ಬೆಳ್ತಂಗಡಿ : ಭೀಕರ ಪ್ರವಾಹಕ್ಕೆ ಸಿಲುಕಿ ನಡುಗಿದ ತಾಲೂಕಿನ ಪ್ರವಾಹ ಸಂತ್ರಸ್ತರಿಗೆ ಬರೋಡ ಉದ್ಯಮಿ ಶಶಿ ಕ್ಯಾಟರಿಂಗ್ ಸರ್ವಿಸಸ್ಸ್ ಪ್ರೈ.ಲಿ.ನ ಮಾಲಕರು, ಗುರುವಾಯನಕೆರೆ ನವಶಕ್ತಿಕೃಪಾ ನಿವಾಸಿ ಶಶಿಧರ ಬಿ.ಶೆಟ್ಟಿ ಅವರು ರೂ.10 ಲಕ್ಷ ಪರಿಹಾರ ಧನವನ್ನು ಬೆಳ್ತಂಗಡಿ ಶ್ರಮಿಕ ಕಛೇರಿಗೆ ನೀಡಿದರು.
ತಾಲೂಕಿನ ಶಾಸಕರಾದ ಹರೀಶ್ ಪೂಂಜರವರು ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಕ್ಷೇತ್ರದ ಜನರು ಪ್ರವಾಹದಿಂದ ಸಂತ್ರಸ್ತರಾಗಿ ಸಂಕಷ್ಟದಲ್ಲಿದ್ದಾರೆ, ಸಾರ್ವಜನಿಕರು ತಮ್ಮಿಂದಾದ ಸಹಾಯ ಬೇಕು ಎಂದು ಪೋಸ್ಟು ಹಾಕಿದ್ದರು. ಸಹಜವಾಗಿ ಸಾಮಾಜಿಕ ಜಾಲತಾಣಗಳಿಂದ ದೂರವಿರುವ ಶಶಿಧರ ಬಿ. ಶೆಟ್ಟಿಯವರು ಅವರ ಸಹಧರ್ಮಿಣಿ ವಾಟ್ಸ್ಆಪ್ನಲ್ಲಿ ಬಂದ ಸಂದೇಶವನ್ನು ನೋಡಿದ ಕೂಡಲೇ ಸಹೋದರ ರಾಜೇಶ್ ಶೆಟ್ಟಿ ಹಾಗೂ ಶಾಸಕ ಹರೀಶ್ ಪೂಂಜರಿಗೆ ಕರೆ ಮಾಡಿ ನನ್ನ ತಾಲೂಕಿನ ಜನತೆಯ ಸಂಕಷ್ಟಕ್ಕೆ ತನ್ನಿಂದಾದ ಸಹಾಯ ಮಾಡುತ್ತೇನೆ ಎನ್ನುತ್ತಾ ಅಗತ್ಯ ಕಾರ್ಯಗಳಿಗೆ ಉಪಯೋಗಿಸಿ ಎಂದು ರೂ. 10ಲಕ್ಷ ನೀಡಿದರು.