HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ತಾಲೂಕಿನೆಲ್ಲೆಡೆ 73ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ

ವೇಣೂರು: ಗ್ರಾಮ ಪಂಚಾಯತ್ ವೇಣೂರು ಇಲ್ಲಿ  73ನೇ ಸ್ವಾತಂತ್ರೋತ್ಸವ ದಿನಾಚರಣೆ ನಡೆಯಿತು. ಈ ಸಂಧರ್ಭದಲ್ಲಿ  ಧ್ವಜಕಟ್ಟೆ ,ಶುದ್ಧ ಕುಡಿಯುವ ನೀರು ಘಟಕ ಮತ್ತು ಧ್ವನಿವರ್ಧಕ ಇದರ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ  ನೆರವೇರಿಸಿದರು

ಸೌತ್ ಕೆನರಾ ಫೋಟೊಗ್ರಾಪರ್ಸ ಅಸೋಸಿಯೇಷನ್ ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ಬೆಳ್ತಂಗಡಿ ವಲಯದ ವತಿಯಿಂದ 73ನೇ ಸ್ವಾತಂತ್ರೋತ್ಸವ ಛಾಯಾಭವನದಲ್ಲಿ ಆಚರಿಸಲಾಯಿತು ಸೌತ್ ಕೆನರಾ ಫೋಟೊಗ್ರಾಪರ್ಸ ಅಸೋಸಿಯೇಷನ್ ಇದರ ಜಿಲ್ಲಾಧ್ಯಕ್ಷ ವಿಲ್ಸನ್ ಜಾರ್ಜ್ ಗೊನ್ಸಾಲ್ವಿಸ್ ಧ್ವಜಾರೋಹಣ ನೆರೆವೇರಿಸಿದರು.

ಬೆಳ್ತಂಗಡಿ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ 73ನೇಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು . ಎಪಿಎಂಸಿ  ಅಧ್ಯಕ್ಷ ಕೇಶವ ಪಿ ಬೆಳಾಲು ದ್ವಜಾರೋಹಣವನ್ನು ನೆರವೇರಿಸಿದರು.

ಚಂದ್ಕೂರು ಅಂಗನವಾಡಿ ಕೇಂದ್ರದಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಬಾಲವಿಕಾಸ ಸಮಿತಿ ಅಧ್ಯಕ್ಷೆ ಯಮುನಾ ಧ್ವಜಾರೋಹಣವನ್ನು ನೆರವೇರಿಸಿದರು.

ಮದ್ದಡ್ಕ :ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮದ್ದಡ್ಕ ವತಿಯಿಂದ 73ನೇಸ್ವಾತಂತ್ರೋತ್ಸವವನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಪಿ ಎಫ್ ಐ ವೇಣೂರು ವಲಯಾಧ್ಯಕ್ಷ ಹುಸೈನ್ ಕನ್ನಡಿ ಕಟ್ಟೆ ದ್ವಜಾರೋಹಣ ನೆರವೇರಿಸಿದರೆ, IFF ಮುಖಂಡ ಸಲೀಂ ಗುರುವಾಯನಕೆರೆ ಸ್ವಾತಂತ್ರ್ಯ ಸಂದೇಶ ಭಾಷಣ ಮಾಡಿದರು.

ಪದ್ಮುಂಜ ಇಲ್ಲಿಯ ಖಲಂದರ್ ಷಾ ಜುಮ್ಮಾ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯ್ತು. ಜಮಾತ್ ಅಧ್ಯಕ್ಷ ಕಾಸಿಂ ಪದ್ಮುಂಜ ರವರು ಧ್ವಜಾರೋಹಣ ನೆರವೇರಿಸಿದರು

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.