ಆದೂರು ಪೆರಾಲು: ಕಿಡಿಗೇಡಿಗಳಿಂದ ಶಾಲಾ ಸಾಮಾಗ್ರಿ ದ್ವಂಸ

ಕೊಯ್ಯೂರು: ಇಲ್ಲಿಯ ಆದೂರು ಪೆರಾಲು ಉನ್ನತೀಕರಿಸಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಿಡಿಗೇಡಿಗಳು ಶಾಲಾ ವಸ್ತು, ಸಾಮಗ್ರಿಗಳ ದ್ವಂಸ ಮಾಡಿರುವ ಘಟನೆ ಆ.೧೩ ರಂದು ಬೆಳಕಿಗೆ ಬಂದಿದೆ.
ಕಳೆದ ಒಂದು ವಾರಗಳಿಂದ ಸುರಿಯುತ್ತಿರುವ ಭಾರೀ ಮಳೆ, ಗಾಳಿಗೆ ದ.ಕ ಜಿಲ್ಲಾಧಿಕಾರಿಯವರ ಆದೇಶದಂತೆ ಶಾಲಾ,ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಆ.13 ರಂದು ಎಂದಿನಂತೆ ಶಿಕ್ಷಕರು, ಮಕ್ಕಳು ಶಾಲೆಗೆ ಬಂದು ನೋಡಿದಾಗ ವಿಷಯ ತಿಳಿದು ಬಂದಿದೆ.


ಮುಖ್ಯೋಪಾಧ್ಯಾಯರು ತಕ್ಷಣ ಶಾಲಾಭಿವೃದ್ಧಿ ಸಮಿತಿಯವರಿಗೆ ವಿಚಾರ ತಿಳಿಸಿದ್ದು, ನಂತರ ಬೆಳ್ತಂಗಡಿ ಪೊಲೀಸ್ ಠಾಣಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಶಾಲೆಯಲ್ಲಿರುವ ಪುಸ್ತಕ, ಕೆಲವೊಂದು ದಾಖಲೆ ಪುಸ್ತಕ, ಆಟದ ಸಾಮಗ್ರಿ, ವಿದ್ಯಾರ್ಥಿನಿಯರಿಗೆ ನೀಡುವ ನ್ಯಾಪ್ಕಿನ್ ಮತ್ತು ಕುಡಿಯುವ ನೀರಿನ ಪೈಪ್‌ಗಳನ್ನು ದ್ವಂಸ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದು, ಕಿಡಿಗೇಡಿಗಳನ್ನು ಪತ್ತೆಹಚ್ಚಿ ಕಠಿಣ ಶಿಕ್ಷೆ ವಿಧಿಸುವಂತೆ, ಮಕ್ಕಳ ಪೋಷಕರು, ಶಿಕ್ಷಣ ಪ್ರೇಮಿಗಳು ಒತ್ತಾಯಿಸಿದರು. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ನಡೆಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.