ಕೊಯ್ಯೂರು ಗ್ರಾ.ಪಂ.: ನೂತನ ಉಪಾಧ್ಯಕ್ಷರಾಗಿ ರಾಮಣ್ಣ ಗೌಡ

ಕೊಯ್ಯೂರು: ಕೊಯ್ಯೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿ ರಾಮಣ್ಣ ಗೌಡ ಜಯಶಾಲಿಯಾಗಿದ್ದಾರೆ.
ಪ್ರಸ್ತುತ ಪಂಚಾಯತ್ ಉಪಾಧ್ಯಕ್ಷರಾಗಿದ್ದ ವಿಶ್ವನಾಥ ಗೌಡ ಅವರು ರಾಜೀನಾಮೆ ಸಲ್ಲಿಸಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣಾಧಿಕಾರಿಯಾಗಿ, ತಹಶಿಲ್ದಾರ್ ಗಣಪತಿ ಶಾಸ್ತ್ರಿ ಅವರು ಪ್ರಕ್ರಿಯೆ ನಡೆಸಿಕೊಟ್ಟರು. ಚುನಾವಣೆ ವೇಳೆ ನಾರಾಯಣ ಗೌಡ ಮತ್ತು ರಾಮಣ್ಣ ಗೌಡ ಎಂಬಿಬ್ಬರು ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣೆ ನಡೆದು ಈ ಪೈಕಿ ರಾಮಣ್ಣ ಗೌಡರು ೮ ಮತಗಳನ್ನು ಪಡೆದರೆ ಸಮೀಪದ ಪ್ರತಿಸ್ಪರ್ಧಿ ನಾರಾಯಣ ಗೌಡರು 5 ಮತಗಳನ್ನಷ್ಟೇ ಪಡೆದು ಪರಾಭವಗೊಂಡರು. ಚುನಾವಣಾ ಪೂರ್ವ ಒಪ್ಪಂದಂತೆ ಬಿಜೆಪಿ ಬೆಂಬಲಿತರಾದ ವಿಶ್ವನಾಥ ಗೌಡ ಅವರು ತಮ್ಮ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರಿಂದ ಸ್ಥಾನ ತೆರವಾಗಿತ್ತು.
ಪಕ್ಷ ಬೆಂಬಲಿತ ಬಲಾಬಲ:
ಪಂಚಾಯತ್‌ನಲ್ಲಿ ಒಟ್ಟು 13 ಸ್ಥಾನಬಲವಿದ್ದು ಈ ಪೈಕಿ 12 ಮಂದಿ ಬಿಜೆಪಿ ಬೆಂಬಲಿತರು ಮತ್ತು ಕಾಂಗ್ರೆಸ್‌ನ ಏಕೈಕ ಸದಸ್ಯರು ಆರಿಸಿ ಬಂದಿದ್ದರು. ಉಪಾಧ್ಯಕ್ಷರ ಆಯ್ಕೆಯ ವೇಳೆ ಬಿಜೆಪಿ ಪಕ್ಷದೊಳಗಿನ ಸದಸ್ಯರ ನಡುವೆ ಆಗಿದ್ದ ಒಳ ಒಪ್ಪಂದದಂತೆ ಉಪಾಧ್ಯಕ್ಷರಾಗಿ ಆರಂಭಿಕ ಹಂತದಲ್ಲಿ ವಿಶ್ವನಾಥ ಗೌಡ ಅವರು ಅಧಿಕಾರವಹಿಸಿಕೊಂಡಿದ್ದರು. ಬಳಿಕ ಅವರು ರಾಜೀನಾಮೆ ಸಲ್ಲಿಸಿ ನಾರಾಯಣ ಗೌಡರಿಗೆ ಅವಕಾಶ ಮಾಡಿಕೊಡುವುದೆಂದು ನಿರ್ಧಾರವಾಗಿತ್ತು. ಆದರೆ ಬಳಿಕ ನಡೆದ ರಾಜಕೀಯ ವಿದ್ಯಮಾನಗಳಲ್ಲಿ ಪಕ್ಷ ಸೂಚಿತ ಅಭ್ಯರ್ಥಿ ನಾರಾಯಣ ಗೌಡರ ವಿರುದ್ಧ ರಾಮಣ್ಣ ಗೌಡ ಅವರು ಬಂಡಾಯವಾಗಿ ಸ್ಪರ್ಧಿಸಿದ್ದರು.

ಗ್ರಾ.ಪಂ ಅಧ್ಯಕ್ಷೆ, ಉಪಾಧ್ಯಕ್ಷ ಸಹಿತ 7 ಮಂದಿಯನ್ನು ಬಿಜೆಪಿಯಿಂದ ಅಮಾನತು
ಈ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಸೂಚಿತ ಅಭ್ಯರ್ಥಿ ನಾರಾಯಣ ಗೌಡ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ ರಾಮಣ್ಣ ಗೌಡ, ಪಕ್ಷದ ಸೂಚನೆ ತಿರಸ್ಕರಿಸಿ ಬಂಡಾಯ ಅಭ್ಯರ್ಥಿಗೆ ಮತದಾನ ಮಾಡಿದ ಗ್ರಾ.ಪಂ ಅಧ್ಯಕ್ಷೆ ಶಶಿಕಲಾ ವಿ.ಎನ್, ಸದಸ್ಯರುಗಳಾದ ಪುಷ್ಪಾ, ವಾರಿಜಾ, ವಿಶ್ವನಾಥ ಗೌಡ, ಸೇಸಪ್ಪ ಮತ್ತು ಕೊರಗಪ್ಪ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದಿಂದ ಅಮಾನತುಗೊಳಿಸಿ, ಮುಂದಿನ ಶಿಸ್ತು ಕ್ರಮಕ್ಕಾಗಿ ಜಿಲ್ಲಾಧ್ಯಕ್ಷರಿಗೆ ವರದಿ ಸಲ್ಲಿಸಿರುವುದಾಗಿ ಬಿಜೆಪಿ ಪಕ್ಷದ ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.