ಬೆಳ್ತಂಗಡಿ: ಕಾಂಗ್ರೆಸ್ ಪಕ್ಷದ ಜಿಲ್ಲಾ ನಾಯಕರುಗಳು ಬೆಳ್ತಂಗಡಿ ತಾಲೂಕಿನಾದ್ಯಂತ ಪ್ರವಾಹಪೀಡಿತ ಮಿತ್ತಬಾಗಿಲು, ಕಿಲ್ಲೂರು, ಚಾರ್ಮಾಡಿ , ದಿಡುಪೆ, ಕುಕ್ಕಾವು ಪ್ರದೇಶಗಳಿಗೆ ಹಾಗೂ ನೆರೆಸಂತ್ರಸ್ತರ ಪುನರ್ವಸತಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆನಡೆಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ರಮಾನಾಥ ರೈ, ಮಾಜಿ ಸಂಸದ ವಿನಯ ಕುಮಾರ್ ಸೊರಕೆ, ದ.ಕ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ, ಮಾಜಿ ಶಾಸಕ ಕೆ.ವಸಂತ ಬಂಗೇರ, ವಿಧಾನ ಪರಿಷತ್ ಶಾಸಕರುಗಳಾದ ಐವನ್ ಡಿಸೋಜಾ, ಕೆ.ಹರೀಶ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಶೇಖರ ಅಜ್ರಿ, ಮಾಜಿ ಜಿ.ಪಂ ಸದಸ್ಯ ಶೈಲೇಶ್ ಕುಮಾರ್, ಜಿ.ಪಂ ಸದಸ್ಯರಾದ ನಮಿತಾ ಕೃಷ್ಣಪ್ಪ ಪೂಜಾರಿ, ಶೇಖರ್ ಕುಕ್ಕೇಡಿ, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರಿಶ್ ಕುಮಾರ್, ತಾ.ಪಂ ಅಧ್ಯಕ್ಷೆ ದಿವ್ಯಜ್ಯೋತಿ, ತಾ.ಪಂ ಸದಸ್ಯರಾದ ಪ್ರವೀಣ್ ಗೌಡ, ಜಯರಾಮ ,ನ.ಪಂ ಸದಸ್ಯರಾದ ಜಗದೀಶ ಡಿ, ಪ್ರಮುಖರಾದ ಗ್ರೇಸಿಯಾನ್ ವೇಗಸ್, ಮಡಂತ್ಯಾರು ಗ್ರಾ.ಪಂ ಸದಸ್ಯ ಅಬ್ದುಲ್ ರಹಿಮಾನ್ ಪಡ್ಪು, ಲೋಕೇಶ್ವರಿ, ಜೆಸಿಂತಾ ಮೋನಿಸ್, ರಮೇಶ್ ಪೂಜಾರಿ, ನಾಗರಾಜ ಲಾಯಿಲ, ಮುಕುಂದ ಸುವರ್ಣ, ಯಶೋಧರ ಚಾರ್ಮಾಡಿ, ಅಶ್ರಫ್ ನೆರಿಯ, ಬಿ.ಕೆ ವಸಂತ್, ನಾರಾಯಣ ಪೂಜಾರಿ, ಪ್ರಭಾಕರ ಪೂಜಾರಿ ಧರ್ಮಸ್ಥಳ , ಉಷಾ ಶರತ್ ಬಾರ್ಯ , ಕುಶಾಲಪ್ಪ ಗೌಡ ಶಿರ್ಲಾಲು ಮತ್ತಿತರರು ಉಪಸ್ಥಿತರಿದ್ದರು.