ಬೆಳ್ತಂಗಡಿ: ಪ್ರವಾಹ ಸಂತ್ರಸ್ತರಿಗೆ 4 ಕಡೆ ಗಂಜಿಕೇಂದ್ರ

ಬೆಳ್ತಂಗಡಿ: ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಜನಜೀವನಕ್ಕೆ ತೊಂದರೆಯಾಗಿದ್ದು, ತಗ್ಗುಪ್ರದೇಶಗಳಲ್ಲಿ ನೆರೆನೀರಿನ ಪ್ರಮಾಣ ಹೆಚ್ಚುತ್ತಿದು, ಹಲವಾರು ಮನೆಗಳಿಗೆ ಹಾನಿಯುಂಟಾದ ಹಿನ್ನೆಲೆಯಲ್ಲಿ ಸಂತ್ರಸ್ತರಿಗೆ ಪಾಲನಾಕೇಂದ್ರ(ಗಂಜಿಕೇಂದ್ರ)ಗಳನ್ನು ತೆರೆಯಲಾಗಿದೆ.

ಚಾರ್ಮಾಡಿಯ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನ, ಇಂದಬೆಟ್ಟು ದೇವನಾರಿ ಶಾಲೆ, ಲಾಯಿಲ ಕರ್ನೋಡಿ ಶಾಲೆ, ಕಡಿರುದ್ಯಾವರ ಕುಕ್ಕಾವು ಶಾಲೆಯಲ್ಲಿ ಗಂಜಿಕೇಂದ್ರಗಳನ್ನು ತೆರೆಯಲಾಗಿದೆ. ಸಂತ್ರಸ್ತರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ವಿನಂತಿಸಲಾಗಿದೆ.

ತಾಲೂಕಿನಲ್ಲಿ ಪ್ರವಾಹದಿಂದ ಸಂತ್ರಸ್ತರಾದ ಕುಟುಂಬಗಳಿಗೆ ಮಲಗುವ ವ್ಯವಸ್ಥೆಗೆ ಬೇಕಾದ ಚಾಪೆ, ಹಾಸಿಗೆ, ಹೊದಿಕೆ, ಪ್ರಥಮ ಚಿಕಿತ್ಸೆಯ ಸಾಮಗ್ರಿಗಳು, ಸ್ಯಾನಿಟರಿ ಪ್ಯಾಡ್, ಮಕ್ಕಳ ಡೈಪರ್, ಬಿಸ್ಕೆಟ್ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಬಹಳ ಅಗತ್ಯವಾಗಿ ಬೇಕಾಗಿದೆ. ದಾನಿಗಳು ಬೆಳ್ತಂಗಡಿಯ ಮುಖ್ಯ ರಸ್ತೆಯಲ್ಲಿರುವ ಶಾಸಕರ ಸರಕಾರಿ ಕಾರ್ಯಾಲಯ ಶ್ರಮಿಕ ಕಚೇರಿಗೆ ತಲುಪಿಸಿದರೆ ಅಗತ್ಯವಿರುವ ಜನರಿಗೆ ಅಲ್ಲಿಂದ ತಲುಪಿಸಲಾಗುವುದು ಎಂದು ಶಾಸಕ ಹರಿಶ್ ಪೂಂಜ ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.

 

 

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.