ತಾಲೂಕಿನಾದ್ಯಂತ ಭಾರೀ ಮಳೆ ಅವಾಂತರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಚಾರ್ಮಾಡಿ ಕಣಿವೆ ರಸ್ತೆಯಲ್ಲಿ ವಾಹನ ಸಂಚಾರ ದುಸ್ತರ

 

ಬೆಳ್ತಂಗಡಿ: ಕಳೆದ 3 ದಿನಗಳಿಂದ ತಾಲೂಕಿನಾದ್ಯಂತ ಸುರಿದ ಎಡೆಬಿಡದ ಮಳೆ ಮತ್ತು ಗಾಳಿಗೆ ಅಪಾರ ಪ್ರಮಾಣದ ಆಸ್ತಿ ಪಾಸ್ತಿಗಳಿಗೆ ನಷ್ಟ ಉಂಟಾಗಿದೆ. ಚಾರ್ಮಾಡಿ ಕಣಿವೆ ರಸ್ತೆಯುದ್ದಕ್ಕೂ ಧರೆ ಕುಸಿತ ಹಾಗೂ ರಸ್ತೆ ಮೇಲೆ ಮಳೆ ನೀರು ಹರಿಯುತ್ತಿದ್ದ ಪರಿಣಾಮ ವಾಹನ ಸಂಚಾರ ದುಸ್ತರವಾಗಿತ್ತು. ಆ. 6 ರ ರಾತ್ರಿ ಮತ್ತು ಎರಡು ದಿನಗಳಲ್ಲಿ ಸಂಚಾರ ನಿರ್ಬಂಧಿಸಿ ಅಧಿಕಾರಿಗಳು ಆದೇಶ ನೀಡಿದರು.

ಗ್ರಾಮಾಂತರ ಪ್ರದೇಶಗಳಲ್ಲಿ ಮನೆಗಳ ಮೇಲೆ ಮುರಿದು ಬಿದ್ದ ರೆಂಬೆಗಳು:
ತಾಲೂಕಿನ ಬಹುತೇಕ ಗ್ರಾಮಾಂತರ ಪ್ರದೇಶದಲ್ಲಿ ಎಲ್ಲ ಪಂಚಾಯತ್ ವ್ಯಾಪ್ತಿಯಲ್ಲೂ ಮನೆಗಳ ಮೇಲೆ ಮರಗಳು, ರೆಂಬೆಗಳು ಉರುಳಿ ಬಿದ್ದ ಘಟನೆ ನಡೆದಿದೆ. ಕೆಲವೆಡೆ ಬೀಸಿದ ಭಾರೀ ಗಾಳಿಗೆ ಮೇಲ್ಚಾವಣಿಯ ಶೀಟ್‌ಗಳು ಹಾರಿಹೋಗಿದ್ದು ಗೋಡೆ ಒದ್ದೆಯಾಗಿ ಅಪಾಯ ಬಾಯ್ದೆರೆದಿದೆ.


ಮಲೆನಾಡಿನಲ್ಲಿ ಮಳೆ ಅಬ್ಬರ ಮುಂದುವರೆದಿದೆ. ಚಾರ್ಮಾಡಿ ಘಾಟ್, ಕೊಟ್ಟಿಗೆ ಹಾರದಲ್ಲಿ ಭಾರೀ ಮಳೆಯಾಗುತ್ತಿದ್ದು ಎಲ್ಲೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ನೇತ್ರಾವತಿ, ಪಲ್ಗುಣಿ, ಮೃತ್ಯುಂಜಯ, ಸೋಮಾವತಿ, ಕಪಿಲಾ, ನೆರಿಯ ಹೊಳೆ ಸಹಿತ ಇರುವ ನದಿಗಳು ಹಾಗೂ ಗ್ರಾಮಾಂತರ ಭಾಗದ ತೊರೆಗಳು ತುಂಬಿ ಹರಿಯುತ್ತಿದೆ.

ವಿದ್ಯುತ್ ವಯರ್‌ಗಳ ಮೇಲೆ ಹಲವೆಡೆ ಮರಗಳು ಉರುಳಿಬಿದ್ದು ಕಂಬಗಳು ಮುರಿದು ಬಿದ್ದಿದ್ದು ವಿದ್ಯುತ್ ವ್ಯತ್ಯಯವಾಗಿದೆ. ಇಲಾಖೆಗಳ ಅಧಿಕಾರಿಗಳ ಜೊತೆಗೆ ಸಮಾಜ ಸೇವಕ ಚಾರ್ಮಾಡಿ ಹಸನಬ್ಬ ಅವರ ನೇತೃತ್ವದಲ್ಲಿ ಅವರ ತಂಡ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ಸಹಾಯದಿಂದ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ತಹಶಿಲ್ದಾರ್ ಗಣಪತಿ ಶಾಸ್ತ್ರಿ, ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಕುಮಾರ್ ಪಿ.ಜಿ, ಧರ್ಮಸ್ಥಳ ಎಸ್‌ಐ ಅವಿನಾಶ್ ಗೌಡ ಈ ಪ್ರದೇಶಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಿದ್ದು ತುರ್ತು ಕಾರ್ಯಪಡೆ ರಚಿಸಿಕೊಂಡು ಸೇವೆ ಸನ್ನದ್ದವಾಗಿದ್ದಾರೆ.

ಗೇರುಕಟ್ಟೆ ಜನತಾ ಕಾಲನಿಯಲ್ಲಿ ಆಯಿಶಾ ಅವರ ಮನೆಯ ಮೇಲ್ಚಾವಣಿ ಸಿಮೆಂಟ್ ಶೀಟ್‌ಗಳು ಗಾಳಿಗೆ ಹಾರಿದ್ದು ಗೋಡೆ ಒದ್ದೆಯಾಗಿ ಅಪಾಯ ಆಹ್ವಾನಿಸುತ್ತಿದೆ. ಶೀಟ್‌ಗಳು ಪುಡಿಯಾಗಿದ್ದು ಬಡತನಲ್ಲಿರುವ ಕುಟುಂಬ ಸಮಸ್ಯೆಗೆ ಸಿಲುಕಿದೆ. ಘಟನಾ ಸ್ಥಳಕ್ಕೆ ಪಂಚಾಯತ್ ಸದಸ್ಯರು, ಗ್ರಾಮಕರಣಿಕರು ಭೇಟಿ ನೀಡಿ ಅವಲೋಕನ ನಡೆಸಿದ್ದಾರೆ.


ಮಿತ್ತಬಾಗಿಲು ಗ್ರಾಮದ ಪರಾರಿ ಉಷಾ ಫಡಕೆ ಅವರ ಮನೆಯ ಒಂದು ಪಾರ್ಶ್ವಕ್ಕೆ ಭಾರೀ ಗಾತ್ರದ ಮತ್ತು ಅಷ್ಟೇ ಹಳೆಯ ಬಿಲ್ವಪತ್ರೆ ಮರವೊಂದು ಮಗುಚಿ ಬಿದ್ದಿದೆ. ಈ ವೇಳೆ ಮನೆಯ ಬಳಿ ಕಾರು ನಿಲ್ಲಿಸುವ ಶೆಡ್ಡ್ ಮೇಲೆ ಹೆಚ್ಚಿನ ಹಾನಿಯಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಲವಂತಿಗೆ ಗ್ರಾ.ಪಂ ಅಧ್ಯಕ್ಷ ಭಾಸ್ಕರ, ಅಬಿವೃದ್ಧಿ ಅಧಿಕಾರಿ ಜಯಕೀರ್ತಿ ಎಚ್.ಬಿ, ಕಂದಾಯ ಗ್ರಾಮಲೆಕ್ಕಾಧಿಕಾರಿ ವಿಜಯ ಕುಮಾರ್ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಉಜಿರೆ: ಉಜಿರೆ ಪರಿಸರದಲ್ಲಿ ಭಾರೀ ಮಳೆ ಜೊತೆಗೆ ಗಾಳಿ ಕೂಡ ಬೀಸಿದ್ದರಿಂದ ಉಜಿರೆ ಅನುಗ್ರಹ ನಿವಾಸಿ, ಎಲ್‌ಐಸಿ ನಿವೃತ್ತ ಅಧಿಕಾರಿ ಎಂ.ಜಿ ಶೆಟ್ಟಿ ಅವರ ತೋಟದಲ್ಲಿ ಸುಮಾರು ೧೦೦ ರಷ್ಟು ಅಡಿಕೆ ಮರಗಳು ಮುರಿದುಬಿದ್ದು ಅಪಾರ ನಷ್ಟ ಉಂಟಾಗಿದೆ.
ಈ ಬಗ್ಗೆ ಗ್ರಾ.ಪಂಚಾಯತ್ ಮತ್ತು ಕಂದಾಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಫಲನೀಡುತ್ತಿದ್ದ ಅಡಿಕೆ ಮರಗಳು ಧಾರಶಾಯಿಯಾಗಿರುವುದರಿಂದ ಅಪಾರ ನಷ್ಟ ಅಂದಾಜಿಸಲಾಗಿದೆ


ಗೇರುಕಟ್ಟೆ: ವಾಸದ ಮೆನೆಯ ಮೇಲೆ ಮರ ಬಿದ್ದು ಹಾನಿಯಾದ ಘಟನೆ ಕಳಿಯ ಪಂಚಾಯತ್ ವ್ಯಾಪ್ತಿಯ ಗೇರುಕಟ್ಟೆ ಜನಾತ ಕಾಲೋನಿಯಲ್ಲಿ ನಡೆದಿದೆ. ಜಯಂತಿ ಆನಂದ ನಾಯ್ಕ್ ಅವರ ಮನೆಗೆ ರಾತ್ರಿ ವೇಳೆ ದೊಡ್ಡ ಗಾತ್ರದ ಮರವೊಂದು ಬಿದ್ದು ಮನೆ ಜಖಂಗೊಂಡಿದೆ. ಮಾಹಿತಿ ತಿಳಿದು ಸ್ಧಳಕ್ಕೆ ಕೂಡಲೇ ಕಳಿಯ ಗ್ರಾಮ ಪಂಜಾಯತ್ ಸದಸ್ಯ ಅಬ್ದುಲ್ ಕರೀಂ ಗೇರುಕಟ್ಟೆ ಇವರು ಆಗಮಿಸಿ ಮೆಸ್ಕಾಂ ಇಲಾಖೆಯನ್ನು ಸಂಪರ್ಕಿಸಿ ವಿದ್ಯುತ್ ಕಡಿತಗೊಳಿಸುವಂತೆ ಕ್ರಮ ಕೈಗೊಂಡರು. ಸ್ಥಳಕ್ಕೆ ಪಂಜಾಯತ್ ಅಧ್ಯಕ್ಷ ಶರತ್ ಕುಮಾರ್, ಸ್ದಳಿಯರಾದ ಸುರೇಶ್ ಕುಮಾರ್, ಫಯಾಝ್, ಅಶೋಕ್, ಶಿವಣ್ಣ ಆಚಾರ್ಯ, ಹುಸೈನ, ಲೋಕೇಶ, ಪುರಂದರ, ಮುಹಮ್ಮದ್ ಇವರೂ ಧಾವಿಸಿ ಅಗತ್ಯ ನೆರೆವು ನೀಡಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.