HomePage_Banner_
HomePage_Banner_
HomePage_Banner_

ವರುಣನ ಅಬ್ಬರ: ಬೆಳ್ತಂಗಡಿ ತಾಲೂಕು ತ್ತತರ

ಕುಕ್ಕಾವು ಸೇತುವೆ ಸಂಪರ್ಕ ಕಡಿತ

ಬೆಳ್ತಂಗಡಿ ಗುರುದೇವ ಕಾಲೇಜು ಬಳಿ ಜಲ ಪ್ರವಾಹ

ಧರ್ಮಸ್ಥಳ ನೇತ್ರಾವತಿ ನದಿ ಕೃತಕ ನೆರೆ

ಬೆಳ್ತಂಗಡಿ: ಕಳೆದ ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಗಾಳಿ-ಮಳೆಗೆ ತಾಲೂಕಿನಾದ್ಯಂತ ಹಲವೆಡೆ ನೀರು ಉಕ್ಕಿಹರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ವಿಪರೀತ ಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ಹಲವೆಡೆ ಮರಗಳು ಮನೆ, ಕಟ್ಟಡ, ರಸ್ತೆಗಳ ಮೇಲೆ ಉರುಳಿಬಿದ್ದು, ವಾಹನ ಸಂಚಾರ, ವಿದ್ಯುತ್ ಸಂಪರ್ಕ ಕಡಿದುಹೋಗಿ ಜನರು ಪರದಾಡುವಂತಾಗಿದೆ. ಭತ್ತದ ಕೃಷಿ ಭೂಮಿ, ಅಡಿಕೆ, ತೆಂಗು ಮರಗಳು ಧರೆಗೆ ಉರುಳಿಬಿದ್ದು, ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.

ನೆರಿಯ ಗ್ರಾಮದ ಕುಡುಮಡ್ಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಆವರಣದೊಳಗೆ ಜಲಪ್ರವಾಹ ನುಗ್ಗಿದ ದೃಶ್ಯ

ಲಾಯಿಲ ಬೆಜಕ್ರೆಸಾಲ್ ಕಾಲು  ಸಂಕ

ನಡ ವೆಂಟೆಡ್ ಡ್ಯಾಮ್ ಮುಳುಗಡೆ

 

ನಿಡಿಗಲ್ ಬಳಿ ಉಕ್ಕಿ ಹರಿದ ಪ್ರವಾಹ
ಪಟ್ರಮೆ ಗ್ರಾಮದಿಂದ ಅನಾರು ಮೂಲಕ ಧರ್ಮಸ್ಥಳಕ್ಕೆ ತೆರಳುವ ರಸ್ತೆಯ ಕೂಡಿಗೆ ಎಂಬಲ್ಲಿ ನೇತ್ರಾವತಿ ನದಿಯಲ್ಲಿ ಪ್ರವಾಹ ತುಂಬಿ ಶುಕ್ರವಾರ ಬೆಳಗ್ಗೆ ಕೂಡಿಗೆ ಸೇತುವೆಯ ಮೇಲೆ ನೆರೆ ನೀರು ಹರಿಯುತ್ತಿದೆ. ಈ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು ಸೇತುವೆಯ ಒಂದು ಪಾರ್ಶ್ವದಲ್ಲಿ ವಾಹನಗಳನ್ನು ನಿಲ್ಲಿಸಿ ನಡೆದು ಇನ್ನೊಂದು ದಡ ಸೇರುತ್ತಿರುವ ಘಟನೆ ನಡೆದಿದೆ. ಧರ್ಮಸ್ಥಳ ಸ್ನಾನಘಟ್ಟದಿಂದಾಗಿ ಬರುವ ನೇತ್ರಾವತಿಗೆ ಈ ಕೂಡಿಗೆ ಎಂಬಲ್ಲಿ ನಿಡ್ಲೆಯ ಮೂಲಕ ಹರಿದು ಬರುವ ನೆರಿಯ ಹೊಳೆಯು ಸೇರುವ ಸ್ಥಳ ಕೂಡಿಗೆ ಆಗಿದ್ದು ಪ್ರವಾಹ ಅಧಿಕವಾಗಿ ಸೇತುವೆ ಮುಳುಗಡೆಯಾಗಿದೆ.

ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಬಳಿ ಕೃತಕ ನೆರೆ

ಲಾಯಿಲ ಗ್ರಾಮದ ಲಾಯಿಲಬೈಲು ಎಂಬಲ್ಲಿ ಗದ್ದೆ, ತೋಟಕ್ಕೆ ನುಗ್ಗಿದ ನೀರು ಕೊಚ್ಚಿ ಹೋದ ಕಾಲು ಸೇತುವೆ.
ಶಿರ್ಲಾಲು ಶ್ರೀ ಸತ್ಯಸಾರ ಮುಪ್ಪಣ್ಯ ದೈವಸ್ಥಾನದ ಮುಂಭಾಗದಲ್ಲಿ ಹಾಕಲಾಗಿದ್ದ ಮೇಲ್ಛಾವಣಿ ಕುಸಿತ.

 

ಶಿಶಿಲದ ಕಪಿಲಾ ನದಿಯಲ್ಲಿಯ ಕಿಂಡಿ ಅಣೆಕಟ್ಟಿನಲ್ಲಿ ಮರಗಳ ದಿಮ್ಮಿಗಳು ಸಿಲುಕಿಕೊಂಡು ನದಿ ಪ್ರವಾಹ ದೇವಳಕ್ಕೆ ಸುತ್ತುವರಿದಿದೆ. ದೇವಳಕ್ಕೆ ಇರುವ ಸಂಪರ್ಕ ಸೇತುವೆಯ ಮೇಲ್ಭಾಗದಲ್ಲೂ ನೀರಿನ ಪ್ರವಾಹ ಹರಿಯಲಾರಂಭಿಸಿದ್ದು, ದೇವಳದ ಸಮೀಪದ ಮನೆಗಳು, ತೋಟಗಳು ,ನೀರಿಂದ ಆವೃತವಾಗಿದೆ.

ಗುರಿಪಳ್ಳ ಸಂಕ

ಅಳಕೆ ಭತ್ತದ ಕೃಷಿ ಭೂಮಿ ಜಲಾವೃತ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.