HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ತಣ್ಣೀರುಪಂತ ಹಾ.ಉ ಸ. ಸಂಘ ಮಹಾಸಭೆ

ತಣ್ಣೀರುಪಂತ: ಇಲ್ಲಿನ ಹಾಲು ಉತ್ಪಾದಕರ ಸಹಕಾರಿ ಸಂಘದ 2018-19 ನೇ ಸಾಲಿನ ಸರ್ವಸದಸ್ಯರ ಸಾಮಾನ್ಯ ಸಭೆಯು ಆ.11 ರಂದು ಕಲ್ಲೇರಿಯ ಅಂಬೇಡ್ಕರ್ ಭವನದಲ್ಲಿ ನೆರವೇರಿತು.
ಅಧ್ಯಕ್ಷತೆ ವಹಿಸಿದ್ದ ದ.ಕ ಹಾಲು ಒಕ್ಕೂಟ ಸಂಘದ ನಿರ್ದೇಶಕ ಬಿ. ನಿರಂಜನ್ ಮಾತನಾಡಿ ಬೇರೆ ಸಂಘಗಳ ಹಾಲು ಸಂಗ್ರಹಿಸಿದೆ, ಸ್ವಂತ ಹಾಲಿನ ಶೇಖರಣೆಯಿಂದ ಬಿ.ಎಂ.ಸಿ ನಿರ್ವಹಣೆ ಮಾಡುವ ಏಕೈಕ ಸಂಘ, ಅವಿಭಜನ ಜಿಲ್ಲೆಯಲ್ಲಿ ಅತ್ಯಧಿಕ ಹಾಲು ಸಂಗ್ರಹ ಮಾಡುವ ಸಂಘ, ಉತ್ತಮ ಗುಣಮಟ್ಟದ ಹಾಲು ಸಂಘಕ್ಕೆ ಪೂರೈಕೆ ಮಾಡುವ ಜವಾಬ್ದಾರಿ ನಿಮ್ಮೆಲ್ಲರದ್ದು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕ ತಿಮ್ಮಪ್ಪ ಸಾಲಿಯಾನ್, ದಿನೇಶ್ ಗೌಡ, ಸೇಸಪ್ಪ ಸಾಲಿಯಾನ್, ತಿರುಮಲೇಶ್ವರ , ಜನಾರ್ದನ ಗೌಡ, ಪ್ರಸನ್ನ, ಚೋಮನಾಯ್ಕ, ಶೂರ, ಪುಷ್ಪ, ಹಾಜಿರಾ, ದ.ಕ ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿ ಹಾಗೂ ಪಶು ವೈದ್ಯಾಧಿಕಾರಿ ಡಿ. ಜಿತೇಂದ್ರ ಉಪಸ್ಥಿತರಿದ್ದರು.

2017-18ನೇ ಸಾಲಿನಲ್ಲಿ ಸಂಘಕ್ಕೆ ಅತಿ ಹೆಚ್ಚು ಹಾಲು ನೀಡಲಾದ 4 ಜನರಿಗೆ ಬಹುಮಾನ ನೀಡಿ ಗೌರವಿಸಲಾಯಿತು. 14 ಜನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಬುದ್ಧಿಮಾಂಧ್ಯರಿಗೆ ಧನ ಸಹಾಯ, ದನ ಮೃತಪಟ್ಟ 4 ಜನ ಸದಸ್ಯರಿಗೆ ರೂ. 10000/- ಧನ ಸಹಾಯ , ಮೃತಪಟ್ಟ ಒಬ್ಬ ಸದಸ್ಯರ ಕುಟುಂಬದವರಿಗೆ ಸದಸ್ಯರ ಕಲ್ಯಾಣ ನಿಧಿಯಿಂದ ಧನ ಸಹಾಯ ವಿತರಿಸಲಾಯಿತು.
ಸಂಘದ ಸಿಬ್ಬಂದಿ ಪ್ರಮೀಳಾ ಪ್ರಾರ್ಥನೆ ಮಾಡಿ, ಸಂಘದ ಉಪಾಧ್ಯಕ್ಷ ಜಯರಾಜ್ ಹೆಗ್ಡೆ ಸ್ವಾಗತಿಸಿ , ನಿರ್ದೇಶಕ ಜೋಸ್ ಫೆಲಿಕ್ಸ್ ಲೋಬೊ ವಂದಿಸಿದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.