HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಗಾಣಿಗ ಸಂಘದಿಂದ ಪುಸ್ತಕ ವಿತರಣೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಗಾಣಿಗರ ಯಾನೆ ಸಂಫಲಿಗರ ಸಂಘದಿಂದ ಆ.11ರಂದು ಲಾಯಿಲ ಗಾಣಿಗ ಸಮುದಾಯ ಭವನದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಮಾಡಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಬೆಳ್ತಂಗಡಿ ತಾಲೂಕು ಗಾಣಿಗರ ಯಾನೆ ಸಫಲಿಗರ ಸಂಘದ ಅಧ್ಯಕ್ಷ ಲಕ್ಷ್ಮಣ ಸಪಲ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪುತ್ತೂರು ಗಾಣಿಗ ಸಂಘ ಅಧ್ಯಕ್ಷ ಹರಿರಾಮಚಂದ್ರ ಪುಸ್ತಕ ವಿತರಣೆ ಮಾಡಿ ಮಾತನಾಡಿ, ನಮ್ಮ ಸಮಾಜದ ಗಣ್ಯವ್ಯಕ್ತಿಗಳ ಸಾಧನೆಯನ್ನು ಸಂಘಕ್ಕೆ ಪರಿಚಯಿಸಿದರು. ಮಕ್ಕಳಿಗೆ ಒಳ್ಳೆಯ ಸಾಧನೆ ಮಾಡಲು ಸಂದೇಶ ರವಾನೆ ಮಾಡಿದರು. ಇನ್ನೋರ್ವ ಅತಿಥಿ ಬೆಳ್ತಂಗಡಿ ವಿಶೈನ್ ಹರ್ಬಲ್ ಬ್ಯೂಟಿ ಪಾರ್ಲರ್ ಮಾಲಕಿ ವಿಶಾಲ್ ಮೋಹನ್ ಶುಭ ಹಾರೈಸಿದರು.
ಕಾರ್ಯದರ್ಶಿ ಜಯಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿ, ಉಪಾಧ್ಯಕ್ಷ ಜಯಕುಮಾರ್, ಯುವವೇದಿಕೆ ಅಧ್ಯಕ್ಷ ತುಕಾರಾಮ ಬಿ. ವಂದಿಸಿದರು. ದೀಕ್ಷಿತ್ ಗಾಣಿಗ ಕಾರ್‍ಯಕ್ರಮ ನಿರೂಪಿಸಿದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.