HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಬೆಳ್ತಂಗಡಿ ಲಯನ್ಸ್ ಕ್ಲಬ್‌ನಿಂದ ನೆರೆ ಸಂತ್ರಸ್ತರಿಗೆ ನೆರವು

ಬೆಳ್ತಂಗಡಿ : ಬೆಳ್ತಂಗಡಿ ಲಯನ್ಸ್ ಕ್ಲಬ್ ಸದಸ್ಯರು ಮಳೆಹಾನಿಯಿಂದ ಸಂತ್ರಸ್ತ ಪ್ರದೇಶಗಳಿಗೆ ಬೇಟಿ ನೀಡಿ ಅಗತ್ಯವಾಗಿ ಬೇಕಾದ ಬೆಡ್‌ಶೀಟ್, ಚಾಪೆ, ಬಟ್ಟೆ, ಸಾಬೂನು,ತರಕಾರಿಗಳನ್ನು ವಿತರಿಸಿದರು. ಅಧ್ಯಕ್ಷ ವಸಂತಶೆಟ್ಟಿ ಶ್ರದ್ಧಾ, ಪ್ರಾಂತೀಯ ಅಧ್ಯಕ್ಷ ರಾಜು ಶೆಟ್ಟಿ, ಕಾರ್ಯದರ್ಶಿ ಸುರೇಶ್ ಶೆಟ್ಟಿ, ಕೋಶಾಧಿಕಾರಿ ರಾಜೀವಗೌಡ, ಪೂರ್ವಾಧ್ಯಕ್ಷ ಧರಣೇಂದ್ರ ಕೆ. ಜೈನ್,ಹಿರಿಯ ಲಯನ್ ಸದಸ್ಯರಾದ ಹೇಮಂತ ರಾವ್ ಯೆರ್ಡೂರು ಮತ್ತು ವಿನ್ಸೆಂಟ್ ಡಿಸೋಜಾರವರು ಈಸಂದರ್ಭದಲ್ಲಿ ಜತೆಗಿದ್ದರು. ನೆರೆಸಂತ್ರಸ್ತಕೇಂದ್ರಗಳಾದ ಕಿಲ್ಲೂರು ಶಾಲೆ, ದೇವನಾರಿ ಶಾಲೆ,ಅಗರಿಮಾರು, ಲಾಯಿಲ ಹಾಗೂ ಚಾರ್ಮಾಡಿಗೆ ಬೇಟಿ ನೀಡಿ ನೆರೆಸಂತ್ರಸ್ತರನ್ನು ಸಾಂತ್ವನಿಸಿ ಧೈರ್ಯ ತುಂಬಿದರು. ನೆರೆ ಹಾವಳಿ ಪ್ರದೇಶಗಳಾದ ಕುಕ್ಕಾವು, ದಿಡುಪೆ, ಚಾರ್ಮಾಡಿ ಕೊಳಂಬೆ ಪ್ರದೇಶಗಳಿಗೂ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.