ಜಿಲ್ಲೆಯಲ್ಲೇ ಅತೀ ಹೆಚ್ಚು ಹಾನಿಯಾದ ಪ್ರದೇಶ ಬೆಳ್ತಂಗಡಿ ತಾಲೂಕು: ಕೋಟ-ನಳಿನ್ ಜಂಟಿ ಪ್ರೆಸ್‌ಮೀಟ್

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

* ಅಂದಾಜು 70 ರಿಂದ 80 ಕೋಟಿ ರೂ ನಷ್ಟ, * ಕೊಡಗು ಮಾದರಿಯಲ್ಲಿ ವಿಶೇಷ ಪ್ಯಾಕೇಜ್‌ಗೆ ಕ್ರಮದ ಭರವಸೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ 15 ಕ್ಕೂ ಅಧಿಕ ಗ್ರಾಮಗಳಲ್ಲಿ ಮಳೆಯ ರುದ್ರನರ್ತನಕ್ಕೆ ಭಾರೀ ಪ್ರಾಕೃತಿಕ ಅನಾಹುತಗಳು ಸಂಭವಿಸಿದೆ. ಅಪಾರ ಪ್ರಮಾಣದ ಕೃಷಿಗೆ ಹಾನಿಯಾಗಿದೆ. ರಸ್ತೆ ಸೇತುವೆ, ವಿದ್ಯುತ್ ಸಹಿತ ಭಾರೀ ಪ್ರಮಾಣದಲ್ಲಿ ಸರಕಾರಿ ಸೊತ್ತುಗಳಿಗೂ ಹಾನಿಯಾಗಿದೆ. ಮೂಲಭೂತ ಸೌಕರ್ಯಕ್ಕೂ ಭಾರಿ ಕುತ್ತು ಬಂದಿದ್ದು ಇವುಗಳ ಪುನರ್ ನಿರ್ಮಾಣಕ್ಕೆ ಬೆಳ್ತಂಗಡಿ ತಾಲೂಕೊಂದರಲ್ಲೇ ೮೦ ಕೋಟಿ ರೂ. ಗಳಷ್ಟು ನಷ್ಟ ಆಗಿರಬಹುದು ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ಕಳೆದ ಬಾರಿ ಕೊಡಗು ಜಿಲ್ಲೆಗೆ ಘೋಷಿಸಿದ ವಿಶೇಷ ಪ್ಯಾಕೇಜ್ ಮಾದರಿಯಲ್ಲಿ ಇಲ್ಲಿಗೂ ಪ್ಯಾಕೇಜ್ ಒದಗಿಸಿಕೊಂಡುವಂತೆ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಪೂರಕ ವರದಿ ನೀಡಿ ಒತ್ತಾಯಿಸಲಾಗುವುದು ಎಂದು ವಿಧಾನ ಪರಿಷತ್ ಶಾಸಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಬೆಳ್ತಂಗಡಿ ತಾಲೂಕಿನ ಪ್ರಾಕೃತಿಕ ವಿಕೋಪ ಪ್ರದೇಶಗಳಿಗೆ ಆ. 11 ರಂದು ನಿಯೋಗದೊಂದಿಗೆ ಭೇಟಿ ಮಾಡಿ ಜನರ ಅಹವಾಲು ಆಲಿಸಿದ ಅವರು ಶಾಸಕರ ಸರಕಾರಿ ಕಚೇರಿ ಶ್ರಮಿಕದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದರು.
ಭಾರೀ ಮಳೆಗೆ ಸುಮಾರು 1 ಸಾವಿರ ಮನೆ, ಕೊಟ್ಟಿಗೆ ಇತರೆ ಕಟ್ಟಗಳಿಗೆ ಹಾನಿಗಳಾಗಿವೆ. ತಾಲೂಕಿನಲ್ಲಿ 22 ಸಾವಿರ ಅಡಿಕೆ ಮರಗಳು, ನೂರಾರು ಎಕ್ರೆ ಬಾಳೆ ತೋಟ, 7 ಸಾವಿರದಷ್ಟು ತೆಂಗು, 15 ರಿಂದ 18 ಸಾವಿರ ರಬ್ಬರ್ ಮರಗಳು ಸಂಪೂರ್ಣ ಹಾನಿಗೆ ತುತ್ತಾಗಿದೆ. 12 ಸಣ್ಣ ಮತ್ತು ದೊಡ್ಡ ಸೇತುವೆಗಳು ಸಂಪರ್ಕ ಕಡಿದುಕೊಂಡಿದೆ. ಕೆಲವಡೆ ಭತ್ತದ ಕೃಷಿ ಕುರುಹೇ ಇಲ್ಲದಂತೆ ನಾಶವಾಗಿದೆ. 20 ರಷ್ಟು ರಸ್ತೆಗಳು ಬಾಗಶ ಮತ್ತು ಪೂರ್ಣ ಹಾಳಾಗಿದೆ. ಇವುಗಳ ಪುನರ್ ನಿರ್ಮಾಣಕ್ಕೆ ಭಾರೀ ಮೊತ್ತದ ಆವಶ್ಯಕತೆ ಇದ್ದು ಇನ್ನೆರಡು ದಿನಗಳಲ್ಲಿ ಶಾಸಕರು ಅಧಿಕಾರಿಗಳ ಸಭೆ ಕರೆದು ಅಧಿಕೃತ ನಷ್ಟದ ಮಾಹಿತಿ ಸರಕಾರಕ್ಕೆ ನೀಡಲಿದ್ದಾರೆ.
ನಾನು, ಸಂಸದರಾದ ನಳಿನ್ ಕುಮಾರ್ ಕಟೀಲ್ ಮತ್ತು ಶೋಭಾ ಕರಂದ್ಲಾಜೆ ಅವರನ್ನು ಮುಖ್ಯಮಂತ್ರಿಗಳು ಸೂಚನೆ ನೀಡಿ ಎರಡು ಜಿಲ್ಲೆಗಳಲ್ಲಿ ಗಮನಿಸಲು ಹೇಳಿದ್ದಾರೆ. ಅಂತೆಯೇ ನಾವು ಪ್ರವಾಸಗಳನ್ನು ಕೈ ಗೊಂಡಿದ್ದು ಎಲ್ಲ ವರದಿಗಳು ಸಿಎಂ ಸಲ್ಲಿಸಲಿದ್ದೇವೆ.ಯಾವುದೇ ಸವಾಲು ಬಂದರೂ ಸರಕಾರ ಸಂತ್ರಸ್ತರ ಪರವಾಗಿದೆ. ಅವರಿಗೆ ಧೈರ್ಯ ತುಂಬಲು ನಾವು, ನಮ್ಮ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ನಮ್ಮ ಶಾಸಕರು, ಕಾರ್ಯಕರ್ತರೂ ಶ್ರಮಿಸುತ್ತಿದ್ದಾರೆ. ಸಂತ್ರಸ್ತರಿಗೆ ಪರಿಹಾರ ದೊರಕಿಸಿಕೊಡುವಲ್ಲಿ ಸರಕಾರದಲ್ಲಿ ಹಣದ ಕೊರೆತೆ ಇಲ್ಲ. ಅನೇಕ ಮಂದಿ ವಾಸದ ಮನೆಯನ್ನು ಪೂರ್ಣಕಳೆದುಕೊಂಡಿದ್ದು ಅಂತವರಿಗೆ ಸರಕಾರದ ಗರಿಷ್ಟ ಪರಿಹಾರ 95 ಸಾವಿರ ಮಂಜೂರಾತಿ ಜೊತೆಗೆ ಸರಕಾರಿ ಮತ್ತು ಇತರ ಸಹಭಾಗಿತ್ವದಲ್ಲಿ ಹೊಸ ಮನೆ ನಿರ್ಮಿಸಿಕೊಡುವ ಬಗ್ಗೆ ಪ್ರಯತ್ನಗಳನ್ನು ಕೈಗೊಳ್ಳಲಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಹರೀಶ್ ಪೂಂಜ, ಬಿಜೆಪಿ ಮಂಡಲದ ಅಧ್ಯಕ್ಷ ಜಯಂತ ಕೋಟ್ಯಾನ್, ಪ್ರ. ಕಾರ್ಯದರ್ಶಿಗಳಾದ ಸೀತಾರಾಮ ಮತ್ತು ಪ್ರಭಾಕರ ಶೆಟ್ಟಿ ಉಪ್ಪಡ್ಕ, ಜಿಲ್ಲಾ ಉಪಾಧ್ಯಕ್ಷೆ ಶಾರದಾ ಆರ್ ರೈ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.