ಬರೋಡ ಅಭಿನಂದನಾ ಸಮಿತಿಯಿಂದ ಶಶಿಧರ ಬಿ. ಶೆಟ್ಟಿ ಸ್ವರ್ಣ ಸಂಭ್ರಮ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ : ಬಾಲ್ಯಾವಸ್ಥೆಯ ಕಷ್ಟದ ಕಾಲವನ್ನು ನೆನಪಿನಲ್ಲಿರಿಸಿ, ಇಂದಿಗೂ ತಾಯಿಯನ್ನು ದೇವತೆಯನ್ನಾಗಿಸಿ ಸಾಧನಾ ಸಾರ್ಥಕ ಜೀವನಕ್ಕೆ ಆದರ್ಶರಾದ ಶಶಿಧರ್ ಬಿ.ಶೆಟ್ಟಿ ಅವರ ಜೀವನಶೈಲಿ ಅಖಂಡ ಸಮಾಜಕ್ಕೆ ಪ್ರೇರಕವಾಗಿದೆ. ಮಕ್ಕಳ ಜೀವನದ ಯಶಸ್ಸೇ ಪ್ರತಿಯೊರ್ವ ಮಾತೆಯ ವಿಜಯ ಆಗಿರುತ್ತದೆ ಎಂದು ಆರ್‌ಎಸ್‌ಎಸ್ ಧುರೀಣ ಶ್ರೀರಾಮ ವಿದ್ಯಾಕೇಂದ್ರ ಟ್ರಸ್ಟ್ ಕಲ್ಲಡ್ಕ ಇದರ ಸಂಚಾಲಕರಾದ ಡಾ| ಕಲ್ಲಡ್ಕ ಪ್ರಭಾಕರ್ ಭಟ್ ನುಡಿದರು.
ಅವರು  ಗುಜರಾತ್‌ನ ಬರೋಡಾ ಭ್ಲು ಶಕ್ತಿ ಗ್ರೀನ್ಸ್‌ನ ಪ್ರೀಮಿಯರ್ ಬಾಂಕ್ವೆಟ್ ಸಭಾಗೃಹದಲ್ಲಿ ಉದ್ಯಮಿ ಸಮಾಜ ಸೇವಕ ಶಶಿಧರ್ ಬಿ.ಶೆಟ್ಟಿ ಅಭಿಮಾನಿ ಬಳಗದವರು ಆಯೋಜಿಸಿದ್ದ ಶಶಿಧರ ಬಿ.ಶೆಟ್ಟಿ ಸ್ವರ್ಣ ಸಂಭ್ರಮ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಕಣ್ಣಿನ ಅಕ್ಷಿಪಟಲದ ಮೊದಲ ಚಿತ್ರವೇ ಜನ್ಮದಾತೆಯಾಗಿದ್ದು ತಾಯಿಗೆ ಮಕ್ಕಳ ಸಾಧನೆಗಿಂತ ದೊಡ್ಡಸ್ತಿಕೆ ಮತ್ತೊಂದಿಲ್ಲ ಆದ್ದರಿಂದಲೇ ಭಾರತೀಯರಿಗೆ ಮಾತೃ ಸಂಸ್ಕೃತಿಯೇ ಪ್ರಧಾನವಾಗಿದೆ. ದೃಷ್ಟಿಯಲ್ಲೂ ಮೊದಲಾಗಿ ನಾಲಗೆಯಲ್ಲೂ ಪ್ರಥಮವಾಗಿ ಉಚ್ಚರಿಸಲ್ಪಡುವ ತಾಯಿ, ಮಕ್ಕಳಿಗೆ ನಿದ್ರೆ ಕೊಟ್ಟು ತಾನು ನಿದ್ರೆ ಕಳೆದು ಮಕ್ಕಳನ್ನು ಸಾಕುವ ದೇವತಾ ಸ್ವರೂಪಿಯಾಗಿದ್ದಾಳೆ. ಇಂತಹ ಮಾತೆಯೇ ಹಿಂದೂ ಸಮಾಜದ ಮೊದಲ ದೇವತೆ ಎಂದು ಅಭಿಪ್ರಾಯ ಪಟ್ಟರು.


ಹಣ, ಹುದ್ದೆ ಸ್ಥಾನಮಾನ ಹೆಸರಿನ ಆಸೆ ಯಾವುದನ್ನೂ ಬಯಸದೆ ಸಮಾಜದ ಹಿತವನ್ನೇ ಆಶಿಸುತ್ತಾ ಮಾನವೀಯ ಧರ್ಮದಲ್ಲೇ ಬಾಳುತ್ತಾ ಲಕ್ಷಾಂತರ ಜನರ ಬಾಳಿಗೆ ಪ್ರೇರಕ ಶಕ್ತಿಯಾಗಿದೆ. ಬಲು ದೂರ ಸರಿಯುತ್ತಿರುವ ಭಾರತೀಯ ಸಂಸ್ಕೃತಿಯನ್ನು ಸಾಮೀಪ್ಯಕ್ಕೆ ಸೆಳೆಯುವ ಮೂಲಕ ತರುವ ವಿಶೇಷ ಕಾರ್‍ಯಕ್ರಮ ಇದಾಗಿದೆ. . ಸಿನೆಮಾ ತಾರೆಯರಿಗಿಂತ ದೊಡ್ಡ ಆದರ್ಶ ವ್ಯಕ್ತಿತ್ವ ಶಶಿಧರ ಶೆಟ್ಟಿ ಅವರದ್ದಾಗಿದೆ. ಎಂದು ನುಡಿದು ಶುಭ ಹಾರೈಸಿದರು.
ಶಶಿಧರ್ ಶೆಟ್ಟಿ ಅವರ ಮಾತೃಶ್ರೀ ಕಾಶಿಶೆಟ್ಟಿ ಕುವೆಟ್ಟು ಅವರು ದೀಪ ಪ್ರಜ್ವಲಿಸಿ ಸಮಾರಂಭ ಉದ್ಘಾಟಿಸಿದರು. ಅತಿಥಿಯಾಗಿ ಪಾಲ್ಗೊಂಡ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಮಾತನಾಡಿ ಈ ಕಾಲದಲ್ಲಿ ಕಾಣಸಿಗದ ಅತ್ಯದ್ಭುತ ಕಾರ್‍ಯಕ್ರಮ ಇದಾಗಿದೆ. ಇದು ಮಾಡಿದ ಕರ್ಮದ ಫಲವಾಗಿದೆ ಇಂತಹ ಅಮ್ಮನನ್ನು ಪಡೆದವರೇ ಭಾಗ್ಯವಂತರು. ಮಾತೃಪಿತೃಗಳ ಋಣ ಪೂರೈಸುವುದರಿಂದಲೇ ಮಾನವ ಜೀವನ ಪರಿಪೂರ್ಣವಾಗಲು ಸಾಧ್ಯ, ಸುಮ್ಮನೆ ಯಾರಿಗೂ ಅಭಿಮಾನಿ ಬಳಗ ಹುಟ್ಟದು. ಇಂತಹ ಅಭಿಮಾನಿ ಬಳಗವು ಆಡಂಬರದ ಆಚರಣೆಗಿಂತ ಆದರ್ಶದ ಆಚರಣೆಗೆ ಪಾತ್ರವಾಗಿರುವುದು ಶ್ಲಾಘನೀಯ ಎಂದರು. ಜಯರಾಮ ಶೆಟ್ಟಿ ಮಾತನಾಡಿ ಶಶಿಧರ್ ಶೆಟ್ಟಿ ಅವರ ಸಾಮರಸ್ಯದ ಬಾಳು ಜೀವನ ಶೈಲಿಯನ್ನು ಬಣ್ಣಿಸಿ ಶುಭ ಹಾರೈಸಿದರು.
ಸಾಗರ್ ರತ್ನ ಹೊಟೇಲು ಸಮೂಹದ ಪ್ರವರ್ತಕ ಬಿಲ್ಲವ ಅಸೋಸಿಯೇಶನ್ ದೆಹಲಿ ಅಧ್ಯಕ್ಷ ಜಯರಾಮ್ ಬನಾನ್, ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಮೂಹ ಅಧ್ಯಕ್ಷ ಡಾ|ಎಂ ಮೋಹನ್ ಆಳ್ವ, ಭವಾನಿ ಫೌಂಡೇಶನ್ ನವಿ ಮುಂಬಯಿ ಸಂಸ್ಥಾಪಕ ಅಧ್ಯಕ್ಷ ಚೆಲ್ಲಡ್ಕ ಕೆ.ಡಿ ಶೆಟ್ಟಿ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ದಯಾನಂದ ಬೋಂಟ್ರಾ, ಜಯರಾಮ ಶೆಟ್ಟಿ ಸುರತ್ಕಲ್, ಪ್ರಮೀಳಾ ಶಶಿಧರ್ ಶೆಟ್ಟಿ, ಕು| ಸೃಷ್ಟಿ ಎಸ್.ಶೆಟ್ಟಿ ಮಾ| ಶೌರ್ಯ ಎಸ್.ಶೆಟ್ಟಿ ಅಭಿಮಾನಿ ಬಳಗದ ಪ್ರಶಾಂತ್ ಹೆಗ್ಡೆ, ವಿಶಾಲ್ ಶಾಂತಾ, ಜಿನರಾಜ್ ಪೂಜಾರಿ, ಮದನ್‌ಕುಮಾರ್ ಮೂಡಿಗೆರೆ, ಶಶಿಧರ್ ಬಿ. ಶೆಟ್ಟಿರವರ ಸಹೋದರರಾದ ರಾಜೇಶ್ ಶೆಟ್ಟಿ, ಜಯರಾಮ್ ಶೆಟ್ಟಿ, ಶ್ರೀನಿವಾಸ್ ಶೆಟ್ಟಿ, ಪ್ರಶಾಂತ್ ಶೆಟ್ಟಿ, ಹರೀಶ್ ಶೆಟ್ಟಿ, ಸುಚಿತಾ ರಾಜೇಶ್ ಶೆಟ್ಟಿ, ಶೋಭಾ ಶೆಟ್ಟಿ, ಜ್ಯೋತಿ ಶೆಟ್ಟಿ, ರೂಪಾ ಶೆಟ್ಟಿ, ರೇಖಾ ಶೆಟ್ಟಿ, ಶುಭ ಹಾರೈಸಿದರು.
ಈ ಸಂದರ್ಭದಲಿ ಗಣೇಶ್ ಎಂ. ಉಜಿರೆ, ಗುರುವಾಯನಕೆರೆ ವಿಜಯ ಕ್ರೆಡಿಟ್ ಕೋ- ಆಪರೇಟಿವ್ ಸೂಸೈಟಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಜಿತ್ ಕುಮಾರ್, ಸಂದೀಪ್ ಕುಮಾರ್ ಮುಗೇರೋಡಿ, ಪ್ರಮೋದ್ ಶೆಟ್ಟಿ ಬೆಂಗಳೂರು, ಬಿಜಿಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಪಿ ಪಣೆಕ್ಕರ, ಗುರುವಾಯನಕರೆ ಕ್ಯಾಂಪಸ್ ಮೆನ್ಸ್‌ವೇರ್‌ನ ಸಚಿನ್ ಶೆಟ್ಟಿ ಕುರಲ್ಯ ಉಪಸ್ಥಿತರಿದ್ದರು.
ಶಶಿಧರ್ ಶೆಟ್ಟಿ ಅವರು ಜನ್ಮದಾತೆಯ ಪಾದಪೂಜೆ ನೆರವೇರಿಸಿದರು. ಅಭಿಮಾನಿ ಬಳಗದ ವಿಶಾಲ್ ಶಾಂತಾ ಸ್ವಾಗತಿಸಿದರು. ದಯಾನಂದ ಬೋಂಟ್ರಾ ಪ್ರಾರ್ಥನೆಗೈದರು. ಕರ್ನೂರು ಮೋಹನ್ ರೈ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಪ್ರಶಾಂತ್ ಎಸ್.ಹೆಗ್ಡೆ ಕೌಡೂರು ಪ್ರಸ್ತಾವನೆಗೈದು ವಂದಿಸಿದರು. ಕಾರ್ಯಕ್ರಮದಲ್ಲಿ ಶಶಿಧರ್ ಶೆಟ್ಟಿ ಜೀವನ ಚಿತ್ರಣದ ಸಾಕ್ಷ್ಯ ಚಿತ್ರವನ್ನು ಪ್ರದರ್ಶಿಸಲಾಯಿತು. ಪ್ರಶಂಸ ತಂಡದಿಂದ ತುಳು ಹಾಸ್ಯ ಸಾಂಸ್ಕೃತಿಕ ಕಾರ್‍ಯಕ್ರಮ ನಡೆಯಿತು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.