ಬೆಳ್ತಂಗಡಿ ಎಸ್ಡಿಪಿಐ ವತಿಯಿಂದ  ನೆರೆ ಸಂತ್ರಸ್ತರೊಂದಿಗೆ 73ನೇ ಸ್ವಾತಂತ್ರ್ಯ ದಿನಾಚರಣೆ

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಸಮಿತಿ ವತಿಯಿಂದ ಕಿಲ್ಲೂರು, ಕಾಜೂರು, ಡಿಡುಪೆಯ ನೆರೆ ಸಂತ್ರಸ್ತರೊಂದಿಗೆ 73ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಪಿಐ ಬೆಳ್ತಂಗಡಿ ವಿಧಾನಸಭಾ ಅಧ್ಯಕ್ಷರಾದ ನಾವಾಝ್ ಶರೀಫ್ ವಹಿಸಿದ್ದರು. ಎಸ್ಡಿಪಿಐ ರಾಷ್ಟೀಯ ಕಾರ್ಯದರ್ಶಿ ಅಲ್ಫೋನ್ಸ್ ಫ್ರಾಂಕೋ ಧ್ವಜಾರೋಹಣ ನೆರವೇರಿಸಿದರು.

ಮುಖ್ಯ ಅತಿಥಿಯಾಗಿ ಪಾಪ್ಯುಲರ್ ಫ್ರಂಟ್ ಆಪ್ ಇಂಡಿಯಾ ಇದರ ಅಧ್ಯಕ್ಷ  ಇಕ್ಬಾಲ್ ಬಂಗೇರ್ ಕಟ್ಟೆ, ಕಾಜೂರು ದರ್ಗಾ ಸಮಿತಿ ಅಧ್ಯಕ್ಷ  ಕೆ ಯು ಇಬ್ರಾಹಿಂ, ಕಿಲ್ಲೂರು ಮಸೀದಿ ಅಧ್ಯಕ್ಷ ಮಹಮ್ಮದ್, ಎಸ್ಡಿಪಿಐ ಜಿಲ್ಲಾ ಸಮಿತಿ ಸದಸ್ಯರಾದ ಅಕ್ಬರ್ ಬೆಳ್ತಂಗಡಿ, ಜಮ್ಯೀಯತುಲ್ ಫಲಾಹ್ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಕಾಸಿಂ ಮಲ್ಲಿಗೆಮನೆ, ಮಿತ್ತಬಾಗಿಲು ಶಾಲಾಭಿವ್ರದ್ದಿ ಅಧ್ಯಕ್ಷ ಜೆ ಎಚ್ ಉಸ್ಮಾನ್, ಪೆರ್ದಾಡಿ ಮಸೀದಿ ಅಧ್ಯಕ್ಷ ಉಮರ್ ಸ್ಥಳೀಯ ನಾಯಕರಾದ ಅಬ್ಬೂಬಕ್ಕರ್ ಉಪಸ್ಥಿತರಿದ್ದರು. ಎಸ್ಡಿಪಿಐ ತಾಲೂಕು ಕಾರ್ಯದರ್ಶಿ ಅಶ್ರಫ್ ಸ್ವಾಗತಿಸಿ, ಹನೀಫ್ ವಂದಿಸಿದರು, ಶಾಹುಲ್ ಹಮೀದ್ ಕಾರ್ಯಕ್ರಮ ನಿರೂಪಿಸಿದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.