ನಾರಾವಿ ಸಹಕಾರಿ ಸಂಘದ ನಿವೃತ ಸಿಇಒ ವಿಜಯಕುಮಾರ್ ಬಂಗ ರಿಗೆ ವಿದಾಯ ಸಮಾರಂಭ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ನಾರಾವಿ: ಪ್ರತಿಯೊಬ್ಬರಲ್ಲೂ ಒಂದೊಂದು ಶಕ್ತಿ ಮತ್ತು ಕೌಶಲ್ಯ ಅಡಗಿರುತ್ತದೆ. ಆದರೆ ಅದು ಅವರಿಗೇ ತಿಳಿದಿರುವುದಿಲ್ಲ. ಇನ್ನೊಬ್ಬರು ನಮ್ಮನ್ನು ಗುರುತಿಸಿ ಪ್ರೋತ್ಸಾಹಿಸಿದ ನಂತರ ಅದು ನಮ್ಮೊಳಗೇ ಬೆಳಕಿಗೆ ಬರುತ್ತದೆ. ಹಾಗೇ ಒಂದು ಅವಕಾಶದಲ್ಲಿ ವಿಜಯಕುಮಾರ ಬಂಗ ಅವರ ಶಕ್ತಿ ಸಾಮರ್ಥ್ಯ ತಿಳಿಯಲು ಸಾಧ್ಯವಾದಾಗ ಅವರಿಂದ ಸಾಧನೆ ಮಾಡಲು ಸಾಧ್ಯವಾಯಿತು. ಸಾಧನೆಗಳನ್ನು ಮಾಡಲು ಬೇಕಾಗಿರುವುದು ಮನಸ್ಸು ಮತ್ತು ಸಾಮರ್ಥ್ಯ ಎಂದು ಅಳದಂಗಡಿ ಅಜಿಲ ಸೀಮೆಯ ತಿಮ್ಮಣ್ಣರಸ ಡಾ. ಪದ್ಮಪ್ರಸಾದ ಅಜಿಲ ಹೇಳಿದರು.
ನಾರಾವಿ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ವತಿಯಿಂದ ಆ. 11 ರಂದು ನಾರಾವಿ ಧರ್ಮಶ್ರೀ ಸಭಾಭವನದಲ್ಲಿ ಆಯೋಜನೆಗೊಂಡಿದ್ದ, ಸಹಕಾರಿ ಸಂಘದಲ್ಲಿ 42 ವರ್ಷಗಳ ಕರ್ತವ್ಯದೊಂದಿಗೆ 24 ವರ್ಷಗಳ ಕಾಲ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ವೃತ್ತಿ ಜೀವನ ನಡೆಸಿ ನಿವೃತರಾದ ಎಂ. ವಿಜಯಕುಮಾರ ಬಂಗ ಅವರ ವಿದಾಯ ಸಮಾರಂಭದಲ್ಲಿ ಸನ್ಮಾನ ನೆರವೇರಿಸಿ ಅವರು ಮಾತನಾಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದ ನಾರಾವಿ ಸಂತ ಅಂತೋನಿ ಚರ್ಚ್‌ನ ಧರ್ಮಗುರುಗಳಾದ ವಂದನೀಯ ಫಾ. ಸೈಮನ್ ಡಿಸೋಜಾ ಆಶೀರ್ವಚನ ನೀಡಿ, ಪ್ರತಿಯೊಬ್ಬರು ಸಮಾಜದಲ್ಲಿ ತಮಗೆ ಅರ್ಪಿತವಾದ ಜವಾಬ್ಧಾರಿಯ ಕೆಲಸಗಳನ್ನು ಅಷ್ಟೇ ಕಾಳಜಿಯಿಂದ ತೊಡಗಿಸಿಕೊಂಡಾಗ ತಮ್ಮ ಕಾರ್ಯ ಸಾರ್ಥಕವೆನಿಸುತ್ತದೆ. ನಮ್ಮೊಡನೆ ಇನ್ನೊಬ್ಬರು ಹೇಗೆ ನಡೆದುಕೊಳ್ಳಬೇಕೆಂದು ನಾವು ಬಯಸುತ್ತೇವೋ ನಾವೂ ಇನ್ನೊಬ್ಬರ ಜೊತೆ ಅದೇ ಭಾವನೆಯಿಂದ ನಡೆದುಕೊಂಡರೆ ಎಲ್ಲವೂ ಸುಂದರವಾಗಿರುತ್ತದೆ. ವಿಜಯಕುಮಾರ ಬಂಗ ಅವರ ಬಗ್ಗೆ ಜನರು ಆಡುವ ಮಾತು ಈ ವಾಕ್ಯಕ್ಕೆ ಅರ್ಥ ಕೊಡುತ್ತದೆ ಎಂದರು.
ನಾರಾವಿ ಗ್ರಾ.ಪಂ ಅಧ್ಯಕ್ಷ ರವೀಂದ್ರ ಪೂಜಾರಿ ಬಾಂದೊಟ್ಟು ಮಾತನಾಡಿ, ವಿಜಯಕುಮಾರ ಬಂಗ ಅವರು ತಮ್ಮ ವಿಶೇಷ ಗುಣ ಮತ್ತು ಸೇವೆಯಿಂದ ಇಷ್ಟೊಂದು ಜನರ ಪ್ರೀತಿ ಗಳಿಸಿಕೊಂಡಿದ್ದಾರೆ. ಅದಕ್ಕೆ ಈ ಸಭೆಯೇ ಸಾಕ್ಷಿ. ರಾಜಕೀಯ ರಹಿತ ಮತ್ತು ಕಪ್ಪುಚುಕ್ಕೆ ಇಲ್ಲದ ಅವರ ಸೇವಾ ಅವಧಿ ಇತರರಿಗೆ ಮಾದರಿ ಎಂದರು. ಸಹಕಾರಿ ಸಂಘಗಳ ಅಭಿವೃದ್ಧಿ ಅಧಿಕಾರಿ ಸುಕನ್ಯಾ ಶುಭ ಕೋರಿದರು.
ಮೂಡಬಿದ್ರೆ ಜೈನ ಪ್ರೌಢ ಶಾಲೆಯ ಮುಖ್ಯಶಿಕ್ಷಕ ಮುನಿರಾಜ ರೆಂಜಾಳ ಅಭಿನಂದನಾ ಭಾಷಣ ನೆರವೇರಿಸಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ವಿಠಲ ಪೂಜಾರಿ, ನಿರ್ದೇಶಕರಾದ ಮಹಾವೀರ ಜೈನ್, ಪಾರ್ಶ್ವನಾಥ ಬಂಗ, ಶಾರದಾ, ಶಶಿಕಲಾ, ಜಯಪ್ರಕಾಶ್ ಹೆಗ್ಡೆ, ಸದಾನಂದ ಗೌಡ, ಲಿಂಗಪ್ಪ ಮಲೆಕುಡಿಯ, ವಲಯ ಮೇಲ್ವಿಚಾರಕ ಸಿರಾಜುದ್ದೀನ್ ಉಪಸ್ಥಿತರಿದ್ದರು.
ನಿರ್ದೇಶಕ ಸುಧಾಕರ ಭಂಡಾರಿ ಸ್ವಾಗತಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಎನ್. ಶಶಿಕಾಂತ್ ಜೈನ್ ವಂದನಾರ್ಪಣೆಗೈದರು.
ಶ್ರೇಯಾ, ಮಾನ್ಯಾ ಮತ್ತು ಸಮೃದ್ದಿ ಪ್ರಾರ್ಥನೆ ಹಾಡಿದರು. ವಿಶುಕುಮಾರ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.