HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಸಿಎ ಅಂತಿಮ ಪರೀಕ್ಷೆಯಲ್ಲಿ ಬೆಳ್ತಂಗಡಿಯ ಸೌಜನ್ಯ ಉತ್ತೀರ್ಣ

ಬೆಳ್ತಂಗಡಿ: ಇಲ್ಲಿಯ ನಿವಾಸಿ ಜಯಂತ್ ಹಾಗೂ ಕುಮುದ ದಂಪತಿ ಪುತ್ರಿ ಸೌಜನ್ಯ ರವರು ಚಾರ್ಟರ್ಡ್ ಅಕೌಂಟೆಂಟ್(ಸಿಎ) ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಇವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪಡೆದು ಮೆರಿಟ್ ಮುಖಾಂತರ ಎರಡು ವರ್ಷಗಳ ಉಚಿತ ಶಿಕ್ಷಣವನ್ನು ಶ್ರೀ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಪಡೆದಿರುತ್ತಾರೆ.
ಸೌಜನ್ಯರವರು ಶ್ರೀ ಧರ್ಮಸ್ಥಳ ಮಂಜುನಾಥ ಪದವಿ ಪೂರ್ವ ಕಾಲೇಜಿನ ಶಿಕ್ಷಕರುಗಳಾದ ಸವಿತಾ, ಪ್ರಭಾವತಿ, ಬೇಬಿ ಮತ್ತು ಮಹೇಶ್ ಕುಮಾರ್ ಶೆಟ್ಟಿ ಇವರುಗಳ ಸೂಕ್ತ ಮಾರ್ಗದರ್ಶನದಲ್ಲಿ ತನ್ನ ದ್ವಿತೀಯ ಪಿಯುಸಿ ಪರೀಕ್ಷೆಯ ನಂತರ ಮನೆಯಲ್ಲಿ ಕುಳಿತು ಕಲಿತು ಸಿಎ-ಸಿಪಿಟಿ ಪ್ರವೇಶ ಪರೀಕ್ಷೆಯಲ್ಲಿ ಪ್ರಥಮ ಹಂತದಲ್ಲಿಯೇ ಉತೀರ್ಣ ಹೊಂದಿದ್ದರು. ನಂತರ ಮಂಗಳೂರಿನಲ್ಲಿ ಸಿಎ. ಬಿ ರಾಮಚಂದ್ರ ಕಾಮತ್ ಹಾಗು ಸಿಎ ದೇವಪ್ಪ ಶೈಣೈ ಅವರ ಬಳಿ ಸಿಎ-ಆರ್ಟಿಕಲ್ ಆಡಿಟ್ ಟ್ರೈನಿ ಆಗಿ ಎರಡು ವರ್ಷದ ಶಿಕ್ಷಣವನ್ನು ಪಡೆಯುವ ಜೊತೆಗೆ ತಮ್ಮ ಸಿಎ ಶಿಕ್ಷಣದ ಎರಡನೆಯ ಹಂತ ಸಿಎ-ಐಪಿಸಿಸಿ ಹಾಗೂ ಜೆಎನ್‌ಯು ವಿಶ್ವವಿದ್ಯಾಲಯದಿಂದ ಬಿ.ಕಾಂ ಪದವಿಯನ್ನು ಪಡೆದಿರುತ್ತಾರೆ.
ತನ್ನ ಹೆಚ್ಚಿನ ವೃತ್ತಿಪರ ಶಿಕ್ಷಣಕ್ಕಾಗಿ ಬೆಂಗಳೂರಿನ ಡೆಲ್ (DELL) ಇಂಟರ್‌ನ್ಯಾಷನಲ್ ಸರ್ವಿಸಸ್ ಕಂಪೆನಿಯ ಗ್ಲೋಬಲ್ ಅಕೌಂಟಿಗ್ ವಿಭಾಗದಲ್ಲಿ ಗ್ಲೋಬಲ್ ಫೈನಾಸ್ಸ್ ಡೈರೆಕ್ಟರ್ ಸಿಎ ಸುಭಾಷ್‌ರವರ ಜೊತೆ ಒಂದು ವರ್ಷಗಳ ಕಾಲ ತರಬೇತಿಯನ್ನು ಪಡೆದು ನಂತರ ವಿಶ್ವದ Big 4 ಕಂಪೆನಿಗಳಲ್ಲಿ ಒಂದಾದ Ernst & Young ( EY) ಕಂಪೆನಿಯಲ್ಲಿ ಆಡಿಟ್  ಕನ್ಸಲ್ಟೆಂಟ್ ಆಗಿಯು ತರಬೇತಿಯನ್ನು ಪಡೆದಿರುತ್ತಾರೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.