ ಜೊತೆ ಮಾಜಿ ಸಚಿವ ಸಾ.ರಾ ಮಹೇಶ್, ವಿಧಾನ ಪರಿಷತ್ ಶಾಸಕ ಎಸ್.ಎಲ್ ಭೋಜೇ ಗೌಡ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ ಸದಾಶಿವ, ಜಿಲ್ಲಾ ಉಪಾಧ್ಯಕ್ಷ ಜಗನ್ನಾಥ ಗೌಡ ಅಡ್ಕಾಡಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಕ್ಷಿತ್ ಸುವರ್ಣ, ತಾ. ಮಹಿಳಾ ಘಟಕದ ಅಧ್ಯಕ್ಷೆ ಸಿಂದೂ ದೇವಿ, ಹಿಂದುಳಿದ ವರ್ಗಗಳ ಅಧ್ಯಕ್ಷ  ಶ್ರೀನಿವಾಸ ಗೌಡ ಪಟ್ರಮೆ, ತಾ. ಜೆಡಿಎಸ್ ಪ್ರ.ಕಾರ್ಯದರ್ಶಿ ರಾಮ ಆಚಾರಿ, ಸಂ. ಕಾರ್ಯದರ್ಶಿಗಳಾದ ನಾಗರಾಜ ಎಚ್.ಎನ್ ಮತ್ತು ಪ್ರಕಾಶ್ ಹೆಬ್ಬಾರ್, ಯುವ ಜನತಾದಳ ಅಧ್ಯಕ್ಷ ಸೂರಜ್ ವಳಂಬ್ರ, ಜನತಾದಳ ಯುವ ವಿಭಾಗದ ನಗರ ಅಧ್ಯಕ್ಷ ಪುನೀತ್ ಸುವರ್ಣ ಬೆಳ್ತಂಗಡಿ, ಮುಖಂಡರಾದ ಆಬಿದ್ ಅಲಿ, ಚಂಚಲಾ ಕುಂದರ್, ಲೋಕೇಶ್ ರಾವ್, ಗುರುರಾಜ್, ಶಾಹಿದ್ ಮೊದಲಾದವರು ಉಪಸ್ಥಿತರಿದ್ದರು. ತಹಶಿಲ್ದಾರ ಗಣಪತಿ ಶಾಸ್ತ್ರಿ, ಲೋಕೋಪಯೋಗಿ ಇಲಾಖೆ ಶಿವಪ್ರಸಾದ ಅಜಿಲ, ಚಾರ್ಮಾಡಿ ಪಂ. ಅಧ್ಯಕ್ಷೆ ಶೈಲಜಾ, ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ ಹಾಜರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.